ಕಿರ್ಲೋಸ್ಕರ್ ನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ

ಕನ್ನಡ ರಾಜ್ಯೋತ್ಸವ ೨೦೨೫ನ್ನು ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ನವೆಂಬರ್ ೧, ೨೦೨೫ ರಂದು ವ್ಯವಸ್ಥಾಪಕ ನಿರ್ಧೇಶಕರಾದ ಆರ್ ವಿ ಗುಮಾಸ್ತೆಯವರಿಂದಕನ್ನಡಧ್ವಜಾರೋಹಣ ನೆರವೇರಿತು ಮತ್ತು ನಾಡಗೀತೆಯೊಂದಿಗೆ ಆಚರಣೆಯು ಪ್ರಾರಂಭವಾಯಿತು. ಉದ್ಯೋಗಿಗಳಿಗೆ ಹೊರಾಂಗಣ ಕ್ರೀಡೆಗಳಾದ ಕ್ರಿಕೆಟ್, ವಾಲಿಬಾಲ್, ಮತ್ತು ಒಳಾಂಗಣ ಕ್ರೀಡೆಗಳಾದ ಚೆಸ್, ಕೆರಮ್, ರಸಪ್ರಶ್ನೆ ಮತ್ತುಟೆಬಲ್ ಟೆನ್ನಿಸ್ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿಉತ್ಸಾಹದಿAದ ಪಾಲ್ಗೊಂಡಿದ್ದರು.

ದಿ೨೬ ರಂದು ಕಂಪನಿಯ ಆಡಿಟೋರಿಯಮ್‌ನಲ್ಲಿ ಕನ್ನಡ ರಾಜ್ಯೋತ್ಸವ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಈ ಸಮಾರಂಭದಲ್ಲಿ“ಕನ್ನಡ ಆಭಿಮಾನಿ” ಮತ್ತು“ವೀರಕನ್ನಡಿಗ” ಎಂಬ ಖ್ಯಾತಿಯನ್ನು ಪಡೆದ ಶರಣಪ್ಪಜಿರ್ ಹೂಗಾರರವರನ್ನು ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಹಾಗೂ ಉಪನ್ಯಾಸಕರಾಗಿ ಆಹ್ವಾನಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಕನ್ನಡದ ಪ್ರಾಮುಖ್ಯತೆ ಮತ್ತು ಕನ್ನಡದ ಅನುಷ್ಠಾನದ ಬಗ್ಗೆ ಅರಿವು ಮೂಡಿಸಿದರು.
ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಶ್ರೀಮತಿ ಬೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ಕೊಪ್ಪಳ ತಾಲ್ಲೂಕು ಮೋರನಾಳು ಗ್ರಾಮದವರಾಗಿದ್ದ ಇವರು ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ತೊಗಲು ಗೊಂಬೆ ಕಲಾವಿದರು, ಅಮೇರಿಕ, ಪ್ಯಾರೀಸ್, ಇಟಲಿ, ಸ್ವೀಜರ್‌ಲ್ಯಾಂಡ್ ಟೆಹರಾನ್, ಇರಾನ್, ಇರಾಕ್‌ಹಾಗೂ ಅನೇಕ ದೇಶಗಳಲ್ಲಿ ತೊಗಲುಗೊಂಬೆಆಟವನ್ನು ಪ್ರದರ್ಶನ ಮಾಡಿ ನಮ್ಮದೇಶದಲ್ಲಿ ಅಳಿದು ಹೋಗುತ್ತಿರುವ ಪ್ರಾಚೀನ ಕಲೆ, ಸಂಸ್ಕೃತಿ, ಪರಂಪರೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡ ಹೋದ ಕೀರ್ತಿ ಇವರದು, ಇವರನ್ನುಈ ಕಾರ್ಯಕ್ರಮದಲ್ಲಿಸನ್ಮಾನಿಸಲಾಯಿತು ಮತ್ತುಅವರಿಗೆ ತೊಗಲುಗೊಂಬೆಗಳಉನ್ನತಿಕರಣಕ್ಕೆ ಕಂಪನಿಯಿAದ ಧನಸಹಾಯ ಮಾಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀಡುಕಬ್ಬಿಣ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಎಂ ಜಿ ನಾಗರಾಜ ವಹಿಸಿದ್ದರು ಅತಿಥಿಗಳಾಗಿ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಕಾರ್ಯ ನಿರ್ವಾಹಕ ಉಪಾಧ್ಯಕ್ಷರಾದ ಡಾ. ಪಿ ನಾರಾಯಣ ಮತ್ತು ಕಿರ್ಲೋಸ್ಕರ್ ಫೆರಸ್ ಕಾರ್ಮಿಕ ಸಂಘದ ಉಪಾಧ್ಯಕ್ಷರಾದ ಶರಣಪ್ಪ.ಬಿಅತಿಥಿಗಳಾಗಿ ಆಗಮಿಸಿದ್ದರು ಮತ್ತು ಪ್ರಾಸ್ತಾವಿಕ ಭಾಷಣವನ್ನುಡಾ. ಪಿ. ನಾರಾಯಣರವರು ಮಾಡಿದರು ಎಮ್‌ಎಮ್ ನಾಡಿಗೇರ್ ಇದರ ನಿರೂಪಣೆಯನ್ನು ಮಾಡಿದರು.
Kannada Rajyotsava celebrations in Kirloskar
ಈ ಸಂದರ್ಭದಲ್ಲಿ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರಧಾನ ಮತ್ತು ಗಣ್ಯಮಾನ್ಯರಿಗೆ ಸನ್ಮಾನಿಸಲಾಯಿತು.