ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ನಗರಸಭೆ ಸದಸ್ಯ ರಾಜಶೇಖರಗೌಡ ಆಡೂರ
ಕೊಪ್ಪಳ : ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಗರಸಭೆಯ ಆರೋಗ್ಯ ಅಧಿಕಾರಿಯನ್ನು ನಗರಸಭೆ ಸದಸ್ಯ ರಾಜಶೇಖರಗೌಡ ಆಡೂರ ಅವರು ಹಿಗ್ಗಾ-ಮುಗ್ಗ ತರಾಟೆಗೆ ತೆಗೆದುಕೊಂಡರು.
ನಗರದ ೧೧ನೇ ವಾರ್ಡ್ಗೆ ಚರಂಡಿ ಸ್ವಚ್ಛತೆ, ವಾರ್ಡಿನ ಸ್ವಚ್ಛತೆ, ಸೇರಿದಂತೆ ವಾರ್ಡಿನ ಕೆಲಸ-ಕಾರ್ಯಗಳಿಗೆ ಎಷ್ಟು ಜನ ಪೌರ ಕಾರ್ಮಿಕರನ್ನು ಕಳಿಸಿದ್ದೀರಿ? ಎಂಬ ನಗರಸಭೆ ರಾಜಶೇಖರಗೌಡ ಆಡೂರ ಪ್ರಶ್ನೆಗೆ ನಗರಸಭೆಯ ಆರೋಗ್ಯ ಅಧಿಕಾರಿ ವಿಶ್ವನಾಥ ಕಳಿಸಿಲ್ಲ ಸರ್ ಎಂಬ ಉತ್ತರಕ್ಕೆ ಏಕೆ ೧೧ನೇ ವಾರ್ಡಿನ ಜನತೆ ನಗರಸಭೆಗೆ ತೆರಿಗೆ ತುಂಬಲ್ಲ ? ಪೌರಕಾರ್ಮಿಕ ವೇತನಕ್ಕಾಗಿ ಸುಮಾರು ೪೦ ಲಕ್ಷ ರೂ ಖರ್ಚು ಮಾಡುವುದಾಗಿ ಹೇಳುತ್ತೀರಿ ಆ ವಾರ್ಡ್ ನಗರಸಭೆಗೆ ಸಂಬAಧವಿಲ್ಲ? ಅದಕ್ಕೆ ನಗರಸಭೆ ಸದಸ್ಯರಿಲ್ಲ? ಅದರಲ್ಲಿ ನಗರದ ದೊಡ್ಡ ಮಾರ್ಕೆಟ್ ಜೆ.ಪಿ.ಮಾರ್ಕೇಟ್‌ಈ ವಾರ್ಡಿನಲ್ಲಿ ಬರುತ್ತದೆ ನಿತ್ಯ ಸ್ವಚ್ಛತೆ ಇರಬೇಕು ಇಲ್ಲಿ ಕಾರ್ಮಿಕರ ಅವಶ್ಯಕತೆ ಇಲ್ಲವಾ? ವಾರ್ಡಿನ ಜನತೆಗೆ ನಾನು ಏನು ಉತ್ತರ ನೀಡಲಿ ? ಎಂದಾಗ ಆರೋಗ್ಯ ಅಧಿಕಾರಿಯು ತಡವರಿಸಿ ಇಲ್ಲ ಸರ್ ನಗರಸಭೆ ಅಧ್ಯಕ್ಷರ ಸೂಚನೆ ಮೇರೆಗೆ ಕಾರ್ಮಿಕರನ್ನು ವಾರ್ಡಿಗಳಿಗೆ ಕಳಿಸುವುದಾಗಿ ತಿಳಿಸಿದರು ನಂತರ ಪೌರಾಯುಕ್ತರು ಮಧ್ಯ ಪ್ರವೇಶಿಸಿ ಎಲ್ಲಾ ವಾರ್ಡ್ಗಳಿಗೆ ಯಾವುದೇ ತಾರತಮ್ಯ ಇಲ್ಲದೇ ಕಾರ್ಮಿಕರನ್ನು ಕಳಿಸಲು ಸೂಚನೆ ನೀಡಿದರು.
ಖಾತೆ ವರ್ಗಾವಣೆ : ಕು. ತೇಜಶ್ವಿನಿ ತಂದೆ ನೀಲಕಂಠಗೌಡ ಪಾಟೀಲ್ ಉರ್ಫ್ ಸುರೇಶಗೌಡ ಪಾಟೀಲ್ ಎಂಬುವರು ದಿ.೦೮-೦೮-೨೦೨೨ ರಂದು ನಿವೇಶನಗಳನ್ನು ತಾಯಿ ಹೆಸರಿನಲ್ಲಿದ್ದು ಅವರ ನಿಧನರಾದರು ಈಗ ಅವುಗಳನ್ನು ಖಾತಾ ವರ್ಗಾವಣೆ ಮಾಡಿಕೊಡಲು ಅರ್ಜಿ ನೀಡಿದರು ಅವುಗಳನ್ನು ವರ್ಗಾವಣೆ ಏಕೆ ಮಾಡುತ್ತೀಲ್ಲ ? ಅರ್ಜಿದಾರರು ತಂದೆ-ತಾಯಿಗೆ ಒಬ್ಬಳೇ ಮಗಳು ಹೀಗಾಗಿ ಇದನ್ನು ವರ್ಗಾವಣೆ ಮಾಡಲು ಏನು ತೊಂದರೆ ? ನೋಡಿ ಆದೇಶ ಪ್ರತಿ ಎಂದು ಪೌರಾಯುಕ್ತರನ್ನು ಪ್ರಶ್ನೆ ಮಾಡಿದರು ಅವರು ಖಾತೆ ಕೂಡಲೇ ವರ್ಗಾವಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರಡ್ಡಿ ಭೂಮಕ್ಕನವರ್ ವಹಿಸಿದ್ದರು.ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಪೌರಾಯುಕ್ತ ಗಣಪತಿ ಪಾಟೀಲ್, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.
Comments are closed.