ಶ್ರೀ ಗವಿಮಠ ಮತ್ತು ಅದರ ಕೋಟಿ, ಕೋಟಿ ಭಕ್ತರ ಹಿತಕ್ಕಾಗಿ ಆಜ್ಞೆ ಮಾಡಿ –  ಹೋರಾಟಗಾರರ ಮನವಿ

Get real time updates directly on you device, subscribe now.

ಜಂಟಿ ಕ್ರಿಯಾ ವೇದಿಕೆ
ಕೊಪ್ಪಳ ಜಿಲ್ಲಾ ಬಚಾವೋ ಪರಿಸರ ಹಿತರಕ್ಷಣಾ
ಆಂದೋಲನ ಸಮಿತಿ ವೇದಿಕೆ, ಕೊಪ್ಪಳ ವತಿಯಿಂದ ಶ್ರೀಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಕೊಪ್ಪಳ ರವರಿಗೆ ಮನವಿ ಸಲ್ಲಿಸಲಾಗಿದೆ.


ಸಂಸ್ಥಾನಗವಿಮಠ ದಿನಾಂಕ: 07/11/2025
ಕೊಪ್ಪಳ ಅವರಿಗೆ ವಂದನೆಗಳು.

ಸನ್ಮಾನಿತ ಶ್ರೀಗಳೇ,
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯ ನೇತೃತ್ವದಲ್ಲಿ, ಬಲ್ಡೋಟ (ಬಿಎಸ್ಪಿಎಲ್), ಕಿರ್ಲೊಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಷಿಂಡಿಯಾ ಮುಂತಾದ ಈ ಕಾರ್ಖಾನೆಗಳು 20 ಹಳ್ಳಿಗಳ ಸುತ್ತ ಸ್ಪಾಂಜ್ ಐರನ್, ಪಲ್ಲೆಟ್, ಉಕ್ಕು, ಸಿಮೆಂಟ್, ಕಾಸ್ಟಿಂಗ್, ವಿಷ ರಸಾಯನ, ಕೆಮಿಕಲ್ ಗೊಬ್ಬರ, ಸುಣ್ಣ, ಸಿಮೆಂಟ್, ಇಂಡಸ್ಟ್ರೀಯಲ್ ಗ್ಯಾಸ್, ಕಲ್ಲಿದ್ದಲು ಉರಿಸಿ ವಿದ್ಯುತ್, ಹಾಲಿನ ಪದಾರ್ಥ ಉತ್ಪದನೆ, ಮಾಡುತ್ತಾ ಪರಿಸರ ಹಾನಿ ಮಾಡುತ್ತಿದ್ದು, ಇವುಗಳ ವಿಸ್ತರಣೆ, ಹೊಸ ಸ್ಥಾಪನೆ ಮಾಡಬಾರದೆಂದು ಕೊಪ್ಪಳ ನಗರಸಭೆಯ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ದಿ: 31-10-2025ರಿಂದ ನಡೆಯುತ್ತಿದೆ.
ಧರಣಿಯಲ್ಲಿ ನಗರದ ನಾಗರಿಕರು, ಪುರ ಪ್ರಮುಖರು, ಬಾಧಿತ ಹಳ್ಳಿಗಳ ರೈತರು, ವಕೀಲರು, ಸಾಹಿತಿಗಳು, ಸಿವಿಲ್ ಗುತ್ತಿಗೆದಾರರು, ಮಹಿಳೆಯರು, ವಿವಿಧ ಸಮಾಜ, ಸಮುದಾಯ ಸಂಘಟನೆಗಳು, ಯುವಕರು ಪಾಲ್ಗೊಳ್ಳುತ್ತಿದ್ದಾರೆ. ತಾವು ಫೆಬ್ರುವರಿ 24ರಂದು ಸಾವಿರಾರು ಜನರ ಎದುರಿಗೆ ಮೂರು ಪ್ರಮುಖ ಜನಪ್ರತಿನಿಧಿಗಳಿಗೆ ಬಿಎಸ್ ಪಿಎಲ್ ವಿಸ್ತರಣೆ ನಿಲ್ಲಿಸುವಂತೆ ಸರಕಾರದಿಂದ ಆದೇಶ ತರುವಂತೆ ಧರ್ಮಾದೇಶ ಮಾಡಿದ್ದೀರಿ. ಒಪ್ಪಿಕೊಂಡ ಜನಪ್ರತಿನಿದಿನಗಳು ಆ ಕೆಲಸ ಮಾಡಿಲ್ಲ. ಆದ್ದರಿಂದ ಜನಪ್ರತಿನಿಧಿಗಳನ್ನು ತಮ್ಮಲ್ಲಿಗೆ ಕರೆಯಿಸಿಕೊಂಡು ತಾವು ಕೊಪ್ಪಳದ ಜನರ ಪರವಾಗಿ ವಿಸ್ತರಣೆ ಶಾಸ್ವತವಾಗಿ ರದ್ಧುಗೊಳಿಸಿದ ಆದೇಶ ತರಬೇಕೆಂದು ಮತ್ತೊಮ್ಮೆ ಶ್ರೀಗವಿಮಠ ಮತ್ತು ಅದರ ಕೋಟಿ, ಕೋಟಿ ಭಕ್ತರ ಹಿತಕ್ಕಾಗಿ ಆಜ್ಞೆ ಮಾಡಬೇಕು. ಒಂದು ವಾರ ಇಲ್ಲವೇ ಹದಿನೈದು ದಿನ ಸಮಯ ಕೊಟ್ಟು ಬಿಎಸ್ ಪಿಎಲ್ ಹಾಗೂ ಎಲ್ಲ ಕಾರಖಾನೆಗಳ ವಿಸ್ತರಣೆ ಹಾಗೂ ಯಾವುದೇ ಹೊಸ ಕಾರಖಾನೆ ಸ್ಥಾಪನೆ ಇಲ್ಲ ಎನ್ನುವ ಆದೇಶವನ್ನು ಸರ್ಕಾರದಿಂದ ತಂದು ತಮಗೆ ಕೊಡುವಂತೆ ಹೇಳಬೇಕು. ನೀವು ಆದೇಶ ತಂದು ಕೊಡದಿದ್ದರೆ ಮಠದಲ್ಲಿ ಉಪವಾಸ ಸತ್ಯಾಗ್ರಹ ಮಾಡುವಾದಾಗಿ ಎಚ್ಚರಿಸಿದರೆ ಎಲ್ಲ ಬರೋಬ್ಬರಿ ಆಗುತ್ತದೆ ಎಂದು ಮಠದ ಭಕ್ತರು ವೇದಿಕೆಗೆ ತಿಳಿಸಿ ತಮಗೆ ಪತ್ರ ಬರೆಯಲು ತಿಳಿಸಿದ್ದಾರೆ.
ತಾವು ಈ ಬಗ್ಗೆ ದೃಢ ನಿಲುವು ತಳೆಯಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ.


ವಂದನೆಗಳು
ತಮ್ಮ ವಿಶ್ವಾಸಿಗಳು
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಪರಿಸರ ಹಿತರಕ್ಷಣಾ ವೇದಿಕೆ (ಜಂಟಿ ಕ್ರಿಯಾ ವೇದಿಕೆ), ಕೊಪ್ಪಳ

ಶ್ರೀಗಳು ಮೌನಾಚರಣೆಯಲ್ಲಿ ಇರುವದರಿಂದ ಮಠದ ಕಚೇರಿಗೆ ಹಾಗೂ ವಿರೇಶ ಅಜ್ಜನವರಿಗೆ ತಲುಪಿಸಲಾಗಿದೆ

Get real time updates directly on you device, subscribe now.

Comments are closed.

error: Content is protected !!