ಮನುಷ್ಯತ್ವ ಜಾಗೃತಗೊಳಿಸಲು ಪ್ರಾರ್ಥನೆ ಅವಶ್ಯಕ – ಸಿವಿಸಿ

Get real time updates directly on you device, subscribe now.

CVC wishes Muslim brothers  a happy Ramadan

ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಕೋರಿದ ಸಿವಿಸಿ

ಕೊಪ್ಪಳ: ಮನುಷ್ಯತ್ವವನ್ನು ಜಾಗೃತಗೊಳಿಸುವ ಶಕ್ತಿ ಪ್ರಾರ್ಥನೆಗೆ ಇದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ತಿಳಿಸಿದರು.

ರಂಜಾನ್ ಹಬ್ಬದ ಪ್ರಯುಕ್ತ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ ಮುಸ್ಲಿಂ ಬಾಂಧವರಿಗೆ ಶುಭಕೋರಿ ಅವರು ಮಾತನಾಡಿದರು.

“ಮಾನವಕುಲದ ಒಳಿತಿಗೆ ಪ್ರಾರ್ಥನೆ ಅವಶ್ಯ. ಭ್ರಾತೃತ್ವ, ಅಂತಃಕರಣ ಹಾಗೂ ನಿಷ್ಕಲ್ಮಶ ಜೀವಪರ ಪ್ರೀತಿಯನ್ನು ಪ್ರಾರ್ಥನೆ ಸೃಷ್ಟಿಸುತ್ತದೆ. ಮನುಷ್ಯರಲ್ಲಿ ನೈತಿಕ ಶಕ್ತಿಯನ್ನು ತುಂಬಿ ಸರಿ ದಾರಿಯಲ್ಲಿ ನಡೆಯುವಂತೆ ಹಾಗೂ ಶಾಂತಿ ಮತ್ತು ನೆಮ್ಮದಿಯಿಂದ ಬಾಳುವಂತೆ ಪ್ರೇರೇಪಿಸುತ್ತದೆ,” ಎಂದರು.

ಮಾನವೀಯತೆಯಿಂದ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳುವುದು ಅವಶ್ಯ. ಭಾರತ ದೇಶ ವಿವಿಧ ಜಾತಿ ಸಂಸ್ಕೃತಿಗಳಿಂದ ಕೂಡಿದೆ. ವಿವಿಧತೆಯಲ್ಲಿ ಏಕತೆಯಿರುವ ನಮ್ಮ ದೇಶದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕು. ಯಾವುದೇ ಧರ್ಮವೂ  ದ್ವೇಷವನ್ನು ಬೋಧಿಸುವುದಿಲ್ಲ. ಎಲ್ಲ ಧರ್ಮಗಳೂ ಪ್ರೀತಿಯನ್ನು ಬೋಧಿಸುತ್ತವೆ. ಶಾಂತಿ ಮತ್ತು ನೆಮ್ಮದಿ ಸಕಲ ಧರ್ಮಗಳ ಸಾರ. ನಾವೆಲ್ಲರೂ ಇದನ್ನು ಪಾಲಿಸಬೇಕು ಎಂದು ಹೇಳಿದರು.

ಕೊಪ್ಪಳದ ಮುಸ್ಲಿಂ ಧರ್ಮ ಗುರುಗಳಾದ ಖಾಜಿ ಮೊಹಮ್ಮದ್ ಅಬ್ಬಾಸ್ ಅಲಿ ಹಾಗೂ ಹಾಫೀಜ್ ಮೊಹಮ್ಮದ್ ಆಸೀಫ್ ರಜಾ, ಹಾಫೀಜ್ ಮೊಹಮ್ಮದ್ ಇಸಾಕ್ ಖಾಜಿಯವರು ಸಿ ವಿ ಚಂದ್ರಶೇಖರ್ ಅವರನ್ನು ಸನ್ಮಾನಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಓಬಿಸಿ ಅಧ್ಯಕ್ಷರಾದ ಕರಿಯಪ್ಪ ಹಾಲವರ್ತಿ  ಜೆಡಿಎಸ್ ಜಿಲ್ಲಾ ಕೈಗಾರಿಕಾ ಘಟಕದ ಅಧ್ಯಕ್ಷ ಮಾರುತಿ ಗೌಡ ಪೊಲೀಸ್ ಪಾಟೀಲ್, ಜಿಲ್ಲಾ ಕ್ರೀಡಾ ವಿಭಾಗದ ಅಧ್ಯಕ್ಷ ಸೈಯದ್ ಮಹೇಮೂದ್ ಹುಸೇನಿ ಬಲ್ಲೆ, ನಗರ ಅಧ್ಯಕ್ಷ ಸೋಮನಗೌಡ ಹೊಗರನಾಳ, ಯುವ  ಘಟಕದ ಅಧ್ಯಕ್ಷ ಕಲಿಲ್, ಯುವ ಮುಖಂಡರಾದ ಸಲೀಮ್,  ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಏಣಿಗಿ ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!