೮೮ನೇ ದಿನದ ಬಲ್ಡೋಟಾ ತೊಲಗಿಸಿ ಧರಣಿಯಲ್ಲಿ ಗಣರಾಜ್ಯೋತ್ಸವ

Get real time updates directly on you device, subscribe now.

ಕೊಪ್ಪಳ: ನಗರಸಭೆ ಮುಂದೆ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ೮೮ನೇ ದಿನದ ಧರಣಿ ಹೋರಾಟ ನಡೆಸಲಾಯಿತು.

Republic Day in the 88th day of the Baldota Tolagisi Dharani

ಸೋಮವಾರ ೭೭ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಹೋರಾಟದ ವೇದಿಕೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಕರ್ತೃ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ, ರಾಷ್ಟ್ರಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ಚಳುವಳಿಯಲ್ಲಿ ತ್ಯಾಗ ಬಲಿದಾನ ಮಾಡಿದ ಧೀಮಂತರನ್ನು ಸ್ಮರಿಸುತ್ತಾ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಅವರು, ಒಂದು ಈಸ್ಟ್ ಇಂಡಿಯಾ ಕಂಪನಿ ೨೦೦ ವರ್ಷ ನಮ್ಮನ್ನಾಳಿತು. ಅದರ ಮುಂದುವರಿದ ಸಂತಾನವೇ ಇವತ್ತಿನ ಬಹುರಾಷ್ಟ್ರೀಯ ಕಂಪನಿಗಳು. ಅಂಬೇಡ್ಕರ್ ಕಂಡ ಕನಸು ಕೈಗಾರಿಕೆಗಳು ರಾಷ್ಟ್ರೀಯ ಸಂಪತ್ತು ಆಗಬೇಕು. ಆಗ ಉದ್ಯೋಗ ಸಾಮಾಜಿಕ ನ್ಯಾಯದ ಪರವಾಗಿ ಕೊಡಬಹುದು. ಇಲ್ಲದಿದ್ದರೆ ಮಾಲೀಕರು ತಮ್ಮ ಲಾಭಕ್ಕೆ ಬೇಕಾದವರನ್ನು ನೇಮಿಸಿಕೊಂಡು, ಸಂಪತ್ತಿನ ಅಸಮತೋಲನೆ ಹೆಚ್ಚು ಮಾಡುತ್ತವೆ. ನಮ್ಮ ಆರೋಗ್ಯ ಕಸಿದುಕೊಳ್ಳಲು ಬಂದಿರುವ ಬಲ್ಡೋಟ ಕೂಡ ಅದೇ ಸಂತಾನದ್ದಾಗಿದೆ.
ನಾವು ಕೊಪ್ಪಳ ಭಾಗ್ಯನಗರದ ಒಂದೂವರೆ ಲಕ್ಷ ಜನ ಸ್ವಾತಂತ್ರ್ಯ ಹೋರಾಟದ ಸೇನಾನಿಗಳಂತೆ ಹೋರಾಡುವ ಅನಿವಾರ್ಯತೆ ಬಂದರೆ ಯಾರೂ ಹಿಂದೆ ಸರಿಯುವುದು ಬೇಡ ಎಂದರು. ಕಾರ್ಖಾನೆ ದೂಳು ಬಾಧಿತ ೨೦ ಹಳ್ಳಿಗಳು ಹಾಗೂ ಅವಳಿ ನಗರದ ಒಂದೂವರೆ ಲಕ್ಷ ಜನರ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಆತಂಕದಿಂದ ನಡೆದ ಅನಿರ್ಧಿಷ್ಟಾವಧಿ ಧರಣಿ ಬಲ್ಡೋಟ ಹಠಾವೋ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ್-ಸುಮಿ, ಎಕ್ಸ್ ಇಂಡಿಯಾ ಮುಂತಾದ ಮಾಲಿನ್ಯಕಾರಕ ಕಾರ್ಖಾನೆಗಳ ವಿಸ್ತರಣೆ ಬೇಡ, ಬಸಾಪುರ ಕೆರೆ ಎಂ.ಎಸ್.ಪಿ.ಎಲ್ ಅತಿಕ್ರಮಣ ತೆರವುಗೊಳಿಸಿ ಜನ-ಜಾನುವಾರು ನೀರು ಕುಡಿಯಲು ಮುಕ್ತಗೊಳಿಸಲು ಆಗ್ರಹಿಸಿ, ತುಂಗಭದ್ರಾ ವಿಷಗೊಳಿಸಿದ ಕಾರ್ಖಾನೆಗಳನ್ನು ಸೀಜ್ ಮಾಡಲು ಒತ್ತಾಯಿಸಿದರು.
ಜಂಟಿ ಕ್ರಿಯಾ ವೇದಿಕೆಯ ಪ್ರಮುಖರಾದ ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ನಟರಾಜ್ ಸವಡಿ, ಡಿ.ಎಚ್.ಪೂಜಾರ, ಮಂಜುನಾಥ ಜಿ. ಗೊಂಡಬಾಳ, ಮಹಾಂತೇಶ ಕೊತಬಾಳ, ನಿವೃತ್ತ ಶಿಕ್ಷಕ ಸದಾಶಿವ ಪಾಟೀಲ್, ಮೂಕಪ್ಪ ಮೇಸ್ತ್ರಿ ಬಸಾಪುರ, ಕೆ. ಬಿ. ಗೋನಾಳ, ವಿಜಯ ಮಹಾಂತೇಶ ಹಟ್ಟಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಂಜುನಾಥ ಕವಲೂರು, ಶಿವಪ್ಪ ಜಲ್ಲಿ, ಪ್ರಶಾಂತ ಗುಡದೂರು, ರಾಜಶೇಖರ ಏಳುಭಾವಿ, ಮಖ್ಬುಲ್ ರಾಯಚೂರು, ಸುಂಕಮ್ಮ ಪಡಚಿಂತಿ, ಗಂಗಮ್ಮ ಮುಂಡರಗಿ, ರತ್ನಮ್ಮ ದೊಡ್ಡಮನಿ, ಚನ್ನವೀರಯ್ಯ ಹಿರೇಮಠ, ಶಂಬುಲಿಂಗಪ್ಪ ಹಾರೋಗೇರಿ ಪಾಲ್ಗೊಂಡರು.

Get real time updates directly on you device, subscribe now.

Comments are closed.

error: Content is protected !!