ಡಾ.ಮುಮ್ತಾಜ ಬೇಗಂಗೆ ಚೈತನ್ಯ ಸಿರಿ ಪ್ರಶಸ್ತಿ ಪ್ರಧಾನ

Get real time updates directly on you device, subscribe now.


ಗಂಗಾವತಿ,(ಕೊಪ್ಪಳ), ಡಿ.30-
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ತು ಆಯೋಜಿಸಿರುವ 5ನೇ ರಾಜ್ಯ ಸಮ್ಮೇಳನದಲ್ಲಿ ಕೊಪ್ಪಳ ವಿಶ್ವ ವಿದ್ಯಾಲಯದ ಗಂಗಾವತಿ ಎಸಕೆಎನಜಿ ಕಾಲೇಜಿನ ಪ್ರಾಧ್ಯಾಪಕಿ, ಲೇಖಕಿ ಡಾ.ಮುಮ್ತಾಜ್ ಬೇಗಂ ಅವರಿಗೆ ಚೈತನ್ಯ ಸಿರಿ ಪ್ರಶಸ್ರಿ ನೀಡಿ ಗೌರವಿಸಲಾಯಿತು.
ಗಿರಿನಾಡು ಯಾದಗೀರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಡಿಸೆಂಬರ್ 28,29 ಮತ್ತು 30 ಮೂರು ದಿನಗಳ ರಾಜ್ಯ ಮಟ್ಟದ ವಿಜ್ಞಾನ ಸಮ್ಮೇಳನ ಆಯೋಜಿಸಲಾಗಿತ್ತು. ಸೋಮವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ. ಮುಮ್ತಾಜ್ ಬೇಗಂ ಅವರಿಗೆ ಇಸ್ರೋ ವಿಜ್ಞಾನಿ ಕಿರಣಕುಮಾರ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಪರಿಷತ್ತಿನ ರಾಜ್ಯಧ್ಯಕ್ಷ ಹುಲಿಕಲ್ ನಟರಾಜ, ಸಮ್ಮೇಳನದ ಸರ್ವಾಧ್ಯಕ್ಷ ವಿಶ್ವರಾಧ್ಯ ಸತ್ಯಂಪೇಟೆ, ಕರ್ನಾಟಕ ಗಡಿ ಪ್ರಾಧಿಕಾರಿದ ಮಾಜಿ ಅಧ್ಯಕ್ಷ ಸಿ. ಸೋಮಶೇಖರ್ ವೇದಿಕೆ ಮೇಲೆ ಉಪಸ್ಥಿತರಿಧರು. ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರಶಸ್ತಿಗೆ ಅಯ್ಕೆಯಾಗಿದ್ದ 39 ಜನ ಮಹಿಳೆಯರಿಗೆ ಚೈತನ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!