ಗಣರಾಜ್ಯೋತ್ಸವವು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಹೃದಯವಾಗಿದೆ

Get real time updates directly on you device, subscribe now.

 

      ನಗರದ ಶ್ರೀ ನಂದೀಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು ಭಾರತದ ಆಧುನಿಕ ಇತಿಹಾಸದಲ್ಲಿ ಜನವರಿ 26 ಒಂದು ಸಾಮಾನ್ಯ ದಿನವಲ್ಲ ದಿನವನ್ನು ನಾವು ಹೆಮ್ಮೆಯಿಂದ ಗಣರಾಜ್ಯೋತ್ಸವ ಎಂದು ಆಚರಿಸುತ್ತೇವೆವಿಶೇಷವಾಗಿ 2026 ಗಣರಾಜ್ಯೋತ್ಸವ ನಮಗೆ ನಮ್ಮ ಸಂವಿಧಾನಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ನಾಗರಿಕ ಹೊಣೆಗಾರಿಕೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವಂತಹ ಒಂದು ಮಹತ್ವದ ಸಂದರ್ಭವಾಗಿದೆ.

           ಭಾರತವು 1947 ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆದರೂನಮ್ಮ ಸಂವಿಧಾನ ಜಾರಿಗೆ ಬಂದದ್ದು 1950 ಜನವರಿ 26ರಂದು ದಿನದಿಂದ ನಮ್ಮ ಭಾರತವು ಅಧಿಕೃತವಾಗಿ ಸರ್ವಭೌಮಸಮಾಜವಾದಿಧರ್ಮನಿರಪೇಕ್ಷಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು.

          ಗಣರಾಜ್ಯ ಎಂದರೆ ದೇಶದ ಆಡಳಿತಾತ್ಮಕ ಶಕ್ತಿ ರಾಜನಲ್ಲಿ ಇರುವುದಿಲ್ಲಅದು ಜನರಲ್ಲಿರುತ್ತದೆ ಎಂಬ ಅರ್ಥ ಕಾರಣದಿಂದಲೇ ಗಣರಾಜ್ಯೋತ್ಸವವು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಹೃದಯವಾಗಿದೆ.

         1930 ಜನವರಿ 26ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ “ಪೂರ್ಣ ಸ್ವರಾಜ್ಯ” ಘೋಷಣೆ ಮಾಡಿತು ದಿನವೇ ಬ್ರಿಟಿಷ್ ಆಡಳಿತದಿಂದ ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ನಿರ್ಧಾರವನ್ನು ರಾಷ್ಟ್ರದ ಮುಂದೆ ಘೋಷಿಸಲಾಯಿತು.

       ಆ ಐತಿಹಾಸಿಕ ಹೋರಾಟಕ್ಕೆ ಗೌರವ ಸೂಚಿಸುವುದಕ್ಕಾಗಿಯೂ ಹಾಗೂ ಸಂವಿಧಾನ ಜಾರಿಗೆ ಬಂದ ದಿನವಾಗಿಯೂ ಜನವರಿ 26 ಆಯ್ಕೆಯಾಯಿತುಹೀಗಾಗಿ January 26 ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನಾತ್ಮಕ ಸಾಧನೆಯ ಸಂಕೇತವಾಗಿದೆ.

           ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯಮುಖ್ಯೋಪಾಧ್ಯಾಯರಾದ ಸುರೇಶ್ ಕುಂಬಾರ್ ಗಣರಾಜ್ಯೋತ್ಸವ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು.

        ಕಾರ್ಯಕ್ರಮದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ಬಾಲ್ ಗಂಗಾಧರ್ ತಿಲಕ್ಜವಾಹರ್ ಲಾಲ್ ನೆಹರುಝಾನ್ಸಿ ರಾಣಿ ಲಕ್ಷ್ಮೀಬಾಯಿಕಿತ್ತೂರು ರಾಣಿ ಚೆನ್ನಮ್ಮಒನಕೆ ಓಬವ್ವನೇತಾಜಿ ಸುಭಾಷ್ ಚಂದ್ರ ಬೋಸ್ಛತ್ರಪತಿ ಶಿವಾಜಿಭಾರತ ಮಾತೆಹೀಗೆ ಹಲವು ರಾಷ್ಟ್ರ ನಾಯಕರವೇಷ ಭೂಷಣಗಳನ್ನು ವಿದ್ಯಾರ್ಥಿಗಳು ಹಾಕಿಕೊಂಡು ಬಂದಿದ್ದರು.

          ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಕಾರ್ತಿಕ್ ಶೆಟ್ಟರ್ಶ್ರೀ ವಿಶ್ವನಾಥ್ ಬಂಡಿ ಶ್ರೀಮತಿ ನಿರ್ಮಲಶ್ರೀಮತಿ ಶೋಭಾಶ್ರೀಮತಿ ಅರುಣಶ್ರೀಮತಿ ಗಿರಿಜಾಶ್ರೀಮತಿ ಮಂಜುಳಾಶ್ರೀಮತಿ ಸವಿತಾಶ್ರೀಮತಿ ಅನನ್ಯ  ಶಾಲೆಯ ಪಾಲಕರು ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ್ದರು.

       ಕುಮಾರಿ ಮಹಾದೇವಿ ನಿರೂಪಿಸಿದರುಶ್ರೀಮತಿ ಲತಾ ಗಡ್ಡದ ಸ್ವಾಗತ ಪುಷ್ಪಾರ್ಪಣೆಪ್ರಾಸ್ತಾವಿಕ ನುಡಿ ನೆರವೇರಿಸಿದರುಹಾಗೂ ವಂದನಾರ್ಪಣೆ ಮಾಡಿದರುಶ್ರೀಮತಿ ರಂಜಾನ್ಶ್ರೀಮತಿ ಲಕ್ಷ್ಮಿಕುಮಾರಿ ವಿದ್ಯಾಶ್ರೀಕುಮಾರಿ ಮಹಾದೇವಿಶ್ರೀಮತಿ ಕವಿತಾ ಕಾರ್ಯಕ್ರಮದಲ್ಲಿದ್ದರೂ.

 

        ನಗರದ ಶ್ರೀ ನಂದೀಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಸುರೇಶ್ ಕುಂಬಾರ್ ಗಣರಾಜ್ಯೋತ್ಸವದ ಭಾರತದ ಪ್ರಜಾಸತಾತ್ಮಕ ವ್ಯವಸ್ಥೆಯ ಹೃದಯ ಭಾಗವಾಗಿದೆ ಎಂದು

Get real time updates directly on you device, subscribe now.

Comments are closed.

error: Content is protected !!