ಶೇಖರಗೌಡ ಮಾಲಿಪಾಟೀಲರಿಗೆ ಸಮನ್ವಯಸಿರಿ ರಾಷ್ಟ್ರೀಯ ಪ್ರಶಸ್ತಿ

Get real time updates directly on you device, subscribe now.

  • ಕೊಪ್ಪಳ: ಶ್ರೀಶೈಲ ಜಗದ್ಗುರು ಲಿಂ. ವಾಗೀಶ ಪಂಡಿತಾರಾಧ್ಯ ಶಿವಾಚರ‍್ಯ ಮಹಾಸ್ವಾಮಿಗಳವರ ಸಂಸ್ಮರಣೀಯ ‘ಸಮನ್ವಯಸಿರಿ ರಾಷ್ಟ್ರೀಯ ಪ್ರಶಸ್ತಿ-೨೦೨೧’ ಜಿಲ್ಲೆಯ ಸಹಕಾರಿ ಧುರೀಣ ಹಾಗೂ ಸಮಾಜ ಸೇವಕ ಶೇಖರಗೌಡ ಮಾಲಿ‌ಪಾಟೀಲ್ ಅವರಿಗೆ ಒಲಿದಿದೆ.

ಪ್ರಶಸ್ತಿ ಸ್ವೀಕರಿಸುವಂತೆ ಹರಿಹರದ ಜಗದ್ಗುರು ಪಂಚಾಚರ‍್ಯ ವಿಶ್ವರ‍್ಮ ವಿದ್ಯಾಪೀಠದಿಂದ ಆಹ್ವಾನಿಸಲಾಗಿದೆ.
ರ‍್ವ ಜನಾಂಗಗಳ ಹಾಗೂ ಮತ-ರ‍್ಮಗಳ ಮಧ್ಯೆ ‘ಸಮನ್ವಯ ಆಚರ‍್ಯರೆಂದೇ ಗುರುತಿಸಿಕೊಂಡಿದ್ದ, ಶ್ರೀಶೈಲ ಜಗದ್ಗುರು ಲಿಂ. ವಾಗೀಶ ಪಂಡಿತಾರಾಧ್ಯರ ಸ್ಮರಣೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪ್ರತಿಷ್ಠಾಪಿಸಿ, ಪ್ರತಿ ರ‍್ಷವೂ ವಿವಿಧ ಕ್ಷೇತ್ರಗಳಲ್ಲಿನ ಸಾಧಕರ ವಿವರಗಳನ್ನು ಪರಾರ‍್ಶಿಸಿ ಧರ‍್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯ ಮತ್ತು ವಿವಿಧ ಕ್ಷೇತ್ರಗಳಿಗೆ ವಿಶಿಷ್ಠವಾದ ಸೇವೆಯನ್ನು ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.
ಅಂತೆಯೇ ೨೦೨೧ ನೇ ಸಾಲಿನ ‘ಸಮನ್ವಯಸಿರಿ ರಾಷ್ಟ್ರೀಯ ಪ್ರಶಸ್ತಿಗೆ ಕುಷ್ಟಗಿ ತಾಲೂಕಿನ ಶೇಖರಗೌಡ ಮಾಲಿ ಪಾಟೀಲ್ ಅವರನ್ನು ಶ್ರೀ ಶ್ರೀ ಶ್ರೀ ೧೦೦೮ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚರ‍್ಯ ಮಹಾಸ್ವಾಮೀಜಿ ನಾಮನರ‍್ದೇಶನ ಮಾಡಿ ಆಶರ‍್ವದಿಸಿದ್ದಾರೆ.
ವಿದ್ಯಾಪೀಠದ ಆಡಳಿತ ಮಂಡಳಿ ಮತ್ತು ಎಲ್ಲಾ ಸದಸ್ಯರ ಆಶಯದಂತೆ “ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸಮನ್ವಯಸಿರಿ ಪ್ರಶಸ್ತಿ-೨೦೨೧”ಯನ್ನು ಪ್ರದಾನ ಮಾಡಲು ತರ‍್ಮಾನಿಸಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ.೩೦ರಂದು ಬೆಳಗ್ಗೆ ೧೧.೦೦ಕ್ಕೆ ದಾವಣಗೆರೆ ಜಿಲ್ಲೆಯ ಹರಿಹರ ನಗರದ ವಿದ್ಯಾಪೀಠದ ಆವರಣದಲ್ಲಿರುವ ‘ಸಮನ್ವಯಸಿರಿ ವಾಗೀಶ ಪಂಡಿತಾರಾಧ್ಯ ವೇದಿಕೆ’ಯಲ್ಲಿ ಆಯೋಜಿಸಲಾಗಿದ್ದು, ಶೇಖರಗೌಡ ಮಾಲಿ ಪಾಟೀಲ್ ಅರಿಗೆ ಕುಟುಂಬ ಸಮೇತರಾಗಿ ಸಮಾರಂಭಕ್ಕೆ ಆಗಮಿಸಿ ಮಹಾಸನ್ನಿಧಿಯವರಿಂದ ಪ್ರಶಸ್ತಿಯನ್ನು ಸ್ವೀಕರಿಸಿ ಪೂಜ್ಯರ ಕೃಪಾಶರ‍್ವಾದಗಳಿಗೆ ಪಾತ್ರರಾಗಬೇಕೆಂದು ಕೋರಲಾಗಿದೆ.

Get real time updates directly on you device, subscribe now.

Comments are closed.

error: Content is protected !!
%d bloggers like this: