ಅವಾಚ್ಯ ಅಶ್ಲೀಲ ಪದಗಳ ಬಳಕೆಯ ಹಾಡುಗಳು : ವ್ಯಕ್ತಿಗಳ ಮೇಲೆ ಕ್ರಮಕ್ಕೆ ಆಗ್ರಹ

Get real time updates directly on you device, subscribe now.

ಇತ್ತಿಚೀನ ದಿನಗಳಲ್ಲಿ ಉತ್ತರಕರ್ನಾಟಕದಲ್ಲಿ ಹೆಚ್ಚುತ್ತಿರುವ ಅವಾಚ್ಯ ಅಶ್ಲೀಲ ಪದಗಳ ಬಳಕೆಯ ಹಾಡುಗಳನ್ನು ಮನರಂಜನ ಕಾರ್ಯಕ್ರಮಗಳಲ್ಲಿ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದುಬಿಡುತ್ತಿರುವ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸಲು ಕಲಾವಿದರು ಮನವಿ ಮಾಡಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ. ಜಿಲ್ಲೆಯ ವಾಧ್ಯಗೋಷ್ಠಿ  ಕಲಾವಿದರು ಇತ್ತಿಚೀನ ದಿನಮಾನಗಳಲ್ಲಿ ನಮ್ಮ ಉತ್ತರ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹಲವಾರು ವೇದಿಕೆ ಮೇಲೆ ಅವಾಚ್ಯ ಶಬ್ದಗಳ ಅಶ್ಲೀಲ ಪದಗಳನ್ನು ಹಾಡುತ್ತಿದ್ದು ಹಾಗೂ ಅಶ್ಲೀಲ ನೃತ್ಯಗಳು ಹೆಚ್ಚಾಗುತ್ತಿದ್ದು, ಇದರಿಂದ ನಮ್ಮ ಉತ್ತರ ಕರ್ನಾಟಕದ ಕೆಲವು ಯುವಕರು, ಕೆಲವು ಕಲಾವಿದರು ಇವುಗಳನ್ನು ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಡುತ್ತಿದ್ದು ಇವುಗಳಿಂದ ಯುವಕರ ಮೇಲೆ ಮತ್ತು ಶಾಲಾ-ಕಾಲೇಜ್ ಮಕ್ಕಳ ಬಹುಶ ಆಳಾಗುತ್ತಿದ್ದು, ಹಾಗೂ ಇದರಿಂದ ಕೆಲ ಕಲಾವಿದರು, ಹಾಳಾಗಿ ಈಗಾಗಲೇ ಜೈಲು ಪಾಲಾಗಿದ್ದಾರೆ? ನಮ್ಮ ಉತ್ತರ ಕರ್ನಾಟಕದಲ್ಲಿ ಇಂತಹ ಅಶ್ಲೀಲ ಅವಾಚ್ಯ ಪದಗಳನ್ನು ತಡೆಯಲು ನಿಮ್ಮ ಸಹಕಾರ ತುಂಬ ಮುಖ್ಯವಾಗಿದ್ದು ಕೂಡಲೇ ಪ್ರತಿಯೊಂದು ಪೋಲಿಸ್ ಠಾಣಾ ಮೂಲಕ ಪರವಾನಿಗೆ ನೀಡುವ ಸಂದಂರ್ಭದಲ್ಲಿ ಇಂತವುಗಳನ್ನು ನಡೆಯದಂತೆ ನೋಡಿಕೊಂಡು ಅಧಿಕಾರಿಗಳು ಸೂಚಿಸಿ ಪರವಾನಿಗೆ ನೀಡುವದು ಸೂಕ್ತ l ಪರವಾನಿಗೆ ನೀಡ ಕೂಡದು ಇದರಿಂದ ಇಂತಹ ವಿಷಯಗಳು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ಕಾರಣ ದಯಾವಿಟ್ಟು  ಕೂಡಲೇ ಇದರ ಬಗ್ಗೆ ಸೂಕ್ತ ರೀತಿಯಿಂದ ಕಾನೂನು ರೀತಿಯಾಗಿ ನಡೆಸಿಕೊಂಡು ಹೋಗಲು ಉತ್ತರ ಕರ್ನಾಟಕ ವಿವಿಧ ಕಾರ್ಯಕ್ರಮಗಳಿಗೆ ಪರವಾನಿಗೆ ನೀಡಬೇಕೆಂದು ವಿನಂತಿಸಿಕೊಂಡಿದ್ದಾರೆ. I ಸಂದರ್ಬದಲ್ಲಿ

ಕೊಪ್ಪಳ ಜಿಲ್ಲಾ ವಾದ್ಯಗೋಷ್ಠಿ ಕಲಾವಿದರು
ಬಾಷಾ ಕಿನ್ನಾಳ್ ಅಕ್ಬರ್ ಅಲಿ
ಶಿವಪ್ರಸಾದ್ ಮಾಠಪತಿ ಅಲ್ಲಾಬಕ್ಷಿ ಭೀಮನೂರ್
ಕನಕಪ್ಪಾ ಗಂಗಾವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು
ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!