ಇಂದಿನಿಂದ ಐತಿಹಾಸಿಕ ಪ್ರಸಿದ್ಧ ಮರ್ದಾನೆ ಗೈಬ್ ದರ್ಗಾದ ಉರುಸ್ ಆಚರಣೆ : ಎಂ.ಪಾಷಾ ಕಾಟನ್
ಕೊಪ್ಪಳ : ನಗರದ ಧಾರ್ಮಿಕ ಐತಿಹಾಸಿಕ ಪ್ರಸಿದ್ಧ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಪ್ರತೀಕ ಹಜರತ್ ಸೈಯದ್ ಮರ್ದಾನೆ ಗೈಬ್(ರಆ) ದರ್ಗಾದ ಉರುಸ್ ಆಚರಣೆ ದಿ, 06 ಶುಕ್ರವಾರ ದಂದು ಜರುಗಲಿದೆ ಎಂದು ದರ್ಗಾ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಸಮಾಜದ ಮುಖಂಡ ಎಂ ಪಾಷಾ ಕಾಟನ್ ಹೇಳಿದರು.

ಅವರು ಪತ್ರಿಕಾ ಭವನ ದಲ್ಲಿ ಗುರುವಾರ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಡಗರ ಸಂಭ್ರಮದಿಂದ ಮತ್ತು ಅರ್ಥಪೂರ್ಣವಾಗಿ ಉರುಸ ಆಚರಣೆ ನಡೆಯಲಿದೆ ,ಅದೇ ದಿನ ಸಂಜೆ ವೇಳೆಗೆ ಬಹಿರಂಗ ಸಭೆ ಧಾರ್ಮಿಕ ಪ್ರವಚನ ರಾಷ್ಟ್ರೀಯ ಭಾವೈಕ್ಯತೆಯ ಕಾರ್ಯಕ್ರಮಗಳು ಜರುಗಲಿವೆ. ಇದರಲ್ಲಿ ಕಲಬುರ್ಗಿಯ ಖಾಜಾ ಬಂದ ನವಾಜ್ ದರ್ಗಾದ ಪೀಠಾಧಿಪತಿ ಹಾಗೂ ಧರ್ಮ ಗುರು ಹಜರತ್ ಸೈಯದ್ ಶಾ ಅಲಿ ಅಲ್ ಹುಸೇನಿ ಸಾಹೇಬರು ಮತ್ತು ಕೊಪ್ಪಳದ ಮುಫ್ತಿ ಮೌಲಾನ ಮೊಹಮ್ಮದ್ ನಜೀರ್ ಅಹಮದ್ ಖಾದ್ರಿ ತಸ್ಕಿನಿ ರವರು ಸೇರಿದಂತೆ ಶ್ರೀ ಗವಿಮಠದ ಪರಮಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಪಾಲ್ಗೊಂಡು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಹಾಗೂ ಕಾರ್ಯ ಕ್ರಮ ದಲ್ಲಿ ಆಶೀರ್ವಚನ ಮಾಡಲಿದ್ದಾರೆ,
ಸಮಾರಂಭದಲ್ಲಿ ಸಚಿವರುಗಳಾದ ಜಮೀರ್ ಅಹಮದ್ ಖಾನ್, ಶಿವರಾಜ್ ತಂಗಡಗಿ ,ಸಂಸದ ಕೆ ರಾಜಶೇಖರ ಹಿಟ್ನಾಳ, ಶಾಸಕ ಕೆ ರಾಘವೇಂದ್ರ ಹಿಟ್ನಾಳ ,ಸೇರಿದಂತೆ ಇತರ ಜನ ಪ್ರತಿನಿಧಿಗಳು ವಿವಿಧ ರಾಜಕೀಯ ಗಣ್ಯರು ಅಲ್ಲದೆ ಜಿಲ್ಲಾಧಿಕಾರಿಗಳು ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ದರ್ಗಾ ಕಮಿಟಿಯ ಅಧ್ಯಕ್ಷ ಹಾಗೂ ಸಮಾಜದ ಮುಖಂಡ ಎಂ ಪಾಷಾ ಕಾಟನ್ ವಿವರಿಸಿದರು, ಹಾಗೂ ಸದರಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಪಾಲ್ಗೊಂಡು ಉರುಸ್ ಆಚರಣೆ ಕಾರ್ಯಕ್ರಮ ಮತ್ತು ಧರ್ಮ ಗುರುಗಳ ಆಶೀರ್ವಚನ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು,
ಈ ಸಂದರ್ಭ ದಲ್ಲಿ ಸಂಘಟಕರಾದ ಅಯ್ಯೋಬ ಆಡ್ಡೆವಾಲೆ, ಮುನೀರ್ ಅಹ್ಮದ್, ಇಕ್ಬಾಲ್ ಅಹಮದ್ ಸಿದ್ದಿಕಿ ,ಎಂ ,ಮಾನ್ವಿ ಪಾಷಾ ಮತ್ತು ನಜೀರ್ ಅಹ್ಮದ್ ಅದೋನಿ ಮುದುಗಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು,
Comments are closed.