ಹಿರಿಯರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ: ಮಧು ಶೆಟ್ಟರ್

ಕೊಪ್ಪಳ : ಹಿರಿಯರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಇನ್ನರ್ ವಿಲ್ ಸಂಸ್ಥೆಯ ಅಧ್ಯಕ್ಷ ರಾದ ಮಧು ಶೆಟ್ಟರ್ ಹೇಳಿದರು.
ಅವರು ಕೊಪ್ಪಳದಲ್ಲಿರುವ ಸುರಭಿ ವೃದ್ಧಾಶ್ರಮಕ್ಕೆ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭೇಟಿ ನೀಡಿ, ಅವರ ಕುಶಲೋಪಚಾರಿಯನ್ನು ವಿಚಾರಿಸಿ ಅವರಿಗೆ ಬೇಕಾಗುವ ಅವಶ್ಯವಿರುವ ಕೆಲ ವಸ್ತುಗಳನ್ನು ಸಂಸ್ಥೆಯಿಂದ ಕೊಟ್ಟರು. ವೃದ್ಧಾಶ್ರಮಕ್ಕೆ 20 ಲೀಟರ್ ಪೇಂಟನ್ನು ಕೊಟ್ಟು ಹೊಸ ಕಳೆಯನ್ನು ತಂದರು. ಕೆಲವೊಂದು ವಚನ ಪುಸ್ತಕಗಳನ್ನು ಮತ್ತು ಚಳಿಗಾಲ ಇರುವುದರಿಂದ ಅವರಿಗೆ ವ್ಯಾಸ್ಲಿನ್ಗಳನ್ನು ಮತ್ತು ಸಿಹಿ ತಿಂಡಿಗಳನ್ನು ನೀಡಿ ಅಲ್ಲಿರುವ ಎಲ್ಲಾ ತಂದೆ ತಾಯಿಗಳ ಜೊತೆಗೆ ಕೆಲ ಕಾಲ ಕಳೆದು ಅವರಿಗೆ ಮನ ಸಂತೋಷ ಪಡಿಸಲಾಯಿತು.
ಇನ್ನರ್ ವಿಲ್ ಸಂಸ್ಥೆಯ ಕಾರ್ಯದರ್ಶಿ ರೇಖಾ ಕಡ್ಲಿ, ಖಜಾಂಚಿ ಸುವರ್ಣ ಶೆಟ್ಟರ್, ಐಎಸ್ಓ ಹೇಮಾ ಬಳ್ಳಾರಿ, ಸಂಪಾದಕಿ ಸುಧಾ ಶೆಟ್ಟರ್, ಡಿಸ್ಟಿಕ್ ಐ ಎಸ್ ಓ ಶರಣಮ್ಮ ಪಾಟೀಲ್, ಡೈರೆಕ್ಟರ್ ರಾಧಾ ಕುಲಕರ್ಣಿ ಸದಸ್ಯರಾದ ಪದ್ಮ, ನೀತಾ, ಮಧು ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.
Comments are closed.