ನಗರಕ್ಕೆ ನಿಖಿಲ್ ಕುಮಾರಸ್ವಾಮಿ

ಕೊಪ್ಪಳ: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮಾರ್ಚ್ 1 ರಂದು ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಲಿದ್ದಾರೆ ಎಂದು ಪಕ್ಷದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಅಂದು ಸಂಜೆ 4 ಗಂಟೆಗೆ ಆಗಮಿಸಲಿರುವ ಅವರು ಗವಿಮಠಕ್ಕೆ ಭೇಟಿ ನೀಡಲಿದ್ದಾರೆ. ಪಕ್ಷದ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಆಯೋಜನೆಗೊಂಡಿರುವ ಬೈಕ್ ರ್ಯಾಲಿಗೆ ಚಾಲನೆ ನೀಡಿ ಸಂಜೆ 6 ಗಂಟೆಗೆ ಶ್ರೀ ಶಿವಶಾಂತವೀರ ಮಂಗಳ ಭವನದಲ್ಲಿ ನಡೆಯಲಿರುವ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ಶಾಸಕರುಗಳಾದ ನೇಮಿರಾಜ್ ನಾಯಕ್, ಶರಣಬಸವ ಕಂದುಕೂರ, ಕರೆಮ್ಮ ನಾಯಕ, ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಬಂಡೆಪ್ಪ ಕಾಶಂಪುರ್,
ಮಾಜಿ ವಿಧಾನ ಪರಿಷತ್ ಸದಸ್ಯ ಹನುಮಂತಪ್ಪ ಆಲ್ಕೋಡ್,
ಮಾಜಿ ಶಾಸಕರುಗಳಾದ ರಾಜು ಗೌಡ, ಸುರೇಶ್ ಬಾಬು, ಮುಖಂಡರುಗಳಾದ ದೊಡ್ಡಪ್ಪಗೌಡ ನರಿಬೋಳ್, ರಾಜಾ ವೆಂಕಟಪ್ಪ ನಾಯಕ್, ರಾಜು ನಾಯಕ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.