ಅನಿಕೇತ ಬಳ್ಳಾರಿಗೆ ಬಾಲವಿಕಾಸ ಅಕಾಡೆಮಿಯ ರಾಜ್ಯಮಟ್ಟದ ‘ಬಾಲಗೌರವ ಪ್ರಶಸ್ತಿ’ :

Get real time updates directly on you device, subscribe now.

ಅಣ್ಣನ ಮಗ ಅನಿಕೇತ ರಾಜೇಶ ಬಳ್ಳಾರಿ ಕರ್ನಾಟಕ ಸರಕಾರ ಕೊಡ ಮಾಡುವ ಪ್ರತಿಷ್ಠಿತ ‘ಬಾಲ ವಿಕಾಸ ಅಕಾಡೆಮಿ’ಯ ‘ಅಕಾಡೆಮಿ ಬಾಲ ಗೌರವ’ ಪ್ರಶಸ್ತಿಗೆ ಆಯ್ಕೆ ಆಗಿದ್ದಾನೆ.

ಉತ್ತಮ ಈಜು ಮತ್ತು ನೃತ್ಯಪಟುವಾಗಿರುವ ಅನಿಕೇತ ‘ನಮ್ಮ ಭಾಷೆ – ನಮ್ಮ ಕನ್ನಡ’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಬಾಲನಟನಾಗಿ ಅಭಿನಯಿಸಿದ್ದಾನೆ.

ಕಳೆದ 2024-25 ನೇ ಸಾಲಿನಲ್ಲಿಯೂ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಯೋಜನೆಯಡಿಯಲ್ಲಿ ಕೊಡಮಾಡಲಾದ ಹತ್ತು ಸಾವಿರ ರೂಪಾಯಿ ನಗದು ಬಹುಮಾನದ ‘ಕೊಪ್ಪಳ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭಾ ಪುರಸ್ಕಾರ’ವೂ ಅನಿಕೇತನಿಗೆ ಲಭಿಸಿತ್ತು.

ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ 7 ನೇ ತರಗತಿ ಓದುತ್ತಿರುವ ಅನಿಕೇತನಿಗೆ ಬಾಲ ವಿಕಾಸ ಅಕಾಡೆಮಿಯ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಇದೇ ಡಿಸೆಂಬರ್ 16, ಮಂಗಳವಾರದಂದು ಬೆಳಗಾವಿಯ ಸುವರ್ಣಸೌಧದ ಗಾಂಧಿ ಪ್ರತಿಮೆಯ ಬಳಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್, ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಸೇರಿ ಹಲವು ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

Get real time updates directly on you device, subscribe now.

Comments are closed.

error: Content is protected !!