ನೃಪತುಂಗ ಕೆರೆಗೆ ಅನುದಾನ ಕಲ್ಪಿಸಬೇಕು : ರಷೀದ್ ಅಹ್ಮದ್ ಹಣಜಗಿರಿ

Get real time updates directly on you device, subscribe now.

ಕುಕನೂರು :
ಕಳೆದ 10 ವರ್ಷಗಳ ಹಿಂದೆ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯವಾಗಲೆನ್ನುವ ಸದುದ್ದೇಶದಿಂದ ನಿರ್ಮಿಸಿದ
ಕುಕನೂರು ಸಮೀಪದ ಮಂಡಲಗಿರಿ ರಸ್ತೆ ಪಕ್ಕದಲ್ಲಿರುವ ನೃಪತುಂಗ ಗೆಳೆಯರ ಬಳಗದ
ಕೆರೆ ನಿರ್ಮಾಣ ಕಾರಣಾಂತರದಿಂದ ಅರ್ಧಕ್ಕೆ ನಿಂತಿದ್ದು, ಜೀರ್ಣೋದ್ಧಾರದ ಕಾರ್ಯವಾಗುಬೇಕಿದೆ ಎಂದು ನೃಪತುಂಗ ಗೆಳೆಯರ ಬಳಗದ ಹಿರಿಯ ಸದಸ್ಯ ರಷೀದ್ ಅಹ್ಮದ್ ಹಣಜಗಿರಿ ನುಡಿದರು.

ಸ್ಥಳೀಯ ಕಾಶ್ಮೀರ ಗ್ರಾನೈಟ್ ಸಭಾಂಗಣದಲ್ಲಿ ಸರ್ವ ಸದಸ್ಯರು ಹಾಗೂ ಸಮಾನ ಮನಸ್ಕ ಬಳಗವನ್ನುದ್ಧೇಶಿಸಿ ಮಾತನಾಡಿದ ಅವರು, ಕುಕನೂರು ತಾಲ್ಲೂಕ ಆಗಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ 4 ಎಕರೆ ಭೂಮಿಯಲ್ಲಿ ಬೃಹತ್ ಕೆರೆಯ ಜೊತೆಗೆ ವಿಶ್ರಾಂತಿಗಾಗಿ ಬರುವ ಸಾರ್ವಜನಿಕರಿಗೆ ಪಾರ್ಕ್ ವ್ಯವಸ್ಥೆ ಮಾಡುವ ಯೋಜನೆ ಇದೆ ಎಂದ ಅವರು, ಮುಖಂಡರಾದ ಸತ್ಯ ನಾರಾಯಣ ಹರಪನಹಳ್ಳಿ ಅವರ ಜೊತೆ ಸಮಾಲೋಚನೆ ನಡೆಸಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರ ಮುಖಾಂತರ ನೃಪತುಂಗ ಕೆರೆ
ಪುನರುಜ್ಜೀವನ ಕಾಮಗಾರಿಗೆ ಅನುದಾನ ಮಂಜೂರು ಮಾಡಿಸಬೇಕಿದೆ ಎಂದರು.
ವಿಷ್ಣು ಚಿಲಗೋಡ ಮಾತನಾಡಿ ನೆರೆ ಹಾವಳಿಯಿಂದ ತುತ್ತಾದ ಜನಕ್ಕೆ ಯಾವುದೇ ಬೇಧ ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಅನ್ನ ದಾಸೋಹ ಮಾಡಿದ್ದೇವೆ. ನಮಗೆ ಪುಣ್ಯ ಬರುತ್ತದೆ ಅದಕ್ಕಾಗಿ ನಾವು ಮಾಡುತ್ತೇವೆ ಎನ್ನುವುದು ತಪ್ಪು ಗ್ರಹಿಕೆಯಾಗಿದೆ. ಪರರ ಸಂಕಷ್ಟಕ್ಕೆ ಸ್ಪಂದಿಸುವದು, ಪರರ ಹಿತ ಕಾಪಾಡುವುದು ನಮ್ಮ ಕರ್ತವ್ಯ ಮತ್ತು ಮನುಷ್ಯ ಧರ್ಮ ಎಂದರು.
ತಾಲ್ಲೂಕ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಕುಮಾರ ನಾಗಲಾಪೂರಮಠ ಮಾತನಾಡಿ ಕರೋನಾ ಬಂದು ನಮ್ಮೆಲ್ಲರಿಗೂ ಪಾಠ ಕಲಿಸಿ ಹೋಗಿದೆ, ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವದನ್ನು ಕಲಿಸಿದೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಸಿದ್ದು ಉಳ್ಳಾಗಡ್ಡಿ ಮಾತನಾಡಿ ನೃಪತುಂಗ ಸಂಘದಿಂದ ಗೋ ಶಾಲೆ ತೆರೆದು ಜಾನುವಾರುಗಳ ರಕ್ಷಣೆಗೆ ಮುಂದಾಗುವಂಥ ಮಹತ್ವದ ಕಾರ್ಯ ಮಾಡಿದ್ದೇವೆ ಎಂದರು.

ಗೂಡುಸಾಬ ಮಕಾನದಾರ,ಪತ್ರಕರ್ತ ಅಲ್ಲಾವುದ್ದೀನ ಯಮ್ಮಿ, ಯಲ್ಲಪ್ಪ ಹಳ್ಳದ, ಮಾರುತಿ ದಿವಟರ,ಶಿವಲಿಂಗಪ್ಪ ಕಡಬಗೇರಿ, ದೊಡ್ಡಬಸಪ್ಪ ಬೂದಗುಂಪಿ, ಮುಂತಾದವರು ಮಾತನಾಡಿದರು.
ಅಬ್ದುಲ್ ಖದೀರ್ ದೇವದುರ್ಗ, ಜಯಸಿಂಗ್ ಜಾಧವ್, ಆನಂದ ಕೊಚಲಾಪೂರ, ಮಹೇಶ ಉಡುಪಿ, ರಾಜಾಸಾಬ ಕುದರಿ, ರಾಜು ಜೈನ್, ನಾಗರಾಜ ಕುರಿ, ಮಂಜುನಾಥ ತಾಮ್ರಗುಂಡಿ, ಮಹೇಂದ್ರ ಜೈನ್, ಸುರೇಶ ಯತ್ನಟ್ಟಿ ಮುಂತಾದವರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!