ಬೈಕ್‌ಗೆ ಬೊಲೆರೋ ಢಿಕ್ಕಿ: ಮೂವರು ಯುವಕರ ಸಾವು
ಕೊಪ್ಪಳ : ಕೊಪ್ಪಳದಲ್ಲಿ ನಡೆದ ಬೀಕರ ಅಪಘಾತಕ್ಕೆ ಮೂವರು ಯುವಕರು ಬಲಿಯಾಗಿದ್ದಾರೆ. ಬೈಕ್‌ಗೆ ಬೊಲೆರೋ ವಾಹನ ಢಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜಾಹುಸೇನ್(18), ಆಸೀಫ್(16) ಮತ್ತು ವಾಜಿದ್(19) ಮೃತರು. ಈ ಮೂವರು ಶ್ರೀರಾಮನಗರದಿಂದ ಹೊಸಹಳ್ಳಿಗೆ ಬೈಕ್‌ನಲ್ಲಿ ಹೋಗುವಾಗ ಇಂದರಗಿ ಗ್ರಾಮದ ಸಮೀಪ ಬೊಲೆರೋ ವಾಹನ ಢಿಕ್ಕಿಯಾಗಿದೆ.ಅಪಘಾತದ ಬಳಿಕ ಬೊಲೆರೋ ಬಿಟ್ಟು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.ಅಪಘಾತದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Comments are closed.