ಸಂಗಣ್ಣ ಕರಡಿ ಕೊಪ್ಪಳ ಜಿಲ್ಲೆಯ ಆದರ್ಶ ರಾಜಕಾರಣಿ : ಶ್ರೀವಚನಾನಂದ ಸ್ವಾಮೀಜಿ

0

Get real time updates directly on you device, subscribe now.

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಶಾಸಕರಾಗಿ,ಸಂಸದರಾಗಿ ಸಂಗಣ್ಣ ಕರಡಿ ಜನರಿಂದ ಮೆಚ್ಚುಗೆ ಪಡೆದ ಆದರ್ಶ ರಾಜಕಾರಣಿ ಎಂದು ಹರಿಹರ ಪೀಠದ ಪಂಚಮಸಾಲಿ ಸಮಾಜದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.

     ಅವರು ನಗರದ ಮಿಲೇನಿಯಮ್ ಶಾಲೆಯ ಮುಖ್ಯಸ್ಥ ಗಿರೀಶ ಕಣವಿ ಅವರ 25ನೇ ವರ್ಷದ ವಿವಾಹ ವಾರ್ಷಿಕೋತ್ಸವ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ 25 ನವ ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು ಗಿರೀಶ್ ಕಣವಿ ದಂಪತಿಗಳು 25 ವರ್ಷಗಳ ಕಾಲ ಆದರ್ಶ ಜೀವನವನ್ನು ನಡೆಸಿ ಇಂದು 25 ಜೋಡಿ ನವದಂಪತಿಗಳಿಗೆ ಸಾಮೂಹಿಕ ವಿವಾಹ ಮಾಡುವ ಮೂಲಕ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಸಂತೋಷದ ವಿಷಯ ಅವರು ನೂರಾರು ವರ್ಷ ಆದರ್ಶ ಜೀವನ ನಡೆಸಲಿ ಎಂದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಮಾತನಾಡಿ ಗಿರೀಶ್ ಕಣವಿ ಅವರು ಸಂಸದ ಸಂಗಣ್ಣ ಕರಡಿ ಅವರ ಹಾದಿಯಲ್ಲಿ ಸಮಾಜಮುಖಿ ಕಾರ್ಯ ಮಾಡುತ್ತಾ ಶಾಲೆಯ10ನೇ ವರ್ಷದ ವಾರ್ಷಿಕೋತ್ಸವ ಹಾಗೂ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಸಾಮೂಹಿಕ ವಿವಾಹಗಳನ್ನು ಮಾಡುವುದರ ಮೂಲಕ ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಶಾರದಾ ಇಂಟರ್ ನ್ಯಾಷನಲ್ ಶಾಲೆಯ ಮುಖ್ಯಸ್ಥರಾದ ಎಸ್.ಆರ್.ಪಾಟೀಲ್, ಗಿರೀಶ ಕಣವಿ ದಂಪತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ಗುಪ್ತ, ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್,ಸಮಾಜದ ಮುಖಂಡರಾದ ಶೇಖರ್ ಮುತ್ತೇನವರ, ವೀರಬಸಪ್ಪ ಪಟ್ಟಣಶೆಟ್ಟರ್, ಸೇರಿದಂತೆ ಹಲವು ವಿವಿಧ ಮಠದ ಸ್ವಾಮೀಜಿಗಳು, ಗಣ್ಯರು ಪಾಲ್ಗೊಂಡು ನವ ಜೋಡಿಗೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಗಿರೀಶ್ ಕಣವಿ ಅವರ ಧರ್ಮಪತ್ನಿ ಗೀತಾ ಕಣವಿ ಅವರು ರಚಿಸಿದ ಕವನದ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

 25 ನವ ಜೋಡಿಗಳಿಗೆ ಉಚಿತವಾಗಿ ಮಾಂಗಲ್ಯ, ಮದುವೆಯ ವಸ್ತ್ರ ಸೇರಿದಂತೆ ಊಟದ ವ್ಯವಸ್ಥೆ ಮಾಡಿ ಗಮನ ಸೆಳೆದಿದ್ದಾರೆ. ಇವರ ಈ ಸಾಮಾಜಿಕ ಕಳಕಳಿಯು ಎಲ್ಲರ ಗಮನ ಸೆಳೆಯಿತು.

ಮಿಲೇನಿಯಂ ಶಾಲಾ ಆವರಣ ಭಾನುವಾರದಂದು ದೊಡ್ಡ ಜಾತ್ರೆಯಂತೆ ಭಾಸವಾಯಿತು, ಎಲ್ಲಿ ನೋಡಿದರೂ ಜನವೋ ಜನ ಸಾಮೂಹಿಕ ವಿವಾಹ ಕಾರ್ಯಕ್ರಮ ಅಚ್ಚುಕಟ್ಟಾಗಿ ಜರುಗಿತು.

Get real time updates directly on you device, subscribe now.

Leave A Reply

Your email address will not be published.

error: Content is protected !!