ಸರ್ವರಿಗೂ ಅವಕಾಶ ನೀಡಿದ ಬಜೆಟ್, ಜಿಲ್ಲೆಗೆ ಇನ್ನಷ್ಟು ಬೇಕಿತ್ತು : ಜ್ಯೋತಿ

ಕೊಪ್ಪಳ: ಬರೋಬ್ಬರಿ 4.48 ಲಕ್ಷ ಕೋಟಿಯ ಬಜೆಟ್ ಒಂದು ದಾಖಲೆ ಆದರೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ 17 ನೇ ಬಜೆಟ್ ಮಂಡಿಸಿ ಎಂದಿಗೂ ಮುರಿಯದ ಸಾರ್ವಕಾಲಿಕ ಇತಿಹಾಸ ನಿರ್ಮಿಸಿದ್ದಾರೆ. ಕಾಂಗ್ರೆಸ್ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಸರಕಾರ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳುವ ಜೊತೆಗೆ ಹೊಸ ನಿಗಮಗಳ ರಚನೆ, ವಿನೂತನ ಯೋಜನೆಗಳು, 56 ಸಾವಿರ ಸರಕಾರಿ ಉದ್ಯೋಗ ಭರ್ತಿ ಸೇರಿದಂತೆ ಸಮತೋಲನ ಬಜೆಟ್ ಮಂಡಿಸಿದ್ದಾರೆ. ಕೊಪ್ಪಳಕ್ಕೆ ಕ್ಯಾನ್ಸರ್ ಆಸ್ಪತ್ರೆ, ಕೆರೆ ತುಂಬಿಸುವ ಯೋಜನೆ, ಹಾಸ್ಟೆಲ್ ಸೇರಿ ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ಆದರೆ ಜಿಲ್ಲೆಗೆ ಇನ್ನಷ್ಟು ನಿರೀಕ್ಷೆಗಳು ಇದ್ದರೂ ಮುಂದಿನ ಎರಡು ಮೂರು ತಿಂಗಳಲ್ಲಿ ಅವುಗಳನ್ನು ಈಡೇರಿಸಬಹುದು ಎಂಬ ಭರವಸೆ ಇದೆ.
ಜ್ಯೋತಿ ಎಂ. ಗೊಂಡಬಾಳ
ಜಿಲ್ಲಾಧ್ಯಕ್ಷರು,
ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್
Comments are closed.