ಮೈನಹಳ್ಳಿ ಬಸವರಾಜಯ್ಯ ತೋಟದವರಿಗೆ ಅಮೇರಿಕಾದ (USA) ಟೆಕ್ಸಾಸ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ ಪದವಿ

ಕೊಪ್ಪಳ : ತಾಲುಕಿನ ಮೈನಹಳ್ಳಿ ಗ್ರಾಮದ ಸಾಹಿತಿ, ರಂಗಭೂಮಿ ಕಲಾವಿದ ಡಾ. ಷಣ್ಮುಖಯ್ಯ ಎ. ತೋಟದರ ಪುತ್ರನಾದ ಬಸವರಾಜಯ್ಯನವರು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಅಮೇರಿಕಾದ ( USA) ಎಲಿಪಾಸೊದ ಟೆಕ್ಸಾಸ್ ವಿಶ್ವ ವಿದ್ಯಾಲಯದಲ್ಲಿ ಎಂ.ಎಸ್.ಸ್ನಾತಕೊತ್ತರ ಪದವಿ ಮುಗಿಸಿ , ಅದೇ ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತ ” ಇಮೇಜ್ ಅ್ಯಂಡ್ ಸಿಗ್ನಲ್ ಪ್ರೊಸೆಶಿಂಗ್ ಮೇತಡ್ ಪಾರ್ ಕ್ಲಿನಿಕಲ್ ಡಿಸಿಜನ್ ಸಪೋರ್ಟ ” ( image and signal processing methods for clinicial Decision support ) ಎಂಬ ವಿಷಯದ ಮೇಲೆ ಚೇರ್ ಪರ್ಸನ್ ಡಾ. ಕಬರೇರಾ ಸಿರಾಗೋ ‘ಡಿ’
ಕೋ, ಚೇರ್ ಪರ್ಸನ್ ಡಾ. ಅಭಿಷಿನ್ ಜೈನೂಟ್ ಎಂ.ಡಿ. ಹಾಗು ಇನ್ನಿತರ ಮೆಂಬರಗಳ ಸಹ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ ಪ್ರಬಂದ ಮಂಡಿಸಿದ ಬಸವರಾಜಯ್ಯ ಷಣ್ಮಖಯ್ಯ ತೋಟದವರಿಗೆ ದಿನಾಂಕ 13/12/025 ರಂದು ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯುತು.
ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿ.ಎಚ್.ಡಿ ಮತ್ತು ಎಂ.ಎಸ್.ಸ್ನಾತಕೋತ್ತರ ಪದವಿ ಪಡೆದ ನೂರಾರು ವಿದ್ಯಾರ್ಥಿಗಳಿಗೆ ಕುಲಪತಿಗಳು, ಭೋದಕ, ಭೋದಕೇತರರು . ಸಿಬ್ಬಂದಿ ವರ್ಗದವರ ಮತ್ತು ಸಾವಿರಾರು ಪಾಲಕರ ಸಮ್ಮುಖದಲ್ಲಿ ಪದವಿ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು. ಡಾ. ಬಸವರಾಜಯ್ಯ ನವರಿಂದ ಗ್ರಾಮಕ್ಕೆ. ತಾಲ್ಲೂಕಿಗೆ, ನಾಡಿಗೆ ದೇಶಕ್ಕೆ ಗೌರವ ತಂದಿದ್ದಾರೆ. ಅವರ ಈ ಸಾಧನೆಗೆ ಉರಿನ ಗುರು ಹಿರಿಯರು ಸ್ನೇಹಿತರು, ಸಂಬಂಧಿಕರು ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ
Comments are closed.