ವಿದ್ಯಾರ್ಥಿಗಳಿಗೆ ಜ್ಞಾನದ ದಾಹ ಹೆಚ್ಚಿರಬೇಕು : ಸಿ. ವಿ ಜಡಿಯವರು

Get real time updates directly on you device, subscribe now.

 ಕೊಪ್ಪಳ, ನವೆಂಬರ್ :  22, ವಿದ್ಯಾರ್ಥಿಗಳಿಗೆ ಜ್ಞಾನದ ದಾಹ ಹೆಚ್ಚಿರಬೇಕು. ಕಾಲೇಜಿಗೆ ಬಂದು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಹೊರತು ಕಡಿಮೆ ಮಾಡಿಕೊಳ್ಳಬಾರದು ಎಂದು ನಿವೃತ್ತ ಪ್ರಾಚಾರ್ಯ ಸಿ. ವಿ ಜಡಿಯವರು ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ 2025-26 ನೇ ಸಾಲಿನ ಐಕ್ಯೂಎಸಿ, ಸಾಂಸ್ಕೃತಿಕ, ಕ್ರೀಡೆ, ಎನ್. ಎಸ್. ಎಸ್, ಭಾರತ ಸ್ಕೌಟ್ ಅಂಡ್ ಗೈಡ್ಸ್, ರೆಡ್ ಕ್ರಾಸ್, ಪ್ಲೇಸ್ ಮೆಂಟ್ ಸೆಲ್, ಪ್ರೇರಣಾ, ಮಹಿಳಾ ಸಬಲೀಕರಣ ಮತ್ತು ಇತರೆ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ, ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಕನ್ನಡ ಕ್ರಿಯಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ನಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಕ್ರಿಯಾಶೀಲರಾಗಿರಬೇಕು.

ಬರೀ ಓದಿದರೆ ಸಾಲದು. ವಾಸ್ತವ ಜ್ಞಾನ ಪಡೆಯಬೇಕು.  ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಂಸ್ಕೃತಿಕ ವಾಗಿ ಪ್ರಗತಿ ಹೊಂದಬೇಕು ಎಂದು ತಿಳಿಸಿದರು. 

2024-25 ನೇ ಸಾಲಿನಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ನಲ್ಲಿ ರಾಜ್ಯ ಮಟ್ಟದ ರಾಜ್ಯ ಪುರಸ್ಕಾರ ಪಡೆದ ಏಳು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಹಳೆಯ ವಿದ್ಯಾರ್ಥಿಗಳಾದ ಕುಸುಮ ಮತ್ತು ನಿವೇದಿತಾ ಸ್ಕೌಟ್ಸ್ ಅಂಡ್ ಗೈಡ್ಸ್ ಕುರಿತು ಅನಿಸಿಕೆ ಹಂಚಿಕೊಂಡರು.

2024-25 ನೇ ಸಾಲಿನಲ್ಲಿ ಕನ್ನಡ ಐಚ್ಚಿಕ ಕನ್ನಡ ಕಾಂಬಿನೆಷನ್ ನಲ್ಲಿ ಹೆಚ್ಚು ಅಂಕಗಳು ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಅವರು ಮಾತನಾಡುತ್ತ 202  ಖಾರ್ಖಾನೆಗಳಿಂದ ಕೊಪ್ಪಳಕ್ಕೆ ಆಪತ್ತು ಬಂದಿದೆ. ಗಿಣಿಗೇರಿ, ಬಗನಾಳ, ಅಲ್ಲನಗರ, ಕಾಸನಖಂಡಿ ಸೇರಿದಂತೆ ಕೊಪ್ಪಳದ ಸುತ್ತ ಮುತ್ತ  ಜನರಿಗೆ ಅಸ್ತಮಾ, ಕ್ಯಾನ್ಸರ್ ಸೇರಿದಂತೆ ಹಲವಾರು ಕಾಯಿಲೆಗಳು ಬರುತ್ತಿವೆ. ಕುಡಿಯುವ ನೀರು ಕಲುಷಿತ ವಾಗುತಿದೆ. ಕಂಪನಿಗಳಿಂದ ಪರಿಸರ ಮಾಲಿನ್ಯ ಆಗಿದೆ. ನಾವು ನೈಸರ್ಗಿಕ ಜೀವನಕ್ಕೆ ಹೊಂದಿಕೊಳ್ಳಬೇಕು. ಆದರೆ ಅಂತ ಪರಿಸರವನ್ನು ಕಂಪನಿಗಳಿಂದ ಇಂದು ಹಾಳುಗುತ್ತಿದೆ. ಆದ್ದರಿಂದ ಖಾರ್ಖಾನೆ ವಿಸ್ತರಣೆ ಆಗಬಾರದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ವಿಠೋಬ ಅವರು ಮಾತನಾಡುತ್ತ ಪಠ್ಯತರ ಚಟುವಟಿಕೆಗಳು ನಮ್ಮ ಸಂಸ್ಕೃತಿ ರೂಪಗೊಳ್ಳಲು ಸಹಾಯವಾಗುತ್ತದೆ. ನಿಮ್ಮ ಸ್ನೇಹಿತರ ಜತೆ ಪ್ರೀತಿ ಮತ್ತು ವಿಶ್ವಾಸದಿಂದ ಇರಿ. ಕುಟುಂಬದ ಅಭಿವೃದ್ಧಿ, ಪರಿಸರ ರಕ್ಷಣೆ ಮಾಡುವ ಜವಾಬ್ದಾರಿ ವಿದ್ಯಾರ್ಥಿನಿಯರ ಮೇಲಿದೆ.

ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಂಡರೆ ಸರಕಾರಿ ಉದ್ಯೋಗ ಸಿಗುತ್ತೆ. ಇದರಿಂದ ಜೀವನ ಸುಲಭವಾಗುತ್ತದೆ

 ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಅವರು ಮಾತನಾಡುತ್ತ ನಮ್ಮ ಕಾಲೇಜಿನ ಸೌಲಭ್ಯಗಳನ್ನು ಪಡೆದು ವಿದ್ಯಾರ್ಥಿಗಳು ಚನ್ನಾಗಿ ಓದಿ ಹೆಸರು ತರಬೇಕು. ವಿದ್ಯಾಬ್ಯಾಸವನ್ನು ಮಧ್ಯದಲ್ಲಿ ಮೋಟಕುಗೊಳಿಸಬಾರದು. ಕಠಿಣ ಪರಿಶ್ರಮ ಪಡಬೇಕು ಎಂದು ತಿಳಿಸಿದರು.

 ಕಾಲೇಜಿನ ಸಾಂಸ್ಕೃತಿಕ ಘಟಕದ ಸಂಚಾಲಕರಾದ ಡಾ. ಹುಲಿಗೆಮ್ಮ ಪ್ರಸ್ತವಿಕವಾಗಿ  ಮಾತನಾಡುತ್ತ ಕಾಲೇಜಿನ ಎಲ್ಲ ಪಠ್ಯತರ ಘಟಕಗಳ ಮೂಲಕ ನಿಮ್ಮ ಜ್ಞಾನ ವಿಕಾಸ ಆಗುವುದಕ್ಕೆ ಸಹಾಯವಾಗುತ್ತದೆ. ಈ ಘಟಕಗಳು ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಶೈಕ್ಷಣಿಕ ಮಟ್ಟವನ್ನು ಸುಧಾರಿಸುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜ್ಞಾನ ಅಭಿವೃದ್ಧಿಗೆ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು. 

ಉದ್ಘಾಟಕರ ಪರಿಚಯವನ್ನು ಅರ್ಥಶಾಸ್ತ್ರದ ಉಪನ್ಯಾಸಕಿ ಬಸ್ಸಮ್ಮ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿತ್ತು.

ವೇದಿಕೆಯಲ್ಲಿ ಬಿ. ಜಿ. ಕರಿಗಾರ, ಕಾಲೇಜಿನ ಹಿರಿಯ ಪ್ರಾಧ್ಯಾಪಕಾರದ ನಾಗರತ್ನ ತಮ್ಮಿನಾಳ, ಡಾ. ಹುಲಿಗೆಮ್ಮ, ವಿಟೋಬ, ಡಾ. ಮಲ್ಲಿಕಾರ್ಜುನ, ಡಾ. ಪ್ರದೀಪ್ ಕುಮಾರ, ಡಾ. ನರಸಿಂಹ, ಶುಭ ಟಿ. ಈ, ಸುಮಿತ್ರ ಎಸ್ ವಿ, ಸುಮಯ್ಯ,ಕೆ, ಅಲ್ಲಬಕ್ಷ,  ಹನುಮಪ್ಪ ಮೇಟಿ,  ಶಿವ ಪ್ರಸಾದ್ ಹಾದಿಮನಿ, ಶ್ರೀ ಕಾಂತ್ ಹಾಗೂ ಕಾಲೇಜಿನ ಎಲ್ಲ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.

ಶ್ರೀದೇವಿ ನಿರೂಪಿಸಿದರು. ದುರಗಮ್ಮ ಮತ್ತು ಶಾಮಲಾ ಪ್ರಾರ್ಥಿಸಿದರು. ಕಮಲ ಸ್ವಾಗತಿಸಿದರು ಮತ್ತು ಶಾಹಿನಿ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!