ಕನಕ ದಾಸರ ಚಿಂತನೆ ಸರ್ವಕಾಲೀಕ ಶ್ರೇಷ್ಟ- ಡಾ. ಹನುಮಂತ ಹೇರೂರ್

Get real time updates directly on you device, subscribe now.

ಕೊಪ್ಪಳ: ಬದುಕಿಗೆ ಮೌಲ್ಯಾಧಾರಿತ ಸಾಹಿತ್ಯವನ್ನು ನೀಡಿದ ಕನಕ ದಾಸರು ಶತಮಾನದ ಸಂತ, ಮೇರು ಸಾಹಿತಿಯಗಿದ್ದಾರೆ. ತಮ್ಮ ಅಮೂಲ್ಯವಾದ ಕೀರ್ತನೆಗಳು ಹಾಗೂ ಶ್ರೇಷ್ಟ ಸಾಹಿತ್ಯ ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಬೆಳಗಿದ ದಾಸ ವೇರಣ್ಯರಾದ ಕನಕದಾಸರ ಚಿಂತನೆಗಳು ಸರ್ವಕಾಲೀಕ ಶ್ರೇಷ್ಟವಾಗಿವೆ ಎಂದು ಶ್ರೀಮತಿ ಶಾರದಮ್ಮ ಕೋತಬಾಳ್ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ  ಡಾ. ಹನುಮಂತ ಹೇರೂರ್ ಹೇಳಿದರು. ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲಲ್ಲಿ ಕನ್ನಡ ವಿಭಾದಿಂದ ದಿನಾಂಕ ೧೦.೧೧.೨೦೨೫ರಂದು ಬೆಳಗ್ಗೆ ೧೧:೩೦ಕ್ಕೆ  ಕನಕದಾಸರ ಜಯಂತಿ ನಿಮಿತ್ಯ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕನಕದಾಸರು ಜಾತಿಯ ವಿರುದ್ಧ ಧ್ವನಿಯತ್ತಿ ಸಾಮಾಜಿಕಮೌಲ್ಯ ಸಾರಿದ ದಾಸ ಶ್ರೇಷ್ಟರಾಗಿದ್ದಾರೆ. ಭಕ್ತಿ, ಜ್ಞಾನ ಮತ್ತು ಕಾವ್ಯ ಗುಣದ ಗಣಿ ಅವರಾಗಿದ್ದರು. ಕನ್ನಡ ನಾಡಿನ ಆಧ್ಯಾತ್ಮೀಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಮೌಲ್ಯಗಳ ಉನ್ನತಿಗೆ ಕನಕದಾಸರ ಕೊಡುಗೆ ಅನುಪಮವಾಗಿದೆ ಎಂದರು.

ಕಾರ್ಯಕ್ರಮದ ಆಧ್ಯಕ್ಷತೆವಹಿಸಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಚನ್ನಬಸವ ಮಾತನಾಡಿ ಕನಕದಾಸರ ಜೀವನವೇ ಒಂದು ಆದರ್ಶ. ಅವರ ಜಯಂತಿ ಆಚರಣೆ ಮತ್ತು ಅಧ್ಯಯನದ ಮೂಲಕ ಅವರ ಜೀವನವನ್ನು ತಾವು ಅರಿಯಬೇಕು, ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಇಂತಹ ಆಚರಣೆಗಳು ಸಾರ್ಥಕಗೊಳ್ಳುತ್ತವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನಾಗರಾಜ ದಂಡೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಿವಪ್ಪ ನಿರೂಪಿಸಿದರು, ಡಾ. ಸುಮಲತಾ ಬಿ.ಎಂ ಸ್ವಾಗತಿಸಿದರು, ಕು. ಚೇತನಾ ಪ್ರಾರ್ಥಿಸಿದರು.

Get real time updates directly on you device, subscribe now.

Comments are closed.

error: Content is protected !!