ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ ಸಾಧಕರಿಗೆ ಸನ್ಮಾನ ಗೌರವ
Koppal
ಹಾಸನದಲ್ಲಿ ಜರುಗಿದ 13 ವರ್ಷದೊಳಗಿನ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಚೆಸಫಿಡೆ ರೇಟಿಂಗನಲ್ಲಿ 1524 ಶ್ರೇಣಿ ಪಡೆದ ಕೊಪ್ಪಳದ ಕುಮಾರಿ ಯಶ್ವಿ ರಾಕೇಶ ರಾವಲ್ ವಯಸ್ಸು 12 ವರ್ಷ ಹಾಗೂ ಕಲಬುರಗಿಯಲ್ಲಿ ಜರುಗಿದ 17 ವರ್ಷದೊಳಗಿನ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಚೆಸ್ ಫಿಡೇ ರೇಟಿಂಗನಲ್ಲಿ ಕ್ಲಾಸಿಕ್ 1471 ಮತ್ತು ರಾಫಿಡ್ ರೇಟಿಂಗ್ 1460 ಶ್ರೇಣಿ ಪಡೆದ ಕುಷ್ಟಗಿ ತಾಲೂಕಿನ ಜಹಗೀರ ಗುಡದೂರು ಗ್ರಾಮದ ಅಮರನಾಥ ಬಸನಗೌಡ ರಾಮಶೆಟ್ಟಿ ವಯಸ್ಸು 8 ವರ್ಷ ಈ ಚಿಕ್ಕ ವಯಸ್ಸಿನ ಕ್ರೀಡಾ ಸಾಧಕರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ಎಸ್. ತಂಗಡಗಿ ಅವರು ಸನ್ಮಾನಿಸಿ ಗೌರವಿಸಿದರು.