೨೦೨೬ರ ರಾಜ್ಯ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆ

Get real time updates directly on you device, subscribe now.

ಕೊಪ್ಪಳ ಜ.೧೯: ನಗರದ ಶ್ರೀ ಗವಿಸಿದ್ಧೇಶ್ವರ ಪದವಿ
ಮಹಾವಿದ್ಯಾಲಯದಲ್ಲಿ ಬಿ.ಎ. ೫ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ
ಮಾಡುತ್ತಿರುವ ಕು. ಅಕ್ಷತಾ ನಾಗದೇವಿ ಎ ಇವರು ಕೊಪ್ಪಳ
ವಿಶ್ವವಿದ್ಯಾಲಯ, ಕೊಪ್ಪಳದ ಪ್ರತಿನಿಧಿಯಾಗಿ ಬೆಂಗಳೂರಿನಲ್ಲಿ
ಜರುಗಲಿರುವ ಗಣರಾಜ್ಯೋತ್ಸವದಲ್ಲಿ ಎನ್.ಎಸ್.ಎಸ್. ಪಥಸಂಚಲನಕ್ಕೆ
ಆಯ್ಕೆಯಾಗಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾರೆ. ಸದರಿ
ವಿದ್ಯಾರ್ಥಿನಿಗೆ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳು,
ಕುಲಸಚಿವರು ಹಾಗೂ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ
ಆಡಳಿತ ಮಂಡಳಿ, ಪ್ರಾಚಾರ್ಯರು, ಎನ್.ಎಸ್.ಎಸ್.
ಸಂಯೋಜನಾಧಿಕಾರಿಗಳು, ಬೋಧಕ ಮತ್ತು ಬೋಧಕೇತರ
ಸಿಬ್ಬಂದಿಗಳು ಮತ್ತು ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು
ಅಭಿನಂದಿಸಿರುತ್ತಾರೆ.

Selected for the 2026  Republic Day Parade

Get real time updates directly on you device, subscribe now.

Comments are closed.

error: Content is protected !!