ಬೀರಪ್ಪ ಅಂಡಗಿಗೆ ವೀರ ಕನ್ನಡಿಗ ಪ್ರಶಸ್ತಿಗೆ ಪ್ರದಾನ

Get real time updates directly on you device, subscribe now.

 

ಕೊಪ್ಪಳ: ತಾಲೂಕಿನ ಬಹದ್ದೂರಬಂಡಿ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು,ವಿಕಲಚೇತನ ನೌಕರರ ಹಾಗೂ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು,ಸರಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಅವರಿಗೆ ಜೀ ಕನ್ನಡ ಸುದ್ದಿ ವಾಹಿತಿಯು  ಬೆಂಗಳೂರು ನಗರದ ದಿ ಲಲಿತ್ ಅಶೋಕ ಹೋಟೆಲ್ ನಲ್ಲಿ ಡಿ.೪ ಗುರುವಾರ ಸಂಜೆ ವೀರ ಕನ್ನಡಿಗ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಮಯದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರಾದ ಹೆಚ್.ಕೆ.ಪಾಟೀಲ,ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗಾರಡ್ಡಿ,ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ,ಹಿರಿ ನಟಿ ತಾರಾ,ಜೀ ಕನ್ನಡ ಸುದ್ದಿ ವಾಹಿನಿಯ ಸಂಪಾದಕರಾದ ರವಿ.ಎಸ್ ಮುಂತಾದವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!