ಕಬ್ಬಡ್ಡಿ ಬೀರಪ್ಪ ಅಂಡಗಿ ಪ್ರಥಮ ಸ್ಥಾನ: ಬಹುಮಾನ ವಿತರಣೆ

ಕೊಪ್ಪಳ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತಿಚೇಗೆ ಸರಕಾರಿ ನೌಕರರ ಸಂಘದ ಕ್ರೀಡಾಕೂಟದ ಜೊತೆಯಲ್ಲಿ ಜುರುಗಿದ ವಿಕಲಚೇತನ ನೌಕರರ ಕ್ರೀಡಾಕೂಟದ ಕಬ್ಬಡ್ಡಿ ಆಟದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ನಾಯಕತ್ವದ ತಂಡವು ಪ್ರಥಮ ಸ್ಥಾನವನ್ನು ಪಡೆಯಿತು.ವಿಕಲಚೇತನ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ ಮಾರನಬಸರಿ ಅವರ ನಾಯತ್ವದ ತಂಡ ದ್ವೀತಿಯ ಸ್ಥಾನವನ್ನು ಪಡೆಯಿತು.
ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದ ತಂಡಗಳಿಗೆ ಜಿಲ್ಲಾಧಿಕಾರಿಗಳಾದ ಸುರೇಶ ಇಟ್ನಾಳ ಅವರು ಬಹುಮಾನ ವಿತರಣೆ ಮಾಡಿದರು.
ಈ ಸಮಯದಲ್ಲಿ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ,ಸರಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರಾದ ನಾಗರಾಜ ಆರ್ ಜುಮ್ಮಣ್ಣನ್ನವರ,ರಾಜ್ಯ ಪರಿಷತ್ತಿನ ಸದಸ್ಯರಾದ ಆಸೀಫ ಅಲಿ,ಗೌರವಾಧ್ಯಕ್ಷರಾದ ಸಿದ್ದಪ್ಪ ಮೇಳಿ,ಖಜಾಂಚಿಗಳಾದ ಜಯತೀರ್ಥ ದೇಸಾಯಿ ಸೇರಿದಂತೆ ಅನೇಕರು ಹಾಜರಿದ್ದರು.
Comments are closed.