ಬಿಜೆಪಿ ಕೊಪ್ಪಳ ನಗರ ಮಂಡಲ ಹಾಗೂ ಗ್ರಾಮೀಣ ಮಂಡಲ ಅಧ್ಯಕ್ಷರ ನೇಮಕ
ಭಾರತೀಯ ಜನತಾ ಪಕ್ಷದ ಕೊಪ್ಪಳ ಜಿಲ್ಲೆಯ ಕೊಪ್ಪಳನಗರ ಮತ್ತು ಕೊಪ್ಪಳಗ್ರಾಮೀಣ ಮಂಡಲ ಅಧ್ಯಕ್ಷರ ನೇಮಕ ಮಾಡಿ ಜಿಲ್ಲಾಧ್ಯಕ್ಷ ಬಸವರಾಜ ದಡೆಸುಗುರ ಆದೇಶ ಹೊರಡಿಸಿದ್ದಾರೆ.

ರಾಜ್ಯಾಧಕ್ಷರ ಸೂಚನೆಯ ಮೇರೆಗೆ ಅಮರೇಶ ಮುರಳಿ. ಕೊಪ್ಪಳನಗರ ಮಂಡಲ ಹಾಗೂ ವೀರೇಶ ಸಜ್ಜನ ಕೊಪ್ಪಳ ಗ್ರಾಮೀಣ ಮಂಡಲ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ತಮಗೆ ನೀಡಿರುವ ಈ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಪಕ್ಷದ ಸಂಘಟನೆಗೆ ಕ್ರೀಯಾಶೀಲ ಕೊಡುಗೆ ನೀಡುವಿರೆಂಬ ನಿರೀಕ್ಷೆಗಳೊಂದಿಗೆ ಶುಭ ಹಾರೈಸುತ್ತೇನೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೆಸುಗುರ ಆದೇಶದಲ್ಲಿ ಹೇಳಿದ್ದಾರೆ.
Comments are closed.