Sign in
Sign in
Recover your password.
A password will be e-mailed to you.
ಕೊಪ್ಪಳ: .ಸರ್ವ ಶಿಕ್ಷಕ ವೃಂದಕ್ಕೆ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರುತ್ತಾ ಪ್ರಾಥಮಿಕ ಶಾಲೆಗಳಲ್ಲಿ ಬುನಾದಿಯಿಂದ ಪಕ್ವವಾದ ಶಿಕ್ಷಣ ನೀಡುವಂತಹ ಶಿಕ್ಷಕರಿಗೆ ದೊಡ್ಡ ಜವಾಬ್ದಾರಿ ಇದೆ ಎಂದು ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಹೇಳಿದರು.
ನಗರದ ಟಿಪ್ಪು ಸುಲ್ತಾನ್ ವೃತ್ತದ ಬಳಿಯ ಬಹಾರ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಂದುವರೆದು ಮಾತನಾಡಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇಯ ತರಗತಿಯಿಂದ ಏನೋ ಬಾರದ ಮಕ್ಕಳಿಗೆ ಅಕ್ಷರ ಕಲಿಸುವುದು ನಂತರ ಹಿಂದಿ ಭಾಷೆ. ಆಂಗ್ಲ ಭಾಷೆ ಹಾಗೂ ಮಗ್ಗಿ ಸೇರಿದಂತೆ ಇತರೆ ವಿಷಯಗಳನ್ನು ಕಲಿಸುವ ಮೂಲಕ 7ನೇ ತರಗತಿವರೆಗೆ ಪಳಗಿಸುವ ದೊಡ್ಡ ಜವಾಬ್ದಾರಿ ಪ್ರಾಥಮಿಕ ಶಿಕ್ಷಕರ ಮೇಲಿದೆ. ಉತ್ತಮ ಶಿಕ್ಷಣ ಕಲಿತ ಮಕ್ಕಳು ಎಂಟನೇ ತರಗತಿಗೆ ಪ್ರವೇಶ ಪಡೆಯಲು ಸರಳವಾಗುತ್ತದೆ. ಉನ್ನತ ಪದವಿಗಳನ್ನು ಪಡೆದು ಮಕ್ಕಳು ದೊಡ್ಡ ಹುದ್ದೆಗಳಲ್ಲಿ ಹಾಗೂ ಉದ್ಯೋಗದಲ್ಲಿ ಮುಂದಿನ ಭವಿಷ್ಯ ಉಜ್ವಲವಾಗಲು ಪ್ರಾಥಮಿಕ ಶಿಕ್ಷಣ ಮಹತ್ವದಾಗಿದೆ. ಬಹಾರ್ ಪೇಟೆ ಶಾಲೆಯ ಮಕ್ಕಳಿಗೆ ಗುಣಮಟ್ಟದ ಕಲಿಕೆಗೆ ಪೂರಕವಾದ ಹಲವು ಅವಕಾಶಗಳನ್ನು ಕಲ್ಪಿಸುತ್ತಿದ್ದೇವೆ. ಶಿಕ್ಷಕರೂ ಸಹ ಕಾಳಜಿಯಿಂದ ಬೋಧಿಸಿ ಒಟ್ಟಾಗಿ ತಾಲೂಕಿನಲ್ಲಿ ಮಾದರಿ ಬಹಾರ ಪೇಟೆ ಶಾಲೆಯಾಗಿಸುವ ಗುರಿ ಹೊಂದಿದ್ದೇವೆ ಎಂದರು.
ಕನ್ನಡ ಸನ್ನೆ ಬರಹ ಸಂಶೋಧಕ ಸೈಯ್ಯದ್ ಗೌಸ್ ಮೊಹಿಯುದ್ದೀನ್ ಪೀರಜಾದೆ ಮಾತನಾಡಿ ಬಹಾರ ಪೇಟೆ ಶಾಲೆಯಲ್ಲಿ ಪ್ರತಿಭಾವಂತ ಮಕ್ಕಳಿದ್ದಾರೆ. ಓದಿನ ಕಡೆ ಇನ್ನೂ ಹೆಚ್ಚು ಗಮನ ಕೊಟ್ಟರೆ ಮುಂದಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡಿ ಯಶಸ್ವಿಯಾಗಬಹುದು ಎಂದು ಹೇಳಿದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಅಧ್ಯಕ್ಷ ಆದಿಲ್ ಪಟೇಲ್ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಒಂದಿನ ಕಡೆ ಹೆಚ್ಚಿನ ಗಮನ ಕೊಡಬೇಕು. ಶಿಕ್ಷಕರು ಹೇಳಿದಂತೆ ಅನುಸರಿಸಿದರೆ ವಿದ್ಯಾ ಲಭಿಸುತ್ತದೆ ಎಂದು ಹೇಳಿದರು.
ಬಿಜೆಪಿ ಮುಖಂಡ ಸೈಯ್ಯದ್ ನಸಿರುದ್ದೀನ್ ಹುಸೇನಿ ಮಾತನಾಡಿ ವಿದ್ಯಾರ್ಥಿಗಳು ಕಿರಿಯ ವಯಸ್ಸಿನಲ್ಲಿ ಉತ್ತಮವಾಗಿ ಓದಿದರೆ ವೈದ್ಯರು. ಅಭಿಯಂತರರಾಗಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಹಾರ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಯು. ಸುರ್ವೆ ಮಾತನಾಡಿ ಸೈಯ್ಯದ್ ಗೌಸ್ ಮೊಹಿಯುದ್ದೀನ್ ಪೀರಜಾದೆ ಅವರು ಒಂದು ವಾರದಿಂದ ಬಹಾರ ಪೇಟೆ ಶಾಲೆಯ ಮಕ್ಕಳೊಂದಿಗೆ ಬೆರೆತು ಆಟ ಆಡುತ್ತ ಕನ್ನಡ ಸನ್ನೆ ಬರಹವನ್ನು ಕಲಿಸಿ ಮಕ್ಕಳಲ್ಲಿ ಚೈತನ್ಯ ಮೂಡಿಸಿದರು. ಮಕ್ಕಳು ಕಲಿತು ಕನ್ನಡ ಸನ್ನೆ ಬರಹವನ್ನು ಮುಂದಿನ ಪೀಳಿಗೆಗೂ ತಲುಪಿಸಬೇಕು. ಪೀರಜಾದೆ ಅವರು ನಿವೃತ್ತಿಯ ನಂತರವೂ ಕ್ರಿಯಾಶೀಲವಾಗಿ ಮಕ್ಕಳಿಗೆ ಕನ್ನಡ ಸನ್ನೆ ಬರಹ ಕಲಿಸುತ್ತಿರುವುದು ಶ್ಲಾಘನೀಯ. ಬಹಾರ್ ಪೇಟೆ ಶಾಲೆಯ ಮಕ್ಕಳಿಗೆ ಕುಡಿಯುವ ನೀರು ಹಾಗೂ ಶಾಲಾ ಆವರಣದಲ್ಲಿ ಇಂಟರ್ಲಾಕ್ ಬ್ರಿಕ್ಸ್ ನಗರ ಸಭೆಯಿಂದ ಹಾಕಿಸಿಕೊಡುವಂತೆ ಮುಖಂಡ ಆದಿಲ್ ಪಟೇಲ್ ಅವರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಉರ್ದು ಶಾಲೆಯ ಕನ್ನಡ ನಿವೃತ್ತ ಶಿಕ್ಷಕ ಹಾಗೂ ಕನ್ನಡ ಸನ್ನೆ ಬರಹ ಸಂಶೋಧಕ ಸೈಯ್ಯದ್ ಗೌಸ್ ಮೊಹಿಯುದ್ದೀನ್ ಪೀರಜಾದೆ ಅವರಿಗೆ ಬಹಾರ್ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಸನ್ಮಾನಿಸಲಾಯಿತು.
ಶಾಲೆಯ ಶಿಕ್ಷಕಿಯರಾದ ಅನುರಾಧ ಕುಲಕರ್ಣಿ. ಗಂಗಾಂಬಿಕೆ ಶೀಲವಂತರ್. ಸೈಯ್ಯದ್ ದಾದಾಮಿಯ ಸಿಪಾಯಿ. ಸೈಯ್ಯದ್ ಹಯಾತ್ ಪೀರ ಹುಸೇನಿ (ಶೇರು) ಇರ್ಫಾನ್ ಜಿ. ಜಮೇದಾರ್ ಮುಂತಾದವರು ಉಪಸ್ಥಿತರಿದ್ದರು.
ಹಿರಿಯ ಶಿಕ್ಷಕಿ ಉಷಾ ಚಿಮ್ಮಲಗಿ ಪ್ರಾರ್ಥಿಸಿದರು. ಉರ್ದು ಶಾಲೆಯ ಶಿಕ್ಷಕ ಶ್ರೀನಿವಾಸ್ ಚಿತ್ರಗಾರ ಸ್ವಾಗತಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಉಮೇಶ್ ಬಾಬು ಸುರ್ವೆ ನಿರೂಪಿಸಿದರು. ಬಹಾರ್ ಪೇಟೆಯ ಉರ್ದು ಶಾಲೆಯ ಮುಖ್ಯೋಪಾಧ್ಯಾಯಿನಿ ತಬಸುಮ್ ವಂದಿಸಿದರು.
Get real time updates directly on you device, subscribe now.
Comments are closed.