ಮಾದಿಗ ಸಮುದಾಯದ ಅಭಿವೃದ್ಧಿಗೆ ಮಾದರ ಚೆನ್ನಯ್ಯ ಶ್ರೀಗಳು ಸಿದ್ಧ: ಗಣೇಶ ಹೊರತಟ್ನಾಳ್

Get real time updates directly on you device, subscribe now.

 


ಕೊಪ್ಪಳ

ನಗರ ಖಾಸಗಿ ಹೋಟೆಲಿನಲ್ಲಿ ಶ್ರೀ ಮಾದರ ಚೆನ್ನಯ್ಯ ಸೇವಾ ಸಮಿತಿಯಿಂದ ಜಿಲ್ಲಾ ಕಾರ್ಯಕಾರಿಣಿ ಸಭೆ ಕಾರ್ಯಕ್ರಮ ಮಂಗಳವಾರ ಜರುಗಿತು

ಕಾರ್ಯಕ್ರಮವನ್ನು ವೇದಿಕೆ ಮೇಲಿನ ಗಣ್ಯರು ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ಮಾದರ ಚೆನ್ನಯ್ಯ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಗಣೇಶ್ ಹೊರತಟ್ನಾಳ್ ಮಾತನಾಡಿ, ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ರಾಜ್ಯದ ಉದ್ದಗಲಕ್ಕೂ ಮಾದಿಗ ಸಮಾಜ ಸಂಘಟನೆ, ಶೈಕ್ಷಣಿಕ ಕ್ರಾಂತಿ, ಸಾಮಾಜಿಕ ನ್ಯಾಯ ಕೊಡುವ ನಿಟ್ಟಿನಲ್ಲಿ ಕಳೆದ 25 ವರ್ಷಗಳಿಂದ ಕಾಯಕ ಮಾಡುತ್ತಿದ್ದಾರೆ. ಅವರ ಕಾಯಕ ಸಾರ್ಥಕವಾಗಬೇಕಾದರೆ ಮಾದಿಗ ಸಮಾಜ ಇತರೆ ಎಲ್ಲ ವರ್ಗದವರ ಜೊತೆ ಅವಿನಾಭಾವ ಸಂಬಂಧದ ಕೊಂಡಿ ಬೆಳೆಸಿಕೊಂಡು ಸಮಾಜಮುಖಿಯಾಗಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ಮುಂಬರುವ ಯುವ ಪೀಳಿಗೆಗೆ ನಾವೆಲ್ಲರೂ ಸಮುದಾಯಕ್ಕೆ ದಾರಿದೀಪವಾಗಬೇಕು ಹಾಗೂ ಸಮಾಜದ ಪ್ರತಿಯೊಬ್ಬರ ಏಳಿಗೆಗೆ ಶ್ರಮಿಸಬೇಕು, ತಾಲೂಕು, ಹೋಬಳಿ ಗ್ರಾಮ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು

ಮಾದಿಗ ಸಮುದಾಯದ ಪರಂಪರೆ, ಇತಿಹಾಸ ಹಾಗೂ ಸಂಸ್ಕೃತಿ ಕಾಯಕ ಹಾಗೂ ಅನೇಕ ವಿಚಾರಗಳನ್ನು ಮಾದಿಗರ ಮನೆ ಬಾಗಿಲಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಶ್ರೀ ಮಾದರ ಚೆನ್ನಯ್ಯ ಸೇವಾ ಸಮಿತಿಯಿಂದ ಆಗಬೇಕು ಎಂದರು.

ಈ ಸಂದರ್ಭದಲ್ಲಿ ಸೇವಾ ಸಮಿತಿಯ ರಾಜ್ಯ ಕಾರ್ಯ ಸದಸ್ಯ ಈರಪ್ಪ ಕುಡುಗುಂಟಿ ಮಾತನಾಡಿ, ಶ್ರೀಗಳ ಹಾದಿಯಲ್ಲಿ ನಾವೆಲ್ಲರೂ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಮತ್ತು ಮಾದಿಗ ಸಮುದಾಯದ ಅಭಿವೃದ್ಧಿಗೆ ತನು-ಮನ ಧನದಿಂದ ಸಹಕಾರ ಮಾಡುವ ಮೂಲ ಸಮುದಾಯದ ಬೆನ್ನೆಲುಬಾಗಿ ನಿಲ್ಲುಬೇಕು ಎಂದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗೂಳಪ್ಪ ಹಲಿಗೇರಿ ಮಾತನಾಡಿ, ಮಾದಿಗ ಸಮಾಜ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಸಂಘಟಿತರಾಗಬೇಕು ರಾಜಕೀಯವಾಗಿ ಯಾವುದೇ ಪಕ್ಷದಲ್ಲಿದ್ದರೂ, ಸಮುದಾಯ ಅಂತ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ವಸಂತ್ ಭಾವಿಮನಿ, ಆನಂದ್ ಕಾರಟಗಿ, ಗುತ್ತಿಗೆದಾರರಾದ ಅನುಮೇಶ್ ಕಡೆಮನಿ, ಮೌನೇಶ್ ದಡೆಸುಗೂರ್, ಸೇವಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಲಕ್ಷ್ಮಣ್ ಹೊಸಮನಿ, ನಾಗರಾಜ್ ತಲ್ಲೂರ್ ಹಾಗು ಹಿರಿಯರಾದ ಎಚ್ ಎಸ್ ಹೊನ್ನುಂಚಿ, ಮಲಿಯಪ್ಪ ಅಣ್ಣಿಗೇರಿ, ಮಲ್ಲಿಕಾರ್ಜುನ್ ಪೂಜಾರ್, ಯಲ್ಲಪ್ಪ ಹಳೆಮನೆ, ನಾಗಲಿಂಗ ಮಾಳೆಕೊಪ್ಪ, ಮಹಾಲಕ್ಷ್ಮಿ ಕಂದಾರಿ, ಶಿವಪ್ಪ ಮಾದಿಗ, ಪ್ರಕಾಶ್ ಒಡೆಯಪ್ಪನವರ, ನಾಗರಾಜ್ ನಂದಾಪುರ್, ಹನುಮಂತಪ್ಪ ಮುತ್ತಾಳ, ಚಂದ್ರು ಸ್ವಾಮಿ ಹೊಸಮನಿ, ಯಮನೂರಪ್ಪ ಕುಷ್ಟಗಿ, ನಿಂಗಜ್ಜ ಬಣಕಾರ್, ದೇವರಾಜ್ ಬಟಪ್ಪನಹಳ್ಳಿ, ದೇವರಾಜ್ ಹೊರತಟ್ನಾಳ, ಸಮಾಜದ ಹಿರಿಯರು ಮುಖಂಡರು ಯುವಕ ಮಿತ್ರರು ಇದ್ದರು.

Get real time updates directly on you device, subscribe now.

Comments are closed.

error: Content is protected !!