ಡಾ.ನಾಗರಾಜ ದಂಡೋತಿಗೆ ಉತ್ತಮ ಎನ್.ಎಸ್.ಎಸ್ ಅಧಿಕಾರಿ ಪ್ರಶಸ್ತಿ
ಕೊಪ್ಪಳ, ಡಿ,೧೧- ನಗರದ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಮತ್ತು ರಾಷ್ಟಿçÃಯ ಸೇವಾ ಯೋಜನಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಡಾ.ನಾಗರಾಜ ದಂಡೋತಿಯವರಿಗೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ನೀಡುವ ೨೦೨೩-೨೪ನೇ ಸಾಲಿನ ಉತ್ತಮ ಎನ್.ಎಸ್.ಎಸ್ ಅಧಿಕಾರಿ ಪ್ರಶಸ್ತಿ ಲಭಿಸಿದೆ. ಜೊತೆಗೆ ಮಹಾವಿದ್ಯಾಲಯದ ಬಿ.ಎ ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಶಶಿಕುಮಾರ ಉಳ್ಳಾಗಡ್ಡಿ ಹಾಗೂ ಮುತ್ತಣ್ಣ ಎಂಬ ಇಬ್ಬರು ವಿದ್ಯಾರ್ಥಿಗಳಿಗೂ ಕೂಡಾ ಉತ್ತಮ ಎನ್.ಎಸ್.ಎಸ್ ಸ್ವಯಂ ಸೇವಕ ಪ್ರಶಸ್ತಿಗಳು ಲಭಿಸಿವೆ. ಸದರಿ ಪ್ರಶಸ್ತಿಗಳನ್ನು ಇದೇ ಡಿ, ೧೭ರಂದು ವಿಶ್ವವಿದ್ಯಾಲಯದಲ್ಲಿ ನಡೆಯು ಸಮಾರಂಭದಲ್ಲಿ ಮಾನ್ಯಕುಲಪತಿಗಳು ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಪಡೆದ ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿ ವರ್ಗ ಹಾಗೂ ಸಕಲ ವಿದ್ಯಾರ್ಥಿ ಬಳಗ ಅಭಿನಂದಿಸಿದೆ.

Comments are closed.