ಅಜ್ಜನ ಜಾತ್ರೆಗೆ ಬಾ ಇಲ್ಲಿ ಗೀತೆ ಅಭಿನವ ಶ್ರೀಗಳಿಂದ ಬಿಡುಗಡೆ
ಕೊಪ್ಪಳ: ತಾಲೂಕಿನ ಬಿಸರಹಳ್ಳಿ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು,ಜಾಗೃತಿ ಗೀತೆಗಳ ರಚನೆಕಾರ ಹಾಗೂ ಸಾಹಿತಿ ಹನುಮಂತಪ್ಪ ಕುರಿ ಅವರು ಜ.೫,೬, ಹಾಗೂ ೭ ರಂದು ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿಯಾಗಿರುವ ಗವಿಮಠದ ಜಾತ್ರೆಯ ಕುರಿತಾದ, “ಕೊಪ್ಪಳ ಜಾತ್ರೆಗೆ ಬಾ ಇಲ್ಲಿ,ಅಜ್ಜನ ತೇರ ನೊಡಲ್ಲಿ” ಎಂಬ ಶಿರ್ಷಿಕೆಯ ಗೀತೆಯನ್ನು ಗವಿಮಠದ ಅಭಿನವಶ್ರೀಗಳು ಬಿಡುಗಡೆ ಮಾಡಿದರು.
ಈ ಗೀತೆಯನ್ನು ಎ.ಐ ತಂತ್ರಜ್ಞಾನವನ್ನು ಬಳಸಿಕೊಂಡು ರಚಿಸಿದ್ದು,ಸಂಪೂರ್ಣ ಗವಿಸಿದ್ದೇಶ್ವರ ಮಾಹಾಸ್ವಾಮಿಗಳ ಮಹಿಮೆ,ಜಾತ್ರೆ ಹಾಗೂ ಜಾಗೃತಿ ಕುರಿತಾದ ವಿಷಯಗಳನ್ನು ಒಳಗೊಂಡಿದೆ.
ಹನುಮAತಪ್ಪ ಕುರಿ ಅವರು ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಒಂದೊAದು ಗೀತೆಯನ್ನು ರಚನೆ ಮಾಡುತ್ತಿದ್ದು,ಈ ವರ್ಷದ ಗೀತೆ ಇದಾಗಿದೆ.
ಗೀತೆಯ ಸಂಪೂರ್ಣವಾದ ವಿಡಿಯೋವನ್ನ ವಿಕ್ಷಿಸಿದ ಶ್ರೀಗಳು ಇವರ ಕಾರ್ಯವನ್ನು ಹಾಗೂ ಗೀತೆಯು ಕೂಡಾ ಉತ್ತಮವಾಗಿ ಮೂಡಿ ಬಂದಿದೆ ಎಂದು ಹಾರೈಸಿದರು.
ಈ ಸಮಯಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ,ಸರಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿಗಳಾದ ಶರಣಪ್ಪ ರಡ್ಡೇರ,ಯುವ ಮುಖಂಡರಾದ ಸೋಮನಗೌಡ ಹಾಜರಿದ್ದರು.
ಪೋಟೊ: ಸಾಹಿತಿ ಹನುಮಂತಪ್ಪ ಕುರಿ ಅವರು ರಚನೆ ಮಾಡಿದ “ಕೊಪ್ಪಳ ಜಾತ್ರೆಗೆ ಬಾ ಇಲ್ಲಿ,ಅಜ್ಜನ ತೇರ ನೊಡಲ್ಲಿ” ಎಂಬ ಗೀತೆಯನ್ನು ಅಭಿನವಶ್ರೀಗಳು ಬಿಡುಗಡೆ ಮಾಡಿ ಗೀತೆಯನ್ನು ವಿಕ್ಷಣೆ ಮಾಡಿದರು.

Comments are closed.