ಬಾಲಚಂದ್ರನ್ ಎಸ್  ಅಧ್ಯಕ್ಷತೆ :  ಕೊಪ್ಪಳ ತಾಲೂಕಿನ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

Get real time updates directly on you device, subscribe now.

ಕೊಪ್ಪಳ ತಾಲೂಕಿನ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ.ಬಾಲಚಂದ್ರನ್ ಎಸ್ ರವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆ


ಕೊಪ್ಪಳ:-ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳು ಸಮರ್ಪಕವಾಗಿ ಅನುಷ್ಠಾನಿಸಲು ಕೊಪ್ಪಳ ತಾಲೂಕ ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯು ಬಾಲಚಂದ್ರನ್ ಎಸ್ ರವರ ಅಧ್ಯಕ್ಷತೆಯಲ್ಲಿ ದಿ:20ರಂದು ಕೊಪ್ಪಳ ತಾಲೂಕ ಪಂಚಾಯತಿಯ ಸಭಾಂಗಣದಲ್ಲಿ ಜರುಗಿತು.


ಗೃಹಲಕ್ಷ್ಮಿ ಫಲಾನುಭವಿಗಳಿಗೆ ಅಗಸ್ಟ-2025ರವರೆಗೆ ಅನುದಾನ ಜಮೆಯಾಗಿರುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಸಭೆಯಲ್ಲಿ ಗಮನಕ್ಕೆ ತಂದರು. ಸಪ್ಟಂಬರ್‌-2025ರ ಪಾವತಿಗೆ ಬಾಕಿ ಇದ್ದು ಖಜಾನೆಯಿಂದ ಹೊಂದಾಣಿಕೆ ಮಾಡಬೇಕಾಗಿರುತ್ತದೆ. ಸದಸ್ಯರಾದ ಅನ್ನದಾನಯ್ಯಸ್ವಾಮಿ ಮಾತನಾಡಿ ಮತ್ತೂರು ಗ್ರಾಮದಲ್ಲಿ ಗೃಹಲಕ್ಷ್ಮೀ ಯೋಜನೆಗೆ 07 ಮಹಿಳೆಯರು ಇದುವರೆಗೆ ಅರ್ಜಿ ಸಲ್ಲಿಸಿರುವದಿಲ್ಲ. ಅರ್ಜಿ ಹಾಕಲು ಅವಕಾಶವಿದೆಯೆ ಎಂದು ಕೇಳಿದಾಗ ಅರ್ಜಿ ಸಲ್ಲಿಸುವ ನಿರಂತರ ಪ್ರಕ್ರಿಯೆಯಲ್ಲಿದ್ದು ಕಛೇರಿಗೆ ಪಡಿತರ ಚೀಟಿ ಹಾಗು ಅಗತ್ಯ ದಾಖಲಾತಿಗಳೊಂದಿಗೆ ಆಗಮಿಸಿದಲ್ಲಿ ಅರ್ಜಿಯನ್ನು ಆನ್‌ಲೈನ್‌ ನಮೂದಿಸಲಾಗುತ್ತದೆ ಎಂದರು.

ಜಿಎಸ್‌ಟಿ, ಐಟಿ ನೊಂದಣಿ ಇದ್ದವರು ಯೋಜನೆ ಸೌಲಭ್ಯ ಪಡೆಯಲು ಅರ್ಹರಿರುವದಿಲ್ಲ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಕೊಪ್ಪಳದಿಂದ ಮಂಗಳೂರು ಕಡೆಗೆ ಸಂಚರಿಸುವ ಬಸ್ ಬೆಟಗೇರಿ ಗ್ರಾಮಕ್ಕೆ ಬರುತ್ತಿರುವದಿಲ್ಲ. ಕಡ್ಡಾಯವಾಗಿ ಬೆಟಗೇರಿ ಗ್ರಾಮಕ್ಕೆ ಬರುವಂತೆ ಕ್ರಮವಹಿಸಲು ಸದಸ್ಯರಾದ ಅನ್ನದಾನಸ್ವಾಮಿ ಸಭೆಯಲ್ಲಿ ತಿಳಿಸಿದರು. ಮಧ್ಯಾಹ್ನದ ಅವಧಿಯಲ್ಲಿ ಕೊಪ್ಪಳದಿಂದ ಮುಂಡರಗಿ ಮಾರ್ಗವಾಗಿ ಸಂಚರಿಸುವ ಬಸ್‌ ಗಳನ್ನು ಬೆಟಗೇರಿ ಮಾರ್ಗವಾಗಿ ಸಂಚರಿಸುವಂತೆ ಸಭೆಯಲ್ಲಿ ತಿಳಿಸಿದರು. ಕೊಪ್ಪಳದಿಂದ ಹೊಸಪೇಟೆಗೆ ಸಂಚರಿಸುವ ಬಸ್‌ಗಳು ವಾಯಾ ಮುನಿರಾಬಾದ ಡ್ಯಾಂ ಒಳಗಡೆ ಬರುತ್ತಿರುವದಿಲ್ಲ. ಈ ಬಗ್ಗೆ ಕ್ರಮವಹಿಸುವಂತೆ ಅಧ್ಯಕ್ಷರು ಘಟಕ ವ್ಯವಸ್ಥಾಪಕರಿಗೆ ಸೂಚಿಸಿದರು. ಬಳ್ಳಾರಿ ಮತ್ತು ಕುರಗೋಡ ಘಟಕದ ವಾಹನಗಳಿಂದ ತೊಂದರೆಯಾಗಿದ್ದು ಕೊಪ್ಪಳದ ಘಟಕದ ಎಲ್ಲಾ ಬಸ್‌ ಗಳು ಮುನಿರಾಬಾದ ಡ್ಯಾಂ ಮೂಲಕ ಪ್ರಯಾಣಿಸುತ್ತವೆ ಎಂದರು.
ಗೃಹಜ್ಯೋತಿ ಬರುವ ಮುಂಚೆ ವಿದ್ಯುತ್‌ ಬಾಕಿ ಬಿಲ್‌ ಉಳಿಸಿಕೊಂಡಿದ್ದು ಅದನ್ನು ಯಾವ ರೀತಿ ವಸೂಲಾತಿ ಮಾಡಲಾಗುವದು ಎಂಬುದರ ಬಗ್ಗೆ ಸದಸ್ಯರು ಕೇಳಿದಾಗ ಅಧಿಕಾರಿಗಳು ಗ್ರಾಹಕರನ್ನು ಮನವೋಲಿಸಿ ವಸೂಲಾತಿ ಮಾಡುದಾಗಿ ಸಭೆಯಲ್ಲಿ ತಿಳಿಸಿದರು. ಸದಸ್ಯರಾದ ಅನ್ನದಾನಯ್ಯಸ್ವಾಮಿ ಮಾತನಾಡಿ ಬೆಟಗೇರಿ ಗ್ರಾಮದಲ್ಲಿ ಗ್ರಾಮ ವಿದ್ಯುತ್‌ ಪ್ರತಿನಿಧಿ ಬಿಲ್‌ ವಿತರಿಸುವಾಗ ಗ್ರಾಹಕರ ಜೊತೆಗೆ ಅನುಚಿತವಾಗಿ ವರ್ತಿಸುತ್ತಾರೆ ಈ ಬಗ್ಗೆ ಅವರ ಮೇಲೆ ಸೂಕ್ತ ಕ್ರಮವಹಿಸುವಂತೆ ಸಭೆಯ ಗಮನಕ್ಕೆ ತಂದರು. ಜೆಸ್ಕಾಂ ಅಧಿಕಾರಿಗಳು ಈಗಾಗಲೇ ಅವರಿಗೆ ನೋಟಿಸ್‌ ನೀಡಲಾಗಿದ್ದು ಬೇರೆ ಗ್ರಾಮ ವಿದ್ಯುತ್‌ ಪ್ರತಿನಿಧಿ ನೇಮಕಾತಿಗೆ ಕ್ರಮವಹಿಸಲಾಗುವದು.ಸದಸ್ಯರಾದ ದೇವರಾಜ ನಡುವಿನಮನಿ ಮಾತನಾಡಿ ನಗರಪ್ರದೇಶದಲ್ಲಿ ಜಂಗಲ್‌ ಕಟಿಂಗ್‌ ಮಾಡುವಂತೆ ತಿಳಿಸಿದರು. ಕೊಪ್ಪಳ ಜಾತ್ರೆ ನಿಮಿತ್ಯ ಶೀಘ್ರದಲ್ಲಿ ಕ್ರಮವಹಿಸಲಾಗುವದು ಎಂದು ವಿವರಿಸಿದರು.
ಸನದುದಾರರು ಪಡಿತರ ವಿತರಣೆಯ ಸಮಯದಲ್ಲಿ ವಾಟ್ಸಪ್‌ ಗ್ರುಪ್‌ ನಲ್ಲಿ ವಿತರಣೆ ಹಾಗು ತಾಂತ್ರಿಕ ತೊಂದರೆಗಳು ಕಂಡು ಬಂದಲ್ಲಿ ಗ್ರುಪ್‌ ನಲ್ಲಿ ಮಾಹಿತಿಯನ್ನು ಹಂಚಿಕೊಳ್ಳುವಂತೆ ಸದಸ್ಯರಾದ ಲಕ್ಷ್ಮಣ ಡೊಳ್ಳಿನ ತಿಳಿಸಿದರು. ಗ್ಯಾರಂಟಿ ಸಮಿತಿಯ ನಾಮಫಲಕ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಳವಡಿಸುವದು ಹಾಗು ಸಂದರ್ಶನ ಪುಸ್ತಕ ಕಡ್ಡಾಯವಾಗಿ ನಿರ್ವಹಿಸುವಂತೆ ಸದಸ್ಯರಾದ ಜ್ಯೋತಿ ಗೊಂಡಬಾಳ ತಿಳಿಸಿದರು. ಸದಸ್ಯರಾದ ದೇವರಾಜ ನಡುವಿನಮನಿ ಮಾತನಾಡಿ ಪಡಿತರ ವಿತರಣೆಯನ್ನು ಸ್ಥಳೀಯ ಕಾರ್ಡುದಾರರಿಗೆ ವಿತರಣೆ ಮಾಡಿ ನಂತರ ಹೊರಗಿನ ಕಾರ್ಡದಾರರಿಗೆ ವಿತರಣೆ ಮಾಡುವಂತೆ ತಿಳಿಸಿದರು. ಪಇತರ ವಿತರಣೆ ಸಮಯದಲ್ಲಿ ಇಲಾಖಾಧಿಕಾರಿಗಳು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಂದರ್ಶನ ಪುಸ್ತಕದಲ್ಲಿ ವಿವರವನ್ನು ನೊಂದಾಯಿಸಿರಿ ಮತ್ತು ವಾಟ್ಸಪ್‌ ಗ್ರುಪ್‌ನಲ್ಲಿ ಪರಿಶೀಲಿಸಿದ ಕುರಿತು ಪೊಟೊ ಹಂಚಿಕೊಳ್ಳುವಂತೆ ತಿಳಿಸಿದರು.
ಯುವ ನಿಧಿ ಸೌಲಭ್ಯ ಕುರಿತು ಇಲಾಖಾ ವತಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಕೈಗೊಂಡು ನಿರುದ್ಯೋಗ ಯುವಕರು ಯುವ ನಿಧಿ ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವಂತೆ ಇಲಾಖಾಧಿಕಾರಿಗಳಿಗೆ ಸಭಾಧ್ಯಕ್ಷರು ನಿರ್ದೇಶನ ನೀಡಿದರು. ಜುಲೈ, 2025ರವರೆಗೆ ಅನುದಾನ ಜಮೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದರು. ಸದಸ್ಯರಾದ ಜ್ಯೋತಿ ಗೊಂಡಬಾಳ ಮಾತನಾಡಿ ಹೊಸದಾಗಿ ಫಲಾನುಭವಿ ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳು ಉಂಟಾಗುತ್ತಿದ್ದು ಅಧಿಕಾರಿಗಳಿಗೆ ಸಂಪರ್ಕಿಸಿದಲ್ಲಿ ಸೂಕ್ತ ಸಲಹೆ ನೀಡುವಂತೆ ತಿಳಿಸಿದರು. ಕೇಂದ್ರ ಗ್ರಂಥಾಲಯದಲ್ಲಿ ಯೋಜನೆಗಳ ಕುರಿತು ಪತ್ರಿಕಾ ಪ್ರಕಟಣೆ ಹಾಗು ಮಾಧ್ಯಮಗಳ ಮೂಲಕ ಪ್ರಚುರಪಡಿಸಿರಿ ಇದರಿಂದ ಸಾರ್ವಜನಿಕರು ಹೆಚ್ಚಿನ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ.
ಸಭೆಯಲ್ಲಿ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಅನುಷ್ಠಾನ ಸಮಿತಿ ಸದಸ್ಯರಾದ ದೇವರಾಜ ನಡುವಿನಮನಿ, ಜ್ಯೋತಿ ಗೊಂಡಬಾಳ, ಸವಿತಾ ಗೊರಂಟ್ಲಿ, ಅನ್ನದಾನಯ್ಯಸ್ವಾಮಿ, ಪರಶುರಾಮ ಕೊರವರ, ಲಕ್ಷ್ಮಣ ಡೊಳ್ಳಿನ, ಪಂಚ ಗ್ಯಾರಂಟಿ ಯೋಜನೆಗಳ ಇಲಾಖಾಧಿಕಾರಿಗಳು, ತಾಲೂಕ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!