ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ  ಬೆಂಬಲ

Get real time updates directly on you device, subscribe now.

ನಗರಸಭೆ ಆವರಣದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ  ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ  ಬೆಂಬಲವನ್ನು ವ್ಯಕ್ತಪಡಿಸುತ್ತಾ AIMSS (ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ)ನ

ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಮಾತನಾಡುತ್ತಾ ” ಕಾರ್ಖಾನೆಗಳನ್ನು ವಿಸ್ತರಿಸಿದರೆ ಜನಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈಗಾಗಲೇ ಇರುವ ಕಾರ್ಖಾನೆಗಳಿಂದ ಬರುವಂತಹ ಹಾನಿಕಾರಕ ಧೂಳಿನಿಂದ ಜನಸಾಮಾನ್ಯರ ಚರ್ಮ ರೋಗಗಳು,ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಸೇರಿದಂತೆ ಹಲವಾರು ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಬಾಧಿತ ಜನಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಸಬೇಕು. ಆ ಮೂಲಕ ಹೋರಾಟ ತನ್ನ ಗುರಿಯತ್ತ ಸಾಗಲು ಸಾಧ್ಯವಾಗುತ್ತದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಡೆಯುತ್ತಿರುವ ಅನಿರ್ಧಿಷ್ಟವಧಿ ಧರಣಿ ಸತ್ಯಾಗ್ರಹಕ್ಕೆ ಬಂದು ಬೇಡಿಕೆಗಳನ್ನು ಆಲಿಸಿ ಈಡೇರಿಸಬೇಕೆಂದು ಹೇಳಿದರು.

Support for the ongoing struggle against factory expansion

ಇನ್ನೊರ್ವ ಕೊಪ್ಪಳ ಜಿಲ್ಲಾ ಸಂಘಟನಾ ಸಮಿತಿಯ ಅಧ್ಯಕ್ಷರಾದ  ಮಂಜುಳಾ ಮಜ್ಜಿಗೆ ಅವರು ಮಾತನಾಡುತ್ತಾ “ಕೊಪ್ಪಳದ ಜನಸಾಮಾನ್ಯರ ಬದುಕು ತುಂಬಾ ಕಷ್ಟಕರವಾಗಿದೆ. ವಿವಿಧ ಬೇಡಿಕೆಗಳಾದ ಕೊಪ್ಪಳ – ಭಾಗ್ಯನಗರ 1.5 ಲಕ್ಷ ಜನರ ಆರೋಗ್ಯ ರಕ್ಷಣೆಗೆ ಮತ್ತು 20 ಹಳ್ಳಿಗಳಲ್ಲಿ ಆರೋಗ್ಯಕರ ಪರಿಸರ ಪುನರ್ ಮಾಡಲು ಆಗ್ರಹಿಸಿ, ಕೊಪ್ಪಳಕ್ಕೆ  ಬಲ್ದೋಟ ಕಂಪನಿ ( BSPL ) ಬರಬಾರದು, ಬಸಾಪುರ ಕೆರೆಯನ್ನು ಸಾರ್ವಜನಿಕರಿಗಾಗಿ ಮುಕ್ತಗೊಳಿಸಬೇಕು, ತುಂಗಭದ್ರ ಜಲಾಶಯ ಮಾಲಿನ್ಯದಿಂದ ರಕ್ಷಿಸಲು ಒತ್ತಾಯಿಸಿದರು.

ಕೊಪ್ಪಳ ಜಿಲ್ಲಾ ಸಂಘಟನಾ ಸಮಿತಿಯ ಕಾರ್ಯದರ್ಶಿಯಾದ ಶಾರದಾ ಗಡ್ಡಿ,

ಹುಸೇನ್ ಬೀ ಇದ್ದರು

 

ಸಮಿತಿಯ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರವರು ಹಾಗೂ ಹಲವಾರು ಸಮಾಜಸೇವಕರು, ಹೋರಾಟಗಾರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!