ರಂಜಾನ್ ಹಬ್ಬದ ಶುಭಾಶಯ ಕೋರಿದ ಡಾ.ಕೆ.ಎಂ.ಸೈಯದ್

ಕೊಪ್ಪಳ : ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ನಗರದ ಈದ್ಗಾ ಮೈದಾನದಲ್ಲಿ ಶನಿವಾರ ಮುಸ್ಲಿಂ ಬಾಂಧವರು ಶ್ರದ್ಧಾ-ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬೆಳಗ್ಗೆ ಈದ್ದಾ ಮೈದಾನದಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸಿ ಅಲ್ಲಾಹನನ್ನು ಸ್ಮರಿಸಿದರು.
ಬಳಿಕ ಕೆಪಿಸಿಸಿ ಸಂಯೋಜಕ ಡಾ.ಕೆ.ಎಂ.ಸೈಯದ್ ಅವರು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಸಂಸದ ಕೆ ರಾಜಶೇಖರ ಹಿಟ್ನಾಳ್, ಹಿರಿಯ ನ್ಯಾಯವಾದಿ ಆಸಿಫ್ ಅಲಿ,ಡಾ.ಮಹೇಶ್ ಗೋವನ ಕೊಪ, ಮುಖಂಡ ಯಮನೂರಪ್ಪ ನಾಯಕ್ ಅವರಿಗೆ ರಂಜಾನ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
Comments are closed.