ಅಕ್ರಮ ಪಡಿತರ ಅಕ್ಕಿ ಸಾಗಾಟದಾರರ ಬಂಧನ
ಮುನಿರಾಬಾದ : ಅಕ್ರಮ ಪಡಿತರ ಅಕ್ಕಿ ಸಾಗಾಟದಾರರ ಬಂಧಿಸಿ ಅಕ್ಕಿ ಮತ್ತು ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿತರಿಂದ ಅಂದಾಜು 3,45,000/-ರೂ. ಬೆಲೆಬಾಳುವ 150 ಕ್ವಿಂಟಾಲ್ ತೂಕದ 300 ಅಕ್ಕಿ ಮೂಟೆ ಚೀಲಗಳು ಹಾಗೂ ಕೃತ್ಯಕ್ಕೆ ಬಳಸಿದ 8,00,000/-ರೂ ಬೆಲೆ ಬಾಳುವ ಲಾರಿ ವಶ ಪಡೆಸಿಕೊಳ್ಳಲಾಗಿದೆ.
ದಿ. 04-09-2023 ರಂದು ರಾತ್ರಿ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿರಾಬಾದ್ ಹೊಸಪೇಟೆ ರಸ್ತೆಯ ಎನ್.ಹೆಚ್.-50 ರಸ್ತೆಯಲ್ಲಿ ಹೊಸಪೇಟೆ ಕಡೆಗೆ ಒಂದು ಲಾರಿಯು ಪಡಿತರ ಅಕ್ಕಿ ತುಂಬಿಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ , ಸುನೀಲ್ ಹೆಚ್ ಪಿ.ಎಸ್.ಐ(ಕಾ&ಸು)ರವರ ತಂಡವು ದಾಳಿ ಮಾಡಿ ಆರೋಪಿ ಚಾಲಕ ಮಂಜುನಾಥ ಕುಂದೂರು ಸಾ: ತರಲಗಟ್ಟ ಈತನನ್ನು ವಶಕ್ಕೆ ಪಡೆದು ಅಂದಾಜು 150 ಕ್ವಿಂಟಾಲ್ ತೂಕದ 300 ಅಕ್ಕಿ ಮೂಟೆ ಚೀಲಗಳು ಅಂದಾಜು ಮೌಲ್ಯ 3,45,000=00 ರೂ. ಹಾಗೂ 8,00,000=00 ರೂ ಮೌಲ್ಯದ ಕೃತ್ಯಕ್ಕೆ ಬಳಸಿದ ಲಾರಿ ಸಂಖ್ಯೆ: ಕೆ.ಎ 02 ಎಜೆ 3457 ಒಟ್ಟು 11,45,000=00 ರೂ ಮೌಲ್ಯವುಳ್ಳ ಲಾರಿ ಮತ್ತು ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.
ದಾಳಿ ಮಾಡಿದ ತಂಡದಲ್ಲಿ ಸುನೀಲ್ ಹೆಚ್ ಪಿ.ಎಸ್.ಐ (ಕಾ&ಸು) ಮುನಿರಾಬಾದ್, ಶ್ರೀಮತಿ ಮೀನಾಕ್ಷಿ ಪಿ.ಎಸ್.ಐ (ತನಿಖೆ) ಮುನಿರಾಬಾದ್, ಕೃಷ್ಣ ವಿ ಎ.ಎಸ್.ಐ ಹಾಗೂ ಸಿಬ್ಬಂದಿಯವರಾದ ಹನುಮಂತಪ್ಪ, ಅಂಜಿನಪ, ಮಹೇಶ ಸಜ್ಜನ್, , ಮಂಜುನಾಥ, ಶರಣಪ್ಪ, ನರಸಪ್ಪ, ನಿಂಗಪ್ಪ, ಶಶಿಕುಮಾರ ಕಾಳಿ, ಚಾಲಕರಾದ ವೆಂಕಟೇಶ, ಚಂದ್ರಶೇಖರ್ ರವರು ಇದ್ದು, ಎಸ್.ಪಿ ಯವರು ಶ್ಲಾಘನೆ ಮಾಡಿ ಅಧಿಕಾರಿ & ಸಿಬ್ಬಂದಿ ವರ್ಗದವರಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.
Comments are closed.