ಕ.ಸಾ.ಪ ದತ್ತಿ ಪ್ರಶಸ್ತಿ ಪ್ರಕಟ : ಶಿವನಗೌಡ ಪೋಲೀಸ್ ಪಾಟೀಲ್, ಪಿ. ಎಸ್.ಅಮರದೀಪ್, ಜಯಶ್ರೀ ಹಕ್ಕಂಡಿ, ಗೀತಾ ಎನ್.ಮಲ್ಲನಗೌಡ ಆಯ್ಕೆ

ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ತಾಲೂಕಾ ಘಟಕವು ಪ್ರಕಟಿಸುವ ದಿ. ಮರಿಗೌಡ ಮಲ್ಲನಗೌಡರ ಅವರ ಹೆಸರಿನಲ್ಲಿ ಡಾ. ಮಹಾಂತೇಶ ಮಲ್ಲನಗೌಡರ ನೀಡುವ ಕೊಪ್ಪಳ ಜಿಲ್ಲಾ ಲೇಖಕರ ಬರಹಗಳಿಗೆ ಪ್ರಕಟಿಸುವ ದತ್ತಿ ಪ್ರಶಸ್ತಿ ಸಾಹಿತಿ ಶಿವನಗೌಡ ಪೋಲೀಸ್ ಪಾಟೀಲ್ ಅವರ ಛಲಬಿಡದ ಸಾಧಕಿಯರು ಸಂಕಲನ ಹಾಗೂ
ಪಿ. ಎಸ್.ಅಮರದೀಪ್ ಅವರ ಮರಳಿ ಮನೆ ಸಾಗಿದೆ ಸಂಕಲನ ಕೃತಿಗೆ ಹಾಗೂ ಜಿಲ್ಲಾ ಮಹಿಳಾ ಬರಹಗಾರರಿಗೆ ನೀಡುವ ಅಂದಮ್ಮ ಮರಿಗೌಡ ಮಲ್ಲನಗೌಡರ ಅವರ ಹೆಸರಿನಲ್ಲಿ ನೀಡುವ ದತ್ತಿ ಪ್ರಶಸ್ತಿಗೆ ಶ್ರೀಮತಿ ಜಯಶ್ರೀ ಹಕ್ಕಂಡಿ ಅವರ ಉಲಿದಷ್ಟೇ ದನಿ ಕವಿತೆಗಳ ಸಂಕಲನ ಹಾಗೂ ಶ್ರೀಮತಿ ಗೀತಾ ಎನ್ ಮಲ್ಲನಗೌಡ ಅವರ ವಚನ ಸಿರಿ ಆಧುನಿಕ ವಚನಗಳ ಸಂಕಲನಕ್ಕೆ ಆಯ್ಕೆಯಾಗಿದ್ದಾರೆ. ಈ ಬಾರಿ ಎರಡೂ ಪ್ರಶಸ್ತಿಗಳು ತಲಾ ಇಬ್ಬರು ಆಯ್ಕೆಯಾಗಿರುವುದು ವಿಶೇಷ ಎಂದು ಕೊಪ್ಪಳ ತಾಲೂಕಾ ಕಸಾಪ ಘಟಕದ ಅಧ್ಯಕ್ಷರಾದ ರಾಮಚಂದ್ರಗೌಡ ಗೊಂಡಬಾಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೂರವಾಣಿ ಸಂಖ್ಯೆ: ೯೮೪೫೦೮೫೭೦೯