ನಿವೇಶನ ಮತ್ತು ಮನೆಗಳನ್ನು ಒದಗಿಸಲು ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ

Get real time updates directly on you device, subscribe now.

ಕೊಪ್ಪಳ : ಪೇಂಟರ್ ಕಾರ್ಮಿಕರ  ಮನವಿ.

ಕೊಪ್ಪಳ : ಪೇಂಟರ್ ಕಾರ್ಮಿಕರಿಗೆ ನಿವೇಶನ ಮತ್ತು ಮನೆಗಳ ಒದಗಿಸಲು ಆಗ್ರಹಿಸಿ ಜಿಲ್ಲಾ ಪೇಂಟರ್ ಕಾರ್ಮಿಕರ ಸಂಘ(ಐ.ಎಫ್.ಟಿ.ಯು. ಸೇರ್ಪಡೆ) ನೇತೃತ್ವದಲ್ಲಿ ಮಂಗಳವಾರ ಅಶೋಕ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ನಗರ ಸಭೆಗೆ ತೆರಳಿ ಪೌರಾಯುಕ್ತ ವೆಂಕಟೇಶ್ ನಾಗನೂರು ಅವರ ಮುಖಾಂತರ ವಸತಿ ಸಚಿವ ಬಿ,ಝೆಡ್.ಜಮೀರ ಅಹ್ಮದ್ ಖಾನ ಮತ್ತು ಶಾಸಕ ಕೆ. ರಾಘವೇಂದ್ರ ಬಿ.ಹಿಟ್ನಾಳ ಇವರಿಗೆ ಮನವಿ ಸಲ್ಲಿಸಲಾಯಿತು.ಮನವಿಯಲ್ಲಿ ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಪೇಂಟರ್ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪೇಂಟರ್ ಕಾರ್ಮಿಕರು ಸಂಘಟಿತರಾಗಿ ಕಳೆದ ಸುಮಾರು 14 ವರ್ಷಗಳಿಂದ ನಿರಂತರವಾಗಿ ಆಯಾ ಸರ್ಕಾರಗಳಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಮನವಿಗಳನ್ನು ನೀಡಿ ಮನವರಿಕೆ ಮಾಡುತ್ತಾ ಬರುತ್ತಿದ್ದು, ಆದರೂ ಕರ್ನಾಟಕ ರಾಜ್ಯ ಸರ್ಕಾರ. ಶಾಸಕರು. ನಗರ ಸಭೆಯ ಅಧಿಕಾರಿಗಳು ಕೇವಲ ಆಶ್ವಾಸನೆಗಳನ್ನು ನೀಡುತ್ತಾ

ಬಂದಿದ್ದು.ನಮಗೆ ವಸತಿಯ ಸೌಲಭ್ಯವನ್ನು ಒದಗಿಸದ ಕಾರಣದಿಂದ ಅನಿವಾರ್ಯವಾಗಿ ಪೇಂಟರ್ ಕಾರ್ಮಿಕರು ಪ್ರತಿಭಟನೆ ನಡೆಸಲು ತಾವೇ ಹೊಣೆಗಾರರು ಆಗಿದ್ದೀರಿ. ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಬೇರೆ ರೂಪದ ಹೋರಾಟಗಳು ನಡೆಯುತ್ತದೆ ಎಂದು ಎಚ್ಚರಿಸುತ್ತೇವೆ.

ಈ ಹಿಂದೆ ಅನೇಕ ಬಾರಿ ಸ್ಥಳೀಯ ಶಾಸಕ ಕೆ. ರಾಘವೇಂದ್ರ ಬಿ.ಹಿಟ್ನಾಳ ಅವರಿಗೆ ಮನವಿಗಳನ್ನು ನೀಡಿದ್ದು, ಕಳೆದ ವರ್ಷ 26/01/2025ರಂದು ಮಾನ್ಯ ವಸತಿ ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರು ನಗರದ ಸಾಹಿತ್ಯ ಭವನದಲ್ಲಿ ಪತ್ರಕರ್ತರಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಸನ್ಮಾನಿಸಿ ಗೌರವಿಸಿ ಮನವಿ ಸಲ್ಲಿಸಲಾಗಿತ್ತು.ಆದರೂ ಪೇಂಟರ್ ಕಾರ್ಮಿಕರ ಕುಟುಂಬಗಳಿಗೆ ಯಾವುದೇ ರೀತಿಯ ವಸತಿ ಯೋಜನೆಯನ್ನು ನೀಡಿಲ್ಲ. ಎರಡು ಬಾರಿ ವಿಧಾನ ಸಭಾ ಚುನಾವಣೆಗಳಲ್ಲಿ ಕೆ. ರಾಘವೇಂದ್ರ ಬಿ.ಹಿಟ್ನಾಳ ಅವರಿಗೆ ಮತ್ತು ಕಳೆದ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಕೆ. ರಾಜಶೇಖರ್ ಬಿ.ಹಿಟ್ನಾಳ ಅವರಿಗೆ ಗೆಲ್ಲಿಸಿದ್ದು. ಚುನಾವಣೆ ಬಂದಾಗ ಮಾತ್ರ ಪೇಂಟರ್ ಕಾರ್ಮಿಕರು ಬೇಕು. ನಂತರ ಕೇವಲ ಆಶ್ವಾಸನೆಗಳಿಗೆ ಸೀಮಿತವಾಗಿದೆ.ಹೀಗಾಗಿ ಪೇಂಟರ್ ಕಾರ್ಮಿಕರು ಬಾಡಿಗೆ ಮನೆಯಲ್ಲಿಯೇ ವಾಸ ಮಾಡುವಂತಾಗಿದೆ, ಮನೆಗಳಿಗೆ ದುಬಾರಿ ಬಾಡಿಗೆ ಕೊಡಲು ಆಗುತ್ತಿಲ್ಲ.ಕಾರಣ ಈ ಮನವಿಯನ್ನು ಪರಿಗಣಿಸಿ ನಮ್ಮ ಪೇಂಟರ್ ಕಾರ್ಮಿಕರಿಗೆ ವಸತಿ ಯೋಜನೆಯ ಸೌಲಭ್ಯವನ್ನು ಒದಗಿಸಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಕೋರಿದರು.

ಹೋರಾಟದಲ್ಲಿ ಜಿಲ್ಲಾ ಪೇಂಟರ್ ಕಾರ್ಮಿಕರ ಸಂಘ.(ಐ.ಎಫ್.ಟಿ.ಯು. ಸೇರ್ಪಡೆ) ಅಧ್ಯಕ್ಷ ರಜಾಕ್ ಪೇಂಟರ್.ಪ್ರಧಾನ ಕಾರ್ಯದರ್ಶಿ ಬಸವರಾಜ್ ಮಂಡ್ಯ.ಖಜಾಂಚಿ ಆಸೀಫ್ ಕಿಲ್ಲೆದಾರ್.ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ.(ಐ.ಎಫ್.ಟಿ.ಯು) ಜಿಲ್ಲಾ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್. ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್.
ತುಕಾರಾಮ್ ಪಾತ್ರೋಟಿ. ಗಾಳೆಪ್ಪ ಮುಂಗೋಲಿ. ಸೈಯ್ಯದ್ ನೂರುಲ್ಲಾ ಖಾದ್ರಿ. ಅನ್ವರ್ ನರೇಗಲ್. ಸುಲೈಮಾನ್ ಸಿಂದೊಗಿ. ಇಂತಿಯಾಝ್ ಆಧೊನಿ. ಆಮದ ಹೊಸಪೇಟೆ. ಖಲಂದರ್ ಗದಗ. ನಜೀರ್ ಸಾಬ್ ದಿಡ್ಡಿಕೇರಿ. ಶರಣಪ್ಪ. ಸಾಹೆರಾ ಬಾನು ಆಮದ್ ಸಾಬ್. ರಮ್ಯಾ ಬಸವರಾಜ್ ಮಂಡ್ಯ.ರೇಷ್ಮಾ ಬೇಗಂ ರಜಾಕ್ ಪೇಂಟರ್. ಪರ್ವಿನ್ ಬೇಗಂ ಇಕ್ಬಾಲ್ ಸಿದ್ನೆಕೊಪ್ಪ. ವಸತಿ ರಹಿತರ ಸೂರಿಗಾಗಿ ಹೋರಾಟ ಸಮಿತಿಯ ನಾಯಕಿ ರೇಣುಕಾ ನಲವಡೆ. ರಾಜೇಶ್ವರಿ ಇಟಗಿ. ನಾಗವೇಣಿ. ಮಂಜುಳಾ. ಈರಮ್ಮ ಗೂಟೂರು ಮುಂತಾದ ಅನೇಕರು ಪ್ರತಿಭಟನಾ ಮೆರವಣಿಗೆ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!