21ನೇ ವರ್ಷದ ಬಡ ಮುಸ್ಲಿಂ ಜೋಡಿಗಳ ಸಾಮೂಹಿಕ ವಿವಾಹಗಳು

0

Get real time updates directly on you device, subscribe now.

ಕೊಪ್ಪಳ ನಗರದ ಸರ್ದಾರ್ ಗಲ್ಲಿಯ ಮುಸ್ಲಿಂ ಪಿಂಜಾರ್ ಪಂಚ ಕಮಿಟಿಯವರು ಹಜರತ್ ಮೆಹಬೂಬ್ ಸುಬ್ಹಾನಿ (ರ ಅ) ರವರ ಪವಿತ್ರ ಗ್ಯಾರವಿ ಶರೀಫ್ ಆಚರಣೆಯ ನಿಮಿತ್ತ ಸತತವಾಗಿ ಪ್ರತಿ ವರ್ಷ ಬಡ ಮುಸ್ಲಿಂ ಜೋಡಿಗಳ ಉಚಿತ ವಿವಾಹಗಳನ್ನು ನಡೆಸಿಕೊಂಡು ಬಂದಿರುತ್ತಾರೆ.
ಈ ವರ್ಷ ಸುಮಾರು 20 ಬಡ ಜೋಡಿಗಳು ಹೆಸರುಗಳನ್ನ ನೋಂದಾಯಿಸಿದ್ದು, ಅವರ ಸಾಮೂಹಿಕ ವಿವಾಹಗಳನ್ನು ದಿನಾಂಕ 30-11-2025 ರಂದು ರವಿವಾರ ಮುಂಜಾನೆ 11:30 ಗಂಟೆಗೆ ನೆರವೇರಿಸಲಾಗುವುದು.

ಈ ಎಲ್ಲಾ ನೂತನ ಜೋಡಿಗಳಿಗೆ ಬಟ್ಟೆಗಳು, ಸೀರೆಗಳು, ಬಂಗಾರದ ತಾಳಿ, ಜೀವನಾಂಶಕ ಬಾಂಡೇ ಸಾಮಾನುಗಳು, ಉಡುಗೊರೆ, ಟ್ರಂಕಗಳು, ಹಾಸಿಗೆ ಇತ್ಯಾದಿಗಳನ್ನು ನೀಡುವುದರ ಜೊತೆಗೆ ಕರ್ನಾಟಕ ಸರ್ಕಾರ ಘೋಷಿಸಿರುವ ಪ್ರತಿ ಜೋಡಿಗೆ ರೂಪಾಯಿ 50,000 ಗಳನ್ನು ಸಹ ಅವರಿಗೆ ತಲುಪಿಸುವಂತಹ ಕೆಲಸವನ್ನು ಮಾಡಲಾಗುವುದೆಂದು ಸಂಸ್ಥೆಯವರು ತಿಳಿಸಿರುತ್ತಾರೆ. ಇದೇ ಸಂದರ್ಭದಲ್ಲಿ ಈ ಪವಿತ್ರ ಗ್ಯಾರವಿ ನಿಮಿತ್ತ ದಿನಾಂಕ 23-11-2025 ರಂದು ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಿ ಯಶಸ್ವಿಗೊಳಿಸಿದ್ದಾರೆ
ಇಂದಿನ ಅತ್ಯಂತ ದುಬಾರಿ ಯುಗದಲ್ಲಿ ಸಮಾಜದಲ್ಲಿರುವ ಬಡ ಮುಸ್ಲಿಂ ಜೋಡಿಗಳಿಗೆ ವಿವಾಹಗಳನ್ನ ಮಾಡುವುದರ ಮೂಲಕ ಅವರ ದೊಡ್ಡ ಭಾರವನ್ನ ಕಡಿಮೆ ಮಾಡಲು ಸಂಸ್ಥೆಯವರು ಪ್ರಯತ್ನಿಸುತ್ತಿರುವದು ಬಹಳ ಶ್ಲಾಘನೀಯವಾಗಿದೆ
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಸಮಾಜದ ಬಡ ಮುಸ್ಲಿಂ ಜೋಡಿಗಳ ವಿವಾಹಗಳನ್ನ ನೆರವೇರಿಸಲೆಂದು ಶುಭ ಕೋರುತ್ತಾ ಹಾರೈಸುತ್ತೇವೆ.

ಶುಭ ಕೋರುವವರು
ಕೊಪ್ಪಳ ತಾಲೂಕ ನದಾಫ್ ಸಂಘದ ಅಧ್ಯಕ್ಷರಾದ ಅಸ್ಮನ್ ಸಾಬ್ ಉಪಾಧ್ಯಕ್ಷರಾದ ಫಕ್ರುಸಾಬ್, ಮಹಿಳಾ ಜಿಲ್ಲಾ ಅಧ್ಯಕ್ಷರಾದ ಸಲೀಂ ಜಾನ್, ಮುಸ್ಲಿಂ ಪಿಂಜಾರ್ ಪಂಚ ಕಮಿಟಿಯ ಗೌರವ ಅಧ್ಯಕ್ಷರು ಹಾಗೂ ನದಾಫ್ ಪಿಂಜಾರ್ ಸಂಘದ ರಾಜ್ಯ ಕೋಶಾಧಿಕಾರಿ ಶಹಾಬುದ್ದೀನ್ ಸಾಬ್ ನೂರಬಾಷ್, ಪಂಚ ಕಮಿಟಿಯ ಅಧ್ಯಕ್ಷರಾದ ಖಾದರ್ ಸಾಬ್ ಕುದುರೆಮೋತಿ, ನಗರಸಭೆ ಮಾಜಿ ಸದಸ್ಯರು ಹಾಗೂ ಪಂಚ ಕಮಿಟಿಯ ಕಾರ್ಯದರ್ಶಿಗಳಾದ ಮೆಹಬೂಬ್ ಬಾಷಾ ಮಾನ್ವಿ, ಖಜಾಂಚಿಯಾದ ಮೀರಾಸಾಬ್, ಝಂಡಾ ಕಟ್ಟಿ ಅಧ್ಯಕ್ಷರಾದ ಮರ್ದಾನ್ ಸಾಬ್ ಲುಂಗಿ, ಪಂಚ ಕಮಿಟಿಯ ಇತರ ಸದಸ್ಯರಾದ ರಿಯಾಜ್ ಕುದ್ರಿಮೋತಿ, ರಶೀದ್ ನೀರಲಗಿ, ಅಬ್ದುಲ್ ರೆಹಮಾನ್, ವಾಸಿಮ್, ಇಸ್ಮಾಯಿಲ್ ಸಾಬ್, ನಬಿಸಾಬ್ , ಕುತ್ತುಬುದ್ದೀನ್, ಖಾಜಾಸಾಬ್ ನಗರ ಘಟಕ ಕಾರ್ಯದರ್ಶಿ ಬಾಬುಸಾಬ,ಅಮೀರ್ ಹಮ್ಜಾ ನಿವೃತ್ತ ಶಿಕ್ಷಕರು, ರಮಜಾನ್ ಸಾಬ್ ಹಾಗೂ ಇತರ ಸರ್ವ ಸದಸ್ಯರು

Get real time updates directly on you device, subscribe now.

Leave A Reply

Your email address will not be published.

error: Content is protected !!