ಬಲ್ಡೋಟಾ ಕಾರ್ಖಾನೆ ವಿರುದ್ಧದ ಹೋರಾಟ ಬೆಳಗಾವಿಗೆ: ಅಲ್ಲಮಪ್ರಭು ಬೆಟ್ಟದೂರು
ಎ.ಟಿ.ರಾಮಸ್ವಾಮಿ 50ನೇ ದಿನದ ಧರಣಿಗೆ ಆಗಮನ
ಕೊಪ್ಪಳ: ನಗರಸಭೆ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ 45ನೇ ದಿನದ ಅನಿರ್ದಿಷ್ಟ ಧರಣಿಯನ್ನು ಜಂಟಿ ಕ್ರಿಯಾ ವೇದಿಕೆಯ ಪ್ರಮುಖರು ನಡೆಸಿದರು.
ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ-ಸುಮಿ, ಎಕ್ಸ್ ಇಂಡಿಯಾ ವಿಸ್ತರಣೆ ವಿರೋಧಿಸಿದ 1.5 ಲಕ್ಷ ಜನರ ಆತಂಕವನ್ನು ದೂರ ಮಾಡಲು ಮುಂದಾಗಬೇಕಾದ ಶಾಸಕರು, ಸಚಿವರು, ಮುಖ್ಯಮಂತ್ರಿಗಳ ಸಲಹೆಗಾರರು ಅಧಿವೇಶನದಲ್ಲಿ ಮೌನ ಮುರಿದು ವಿರೋಧ ಮಾಡುತ್ತಿಲ್ಲ. ಆದರೆ ಕೊಪ್ಪಳ ಮಾಧ್ಯಮ, ಹೋರಾಟಗಾರರು ಕೇಳಿದಾಗ ನಾವೇ ಮೊದಲು ವಿರೋಧ ಮಾಡುತ್ತೇವೆ ಎನ್ನುತ್ತಾರೆ. ಇವರ ನಿಲುವು ಅನುಮಾನಾಸ್ಪದವಾಗಿದ್ದು, ಜನರ ಆತಂಕ ಹೆಚ್ಚು ಮಾಡಿದೆ. ಆದ್ದರಿಂದ ಈ ಪ್ರತಿಭಟನೆಯನ್ನು ಬೆಳಗಾವಿ ಅಧಿವೇಶನದ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಕೊಪ್ಪಳ ಜನ ದಿ:16.12.2025ರಂದು ಮಂಗಳವಾರ ಬೆಳಗಾವಿ ಅಧಿವೇಶನ ಚಲೋ ನಡೆಸಲು ಕರೆ ಕೊಡಲಾಗಿದೆ” ಎಂದರು.
ಸತ್ಯಾಗ್ರಹದ 50ನೇ ದಿನ 19.12.2025ರಂದು ಬೃಹತ್ ಸಮವೇಶ ನಡೆಸಲಾಗುವುದು. ಅಂದು ಮುಖ್ಯ ಅತಿಥಿಗಳಾಗಿ ಬೆಂಗಳೂರು ಪರಿಸರಕ್ಕಾಗಿ ನಾವು ಚಳವಳಿಯ ಅಧ್ಯಕ್ಷರು ಎ.ಟಿ. ರಾಮಸ್ವಾಮಿ ಭಾಗವಹಿಸುತ್ತಾರೆ. ಇನ್ನು ಕೆಲವು ಪ್ರಖ್ಯಾತರು ಭಾಗವಹಿಸುತ್ತಿದ್ದು ನಗರ ಮತ್ತು ಬಾಧಿತ ಹಳ್ಳಿಗಳ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಕೋರಲಾಗಿದೆ.
ಧರಣಿಯಲ್ಲಿ ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್, ಸಿ.ವಿ. ಜಡಿಯವರ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ.ಗೊಂಡಬಾಳ, ಡಿ.ಎಂ.ಬಡಿಗೆರ್, ಎಸ್.ಬಿ. ರಾಜೂರು, ಶಂಭುಲಿಂಗಪ್ಪ ಹರಗೇರಿ, ಬಸವರಾಜ್ ಶೀಲವಂತರ, ಮಹಾಂತೇಶ ಕೊತಬಾಳ, ತಿಮ್ಮಣ್ಮ ಭೋವಿ ಬೆಂಕಿನಗರ, ಬಿ.ಜಿ.ಕರಿಗಾರ್, ವೈ.ಬಿ.ಶಾಂತಮ್ಮ, ಜಿ.ಬಿ.ಪಾಟೀಲ್, ಮಾರುತಿ ಮ್ಯಾಳಿ ಪಾಲ್ಗೊಂಡರು.

Comments are closed.