ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಡಿ ಸುರೇಶ್ ರ ತಾಯಿ ಲಾಲವ್ವ (೮೫) ನಿಧನ

Get real time updates directly on you device, subscribe now.

ಕೊಪ್ಪಳ : ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಡಿ ಸುರೇಶ್ ಇವರ ತಾಯಿ ನಿಧನರಾಗಿದ್ದಾರೆ.

ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ  ಸುರೇಶ ಡಿ. ಅವರ ಮಾತೃಶ್ರೀ ಶ್ರೀಮತಿ ಲಾಲವ್ವ ಡಿ(೮೫)    ರವರು ಇಂದು (23-12-2025 ಮಂಗಳವಾರ ರಂದು) ಬೆಳಗಿನ ಜಾವ  ನಿಧನರಾಗಿದ್ದಾರೆ. ಅವರಿಗೆ ೮೫ ವರ್ಷ ವಯಸ್ಸಾಗಿತ್ತು.

ಒಂಬತ್ತು ಜನ ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ಹನುಮಂತಪ್ಪ, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಆರ್ ಟಿ ನಗರದ ಸಿಪಿಐ ಚಿತ್ತರಂಜನ್, ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಸುರೇಶ್ ಡಿ, , ಶಿಕ್ಷಕರಾಗಿರುವ ದುಶಾಂತ್ ನಾಯಕ್,  ವೀರಣ್ಣ, ವಿಜಯಕುಮಾರ್, ದಾರಾಸಿಂಗ್,  ಸುಶೀಲಬಾಯಿ ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ದಿನಾಂಕ : 23-12-2025 ರಂದು ಸಂಜೆ 4:30 ಗಂಟೆಗೆ ಅವರ ಸ್ವ-ಗ್ರಾಮವಾದ ಹಡಗಲಿ ತಾಲೂಕಿನ ಮುದ್ಲಾಪುರ ಹೊಸ ತಾಂಡದಲ್ಲಿ ನೆರವೆರಿಸುವುದು ಎಂದು ಕುಟುಂಬದ ಮೂಲಗಳು ಹೇಳಿವೆ.

Get real time updates directly on you device, subscribe now.

Comments are closed.

error: Content is protected !!