ನನ್ನ ತಂದೆ ಬಸವರಾಜ ರಾಯರೆಡ್ಡಿ ಅವರು ಅಂಗನವಾಡಿಯಿಂದ ಸ್ನಾತಕೋತ್ತರ ವರೆಗೂ ಶೈಕ್ಷಣಿಕ ಅಭಿವೃದ್ಧಿ ಪಡಿಸಿದ್ದಾರೆ : ಮಮತಾ ರಾಯರೆಡ್ಡಿ
ಕುಕನೂರು : ನನ್ನ ಮಹತ್ವಾಕಾಂಕ್ಷೆಯ ಯೋಜನೆ ಹಾಗೂ ಬಹುದಿನಗಳ ಕನಸು ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವ ಮೂಲಕ ನನಸಾಗುತ್ತಿದೆ ಎಂದು ಮಮತಾ ರಾಯರೆಡ್ಡಿ ನುಡಿದರು.
ಸಮೀಪದ ತಳಕಲ್ ಗ್ರಾಮದ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ ಹಾಗೂ ಒನ್ ಎಂ, ಒನ್ ಬಿ, ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು ನನ್ನ ತಂದೆ ಬಸವರಾಜ ರಾಯರೆಡ್ಡಿ ಅವರು ಅಂಗನವಾಡಿಯಿಂದ ಸ್ನಾತಕೋತ್ತರ ವರೆಗೂ ಶೈಕ್ಷಣಿಕ ಅಭಿವೃದ್ಧಿ ಪಡಿಸಿದ್ದಾರೆ
ಎನ್ನುವ ಹೆಮ್ಮೆ ನನಗಿದೆ ಎಂದರು. ನಾನು ನನ್ನ ತಂದೆ , ತಾಯಿ, ತಾತ, ಅಜ್ಜಿ ಎಲ್ಲರೂ ಯಲಬುರ್ಗಾ ಕ್ಷೇತ್ರದವರೇ
ನಾನು ಬೆಂಗಳೂರಿನಿಂದ ಯಲಬುರ್ಗಾ ಕ್ಕೆ ಬಂದಾಗಲೊಮ್ಮೆ ನನಗೆ ಬಹುವಾಗಿ ಕಾಡುತ್ತಿದ್ದ ವಿಷಯವೇನೆಂದರೆ ಅದು ಕ್ಷೇತ್ರದ ನಿರುದ್ಯೋಗ ಸಮಸ್ಯೆಯಾಗಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ನಾನು ಹೇಗಾದರೂ ಮಾಡಿ ನನ್ನ ಕ್ಷೇತ್ರದ ವಿದ್ಯಾವಂತರು ಉದ್ಯೋಗ ಅರಸಿ ವಲಸೆ ಹೋಗುವುದನ್ನು ತಪ್ಪಿಸಬೇಕು, ಬೇರೆ ಊರಿಗೆ ಹೋಗಿ ಕಷ್ಟ ಪಡುವದಕ್ಕಿಂತ ಹುಟ್ಟಿದ ಊರಿನಲ್ಲಿಯೇ ನೆಮ್ಮದಿಯ ಜೀವನ ನಡೆಸಬೇಕು
All educated people of Yelaburga constituency should be able to get jobs: Mamata Rayareddy
ಎನ್ನುವ ಸದುದ್ದೇಶದಿಂದ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದರು.
ಒಟ್ಟು 25 ಹೆಸರಾಂತ ಕಂಪೆನಿಗಳು ಬಂದಿದ್ದು ಎಲ್ಲ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಸಿಗುವಂತಾಗಲಿ ಎಂದು ಹಾರೈಸಿದರು.
ಬೆಳಗಾವಿಯ ವಿಟಿಯೂ ಕಾಲೇಜಿನ ವಿದ್ಯಾಶಂಕರ ಮಾತನಾಡಿ ಈ ದೇಶದಲ್ಲಿ ಪ್ರತಿ ವರ್ಷವೂ
15 ರಿಂದ 19 ಲಕ್ಷ ವಿದ್ಯಾರ್ಥಿಗಳು ಇಂಜಿನಿಯರ್ ಆಗಿ ಹೊರಹೊಮ್ಮುತ್ತಾರೆಯಾದರೂ ವಿದ್ಯಾವಂತರೆಲ್ಲರಿಗೂ ಸರ್ಕಾರದಿಂದ ಉದ್ಯೋಗ ಸಿಗುವುದಿಲ್ಲ. ವಿದ್ಯಾರ್ಥಿಗಳು ಕೌಶಲ್ಯ ಅಭಿವೃದ್ಧಿ ಪಡೆದುಕೊಂಡು ಸ್ವ ಉದ್ಯೋಗದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಕಲಿಕೆಯ ಜೊತೆಗೆ ಉದ್ಯೋಗಕ್ಕೆ ಬೇಕಾಗುವ ಪೂರ್ವ ತಯಾರಿ ಮಾಡಿಕೊಳ್ಳಬೇಕು ಆದರೆ ಈಗಿನ ವಿದ್ಯಾರ್ಥಿಗಳಲ್ಲಿ ಕಲಿಕೆಯಲ್ಲಿ ಆಸಕ್ತಿಯ ಕೊರತೆ ಇದೆ ಎಂದರು.
ಒಟ್ಟು 48 ಸಾವಿರ ನಿರುದ್ಯೋಗಿ ವಿದ್ಯಾವಂತರು ಯುವ ನಿಧಿ ಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ
ಎಂದರು.
ಪ್ರಯತ್ನ ದಿಂದ ಮಾತ್ರ ಫಲ ದೊರೆಯುತ್ತದೆ ಎಂದ ಅವರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಕೇವಲ ನಾಲ್ಕೇ ನಾಲ್ಕು ಕಂಪ್ಯೂಟರ್ ಇಟ್ಟುಕೊಂಡು ತಮ್ಮ ಪ್ರಾಮಾಣಿಕ ಪ್ರಯತ್ನ ಮತ್ತು ಕ್ರಿಯಾಶೀಲತೆಯಿಂದ ಇಂದು ಸಾವಿರಾರು ಜನ ವಿದ್ಯಾವಂತ ಯುವಕರಿಗೆ ಕೆಲಸ ನೀಡುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ ಎಂದರು.
ಅಂಥದ್ದೊಂದು ಸಂಕಲ್ಪ ಮತ್ತು ಏನಾದರೊಂದು ಮಹತ್ವದ್ದಾದಂಥದನ್ನು ಸಾಧಿಸುತ್ತೇನೆ ಎನ್ನುವ ಛಲ ನಮ್ಮ ಯುವ ಜನಾಂಗಕ್ಕೆ ಬರಬೇಕು ಎಂದರು.
ಮನುಷ್ಯನ ವಿವೇಚನಾಶಕ್ತಿಯನ್ನೂ ಮೀರಿಸುವಂಥ, ದಣಿವರಿಯದಂಥ ಎ, ಐ, (ಆರ್ಟಿಫಿಷಿಯಲ್ ಇಂಟಲಿಜೆನ್ಸಿ) ಕೆಲಸ ಮಾಡುತ್ತಿದೆ
ಮುಂದಿನ ದಿನಗಳಲ್ಲಿ ಎ, ಐ ಎಸ್,(ಸೂಪರ್
ಆರ್ಟಿಫಿಷಿಯಲ್ ಇಂಟಲಿಜೆನ್ಸಿ)
ಬಂದರೂ ಆಶ್ಚರ್ಯ ಪಡಬೇಕಿಲ್ಲ
ಅದುದರಿಂದ ವಿದ್ಯಾರ್ಥಿಗಳು ಸ್ವಸಾಮರ್ಥ್ಯದಿಂದ ಕಲಿತು ತಮ್ಮ ಬುದ್ಧಿಮತ್ತೆಯನ್ನು ವಿಕಾಸದತ್ತ ಕೊಂಡ್ಯೊಯುವ ಗುರಿಯನ್ನು ಹೊಂದಬೇಕು ಎಂದರು.
ಮುಂದಾಲೊಚನೆಯಿಂದ ಒಂದು ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ
ಸೂಪರ್ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಇಂಟರ್ನ್ಶಿಪ್ ನೀಡಲಾಗುತ್ತಿದೆ ಎಂದರು. ವೇದಿಕೆಯ ಮೇಲೆ
ಡಾ ಬಸವರಾಜಪ್ಪ, ಭರತೇಶ, ರಿಜ್ವಾನ್, ರೀನಾ ಮೇಡಂ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಜಿಂದಾಬಿ ಗುಡಗುಡಿ, ಜಾಹಿರಾಬೇಗಂ, ಪಿ, ಡಿ, ಓ, ವೀರನಗೌಡ್ರ ಮುಂತಾದವರು ಉಪಸ್ಥಿತರಿದ್ದರು.
ನಾನು ಬೆಂಗಳೂರಿನಿಂದ ಯಲಬುರ್ಗಾ ಕ್ಕೆ ಬಂದಾಗಲೊಮ್ಮೆ ನನಗೆ ಬಹುವಾಗಿ ಕಾಡುತ್ತಿದ್ದ ವಿಷಯವೇನೆಂದರೆ ಅದು ಕ್ಷೇತ್ರದ ನಿರುದ್ಯೋಗ ಸಮಸ್ಯೆಯಾಗಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ನಾನು ಹೇಗಾದರೂ ಮಾಡಿ ನನ್ನ ಕ್ಷೇತ್ರದ ವಿದ್ಯಾವಂತರು ಉದ್ಯೋಗ ಅರಸಿ ವಲಸೆ ಹೋಗುವುದನ್ನು ತಪ್ಪಿಸಬೇಕು, ಬೇರೆ ಊರಿಗೆ ಹೋಗಿ ಕಷ್ಟ ಪಡುವದಕ್ಕಿಂತ ಹುಟ್ಟಿದ ಊರಿನಲ್ಲಿಯೇ ನೆಮ್ಮದಿಯ ಜೀವನ ನಡೆಸಬೇಕು ಎನ್ನುವ ಸದುದ್ದೇಶದಿಂದ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ
-ಮಮತಾ ರಾಯರೆಡ್ಡಿ
ಮುಖ್ಯ ಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರ ಪುತ್ರಿ
Comments are closed.