ಸೆ.8 ಕ್ಕೆ ಅವಳು ಲೈಲಾ ಅಲ್ಲಾ ನಾನು ಮಜ್ನು ಅಲ್ಲಾ ಸಿನಿಮಾ ಪ್ರದರ್ಶನ; ನಿರ್ದೇಶಕ ಯಲ್ಲಪ್ಪ ಪುಣ್ಯಕೋಟಿ
ಕುಷ್ಟಗಿ. ಸೆ.06; ಉತ್ತರ ಕರ್ನಾಟಕದಲ್ಲಿ ಸಿನಿಮಾ ಮಾಡುವುದು ತುಂಬಾ ಕಷ್ಟ ನಮ್ಮ ತಾಲೂಕಿನ ಪ್ರತಿಭೆಗಳನ್ನು ಗುರುತಿಸಲು ಅವಳು ಲೈಲಾ ಅಲ್ಲಾ
ನಾನು ಮಜ್ನು ಅಲ್ಲಾ ಎಂಬ ಸಿನಿಮಾ ಚಿತ್ರಿಕರಿಸಲಾಗಿದೆ ಎಂದು ನಿರ್ದೇಶಕ ಯಲ್ಲಪ್ಪ ಪುಣ್ಯಕೋಟಿ ಹೇಳಿದರು. ಬುಧವಾರ ಬೆಳಗ್ಗೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸೆ.8 ಶುಕ್ರವಾರದಂದು ರಾಜ್ಯದಲ್ಲಿ ಏಕ ಕಾಲದಲ್ಲಿ
ಸುಮಾರು 50 ಕ್ಕು ಹೆಚ್ಚು ಥೇಟರ್ ಗಳಲ್ಲಿ ಅವಳು ಲೈಲಾ ಅಲ್ಲಾ ನಾನು ಮಜ್ನು ಅಲ್ಲಾ ಸಿನಿಮಾ ಪ್ರದರ್ಶನ ನಡೆಯುತ್ತದೆ.
ಕೊಪ್ಪಳ ಜಿಲ್ಲೆಯಲ್ಲಿ ಅತೀ ಹೆಚ್ಚು ಜನರು ಸಿನಿಮಾ ವೀಕ್ಷಣೆ ಮಾಡಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಸೆ.8 ಶುಕ್ರವಾರ ಬೆಳಿಗ್ಗೆ ಇಲ್ಲಿನ ಮಲ್ಲಯ್ಯ ವೃತ್ತದಲ್ಲಿ ನೂರಾರು ಬೈಕ್ ಗಳೊಂದಿಗೆ ರ್ಯಾಲಿ ನಡೆಸಿ ಚಲನಚಿತ್ರದ ಆರಂಭದ ಬಗ್ಗೆ ಸಂಭ್ರಮ ಆಚರಣೆ
ಮಾಡಲಾಗುತ್ತದೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಚಲನಚಿತ್ರ ಪ್ರದರ್ಶನ ಯಶಸ್ವಿ ಗೊಳಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ. ಸಿಂಧನೂರಿನ ಕಲಾವಿದ ಅಜೇಯ್ ಚಿತ್ರದ ನಾಯಕ ನಟನಾಗಿ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾನೆ ಈ ಟ್ರಿಜೇರ್ ಸುಮಾರು 7 ಲಕ್ಷಕ್ಕ ಹೆಚ್ಚು ಜನರು ವಿಕ್ಷೇಣೆ ಮಾಡಿದ್ದಾರೆ. ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಜನರಿಗೆ ತಕ್ಕಂತೆ ವಿಶೇಷವಾಗಿ ಸಿನಿಮಾ ನಿರ್ದೇಶನ
ಮಾಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಉತ್ತಮ ಪ್ರವಾಸಿ ತಾಣಗಳ ಇವೆ ಅವುಗಳನ್ನು ಬೆಳಕಿಗೆ ತರುವಲ್ಲಿ ವಿಶೇಷ ಆಸಕ್ತಿ ವಹಿಸಿದೆ ಈ ಚಿತ್ರ ತಂಡ ಪ್ರೇಕ್ಷಕರ ಸಹಕಾರ ಮುಖ್ಯ ಎಂದು ಹೇಳಿದರು. ಸಿಂಧನೂರು, ಗಾಂಧಿ ನಗರ, ಹೋಸಪೇಟಿ, ಮುನಿರಾಬಾದ ಡ್ಯಾಂ, ಆನೆಗುಂದಿ, ಹೆಬ್ಬಾಳ, ಡಾಣಪೂರ ಸೇರಿದಂತೆ ಇನ್ನೂ ಅನೇಕ ಪ್ರವಾಸಿ ತಾಣಗಳಲ್ಲಿ ಚಿತ್ರ ನಿರ್ದೇಶನ ಮಾಡಲಾಗಿದೆ ಎಂದು ಹೇಳಿದರು.
ಪಾಗಲ ಪ್ರೇಮಿ ಎಂಬ ವಿನೂತನ ಚಿತ್ರ ನಿರ್ದೇಶನ ಮಾಡಲಾಗಿದೆ ಈಗಾಗಲೇ ಶೇಕಡಾ 60 ರಷ್ಟು ಚಿತ್ರದ ಕೆಲಸ ಮುಕ್ತಾಯವಾಗಿದೆ ಸದ್ಯದಲ್ಲೇ ಈ ಚಿತ್ರ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಮಾಜಪ್ಪ ಜುಮಲಾಪೂರ, ಚಂದನ್ ಹಾವರಗಿ, ಕೋ ಡೈರೆಕ್ಟರ್ ರವಿ ಭಜಂತ್ರಿ ಉಪಸ್ಥಿತರಿದ್ದರು.
Comments are closed.