ಬಲ್ಡೋಟ ತೊಲಗಿಸಿ ೯೦ನೇ ದಿನ ; ಧರಣಿ ಮುಂದುವರಿಕೆ

Get real time updates directly on you device, subscribe now.

ಕೊಪ್ಪಳ: ನಗರಸಭೆ ಮುಂದೆ ೯೦ನೇ ದಿನದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ಅನರ‍್ಧಿಷ್ಟಾವಧಿ ಧರಣಿ ನಡೆಸಲಾಯಿತು.
ಧರಣಿಗೆ ಬೆಂಬಲಿಸಿದ ಚಿತ್ರದರ‍್ಗ ಮದಕರಿ ಸೇನಾ ಮುಖಂಡರಾದ ಬಿ.ಟಿ. ಸೋಮೇಂದ್ರ ಮಾತನಾಡಿ, ಕೊಪ್ಪಳ ಪರಿಸರ ಹೋರಾಟ ರಾಜ್ಯದ ತುಂಬಾ ಸುದ್ದಿಯಾಗುತ್ತಿದೆ. ಇಲ್ಲಿನ ಜನ ಬದುಕಿ ಬಾಳಬೇಕು ಎನ್ನುವುದು ರಾಜ್ಯದ ಜನರ ಆಶಯವಾಗಿದೆ. ಮದಕರಿ ನಾಯಕ ಸೇನೆ ಯಾವತ್ತೂ ನಿಮಗೆ ಬೆಂಬಲ ಮಾಡುತ್ತದೆ. ಇಲ್ಲಿನ ಸಕಲ ಜೀವಿಗಳು ಪರಿಸರ ಹಾನಿಯ ಆತಂಕದಲ್ಲಿವೆ. ಇಲ್ಲಿರುವ ಗವಿಸಿದ್ದೇಶ್ವರ ಸ್ವಾಮೀಜಿ ಈ ಹೋರಾಟ ಆರಂಭ ಮಾಡಿದ್ದು ರಾಜ್ಯದ ಮೂಲೆ ಮೂಲೆಗೂ ಗೊತ್ತು. ಅಂತಹ ಸಾತ್ವಿಕ ಶಕ್ತಿಯನ್ನು ಎದುರು ಹಾಕಿಕೊಳ್ಳಲು ಮುಂದಾದ ಬಲ್ಡೋಟ ಉಳಿಯಲು ಸಾಧ್ಯವಿಲ್ಲ. ಬಲಿಷ್ಠ ಚಳವಳಿ ಬೆಳೆಯಲು ಇದೊಂದು ಅವಕಾಶವಾಗಿದೆ. ನಿಮ್ಮ ಗೆಲುವು ರಾಜ್ಯದ ಹೋರಾಟಗಳ ಗೆಲುವಾಗಲಿದೆ ಎಂದರು. ಚಿತ್ರದರ‍್ಗ ಮದಕರಿ ನಾಯಕ ಸೇನೆಯ ಮಂಜುನಾಥ ಬೊಮ್ಮನಹಳ್ಳಿ, ರ‍್ನಾಟಕ ರ‍್ಯ ವೈಶ್ಯ ಮಹಾಸಭಾ ಅಧ್ಯಕ್ಷರಾಧ ಎಲ್. ಶಶಿಧರ ಗುಪ್ತಾ ಬೆಂಬಲಿಸಿ ಮಾತನಾಡಿದರು.

ಧರಣಿ ನೇತೃತ್ವ ವಹಿಸಿದ್ದ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ ಎ.ಎಂ. ಮದರಿ, ಮಲ್ಲಿಕರ‍್ಜುನ ಬಿ‌.
ಗೋನಾಳ, ಎಸ್.ಬಿ.ರಾಜೂರು, ಜಿ.ಬಿ. ಪಾಟೀಲ್, ಕೆ.ಬಿ.ಜಿ. ನಿವೃತ್ತ ಮ್ಯಾನೇಜರ್ ಸಿ.ಬಿ. ಪಾಟೀಲ್, ಶಂಭುಲಿಂಗಪ್ಪ ಹರಗೇರಿ, ಮೂಕಪ್ಪ ಮೇಸ್ತ್ರಿ ಬಸಾಪುರ, ರಂಗರ‍್ಮಿ ಶರಣು ಶೆಟ್ಟರ್, ಗವಿಸಿದ್ದಪ್ಪ ತುಮ್ರಗುದ್ಧಿ, ಮಂಜುನಾಥ ಕವಲೂರು, ಮಹಾದೇವಪ್ಪ ಮಾವಿನಮಾಡು, ವಿಜಯ ಮಹಾಂತೇಶ ಹಟ್ಟಿ, ನಾಗೇಶ ಬಳಗಟ್ಟಿ, ಶಿವಪ್ಪ ಜಲ್ಲಿ, ಬಿ.ಜಿ. ಕರಿಗಾರ, ಬಸವರಾಜ ನರೇಗಲ್, ರತ್ನಮ್ಮ ದೊಡ್ಡಮನಿ, ಮಖ್ಬುಲ್ ರಾಯಚೂರು, ಸಂಜೀವಮ್ಮ ಮುಂಡರಗಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!