ಘನತೆಯಿಂದ ಮುಟ್ಟಾಗೋಣ –ಮುಟ್ಟಿನ  ಸ್ವಚ್ಚತೆಯ  ಕುರಿತು ತರಬೇತಿ

0

Get real time updates directly on you device, subscribe now.

ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಹಿರೇ ಬಿಡನಾಳ ಚಿಕ್ಕಬಿಡನಾಳನಲ್ಲಿ ಇಕೊ ಫೌಂಡೇಶನ್ ಫಾರ್ ಸಸ್ಟೈನೆಬಲ್ ಅಲ್ಟರನೆಟಿವ್ಸ್ ನಿಂದ  ಮಕ್ಕಳಿಗೆ ಜೀವನ ಕೌಶಲ್ಯ ಭಾಗವಾಗಿ ಹೆಣ್ಣುಮಕ್ಕಳ ಮುಟ್ಟಿನ ಸ್ವಚ್ಚ ಸ್ವಚ್ಚತೆಯ  ಕುರಿತು ತರಬೇತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ  ಶ್ರೀಮತಿ ಶೀಲಾ ಹಾಲಕುರಿಕೆ ಮತ್ತು ಭಾರತಿ ಗುಡ್ಲಾನೂರ ಇವರು ಘನತೆಯಿಂದ ಮುಟ್ಟಾಗೋಣ ಎಂಬ ಘೊಷವಾಕ್ಯ ದೊಂದಿಗೆ ಪ್ರಾರಂಭಿಸುತ್ತಾ  ಮಕ್ಕಳಿಗೆ ಮುಟ್ಟಾಗುವ ಕುರಿತು ಅಸಹ್ಯ ಪಡದೆ ಮುಜುಗರ ಪಡದೆ ಹೆಣ್ಣುಮಕ್ಕಳು ಘನತೆಯಿಂದ ಮುಟ್ಟಾಗೋಣ ಋತುಚಕ್ರ ಅನ್ನುವುದು ಒಂದು ಸಹಜ ಕ್ರಿಯೆ  ಹಾಗಾಗಿ ಇದನ್ನು ಈ ಮುಟ್ಟಿನ ಸಮಸ್ಯೆಗಳನ್ನು ಮುಚ್ಚಿಡದೆ ಮುಕ್ತವಾಗಿ ಎಲ್ಲರೂ ಸಹ ಇದು ಅಸಹ್ಯ ಅಥವಾ ಮೈಲಿಗೆ ಅನ್ನುವುದನ್ನು ಬಿಟ್ಟು ಇದು ಎಲ್ಲಾ ಹೆಣ್ಣುಮಕ್ಕಳ ಸಹಜವಾದ ಜೈವಿಕವಾದ ಕ್ರಿಯೆ ಆದ್ದರಿಂದ ಯಾರು ಸಹ ತಪ್ಪು ಬಾವಿಸದೆ ಮುಕ್ತವಾಗಿ ಹಂಚಿಕೊಳ್ಳಬೇಕು ಮುಖ್ಯವಾಗಿ ಮಕ್ಕಳು ಸಹ ಮುಟ್ಟಿನ ಪ್ರಕ್ರಿಯೆಯಲ್ಲಿ ನೊವನ್ನು ಅನುಭವಿಸುತ್ತಾ ಹೆಳಿಕೊಳ್ಳಲು ಆಗದೆ ಕಿಳರಿಮೆ ಎಂದು ಸಮಾಜ ನಡೆದುಕೊಳ್ಳುತ್ತದೆ ಎನ್ನುವ ಉದ್ದೇಶದಿಂದ ಎದರುತ್ತಾ ಕೆಲವು ಮಕ್ಕಳು ಶಿಕ್ಷಣದಿಂದ ಸಹ ವಂಚಿತರಾಗುತ್ತಿದ್ದಾರೆ. ಹೆಣ್ಣುಮಕ್ಕಳು ಆರೋಗ್ಯದ ಮೇಲೆ ಬಿರುವ ಪರಿಣಾಮವನ್ನು ಹೆಳಿಕೊಳ್ಳುವುದಿಲ್ಲ ಅದಕ್ಕಾಗಿ ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಹೆಳಿಕೊಳ್ಳು ವಂತೆ ಪ್ರತಿರಿಯೊಬ್ಬರಲ್ಲಿ ಚಿಂತನೆ ಮೂಡಬೇಕು ಎಂದು ತಿಳಿಸಿದರು. ಜೊತೆಗೆ ಹೆಣ್ಣುಮಕ್ಕಳು ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ ಗಳನ್ನು ಸಹ ಬಳಸಿ ಭೂಮಿಗೆ ಹಾನಿಯಾಗದಂತೆ ಬಳಸಿ ಅದನ್ನು ಗೊಬ್ಬರವಾಗುವ ರೀತಿಯಲ್ಲಿ ಇರುವ ಸಾವಯವ ಪ್ಯಾಡ ಬಳಸಿದಾಗ ಅದು ಪರಿಸರಕ್ಕೆ ಒಳ್ಳೆಯದು ಎಂದು ತಿಳಿಸಿದರು. ಒಂದು ಸಂದರ್ಭದಲ್ಲಿ  ಎಪ್ಸಾ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಮುಖ್ಯೋಪಾದ್ಯಯರು  ಮಕ್ಕಳು ಇದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!