ಕನ್ನಡದ ಅಸ್ಮಿತೆಗೆ ಶಕ್ತಿ ಬೇಕಾಗಿದೆ -ಸಿ ವಿ ಚಂದ್ರಶೇಖರ್

0

Get real time updates directly on you device, subscribe now.

ಕೊಪ್ಪಳ: ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಶಕ್ತಿ ಕರ್ನಾಟಕಕ್ಕೆ ಬೇಕಾಗಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಹೇಳಿದರು.

ಜೆಡಿಎಸ್ ಪಕ್ಷ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.

“ಭಾಷಾವಾರು ಪ್ರಾಂತ್ಯಗಳು ರಚನೆಯಾದ ನಂತರ ರಾಜ್ಯಗಳಿಗೆ ಅಸ್ಮಿತೆ ಸಿಕ್ಕಿದೆ. ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಏಕೀಕರಣಗೊಳಿಸಿದ್ದು ಕನ್ನಡ ಭಾಷೆ ಹಾಗೂ ಸಂಸ್ಕೃತಿ. ಕನ್ನಡ ಇಲ್ಲದಿದ್ದರೆ ಕರ್ನಾಟಕವೂ ಇಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಹೀಗಾಗಿ ಕನ್ನಡದ ಅಸ್ಮಿತೆಯನ್ನು ಬಲಪಡಿಸುವ ಶಕ್ತಿ ಇದ್ದರೆ ಮಾತ್ರ ಕರ್ನಾಟಕ ಬೆಳವಣಿಗೆ ಕಾಣಲು ಸಾಧ್ಯ,” ಎಂದರು.

ನೆರೆಯ ಆಂಧ್ರ ಪ್ರದೇಶ, ತೆಲಂಗಾಣ, ಗೋವಾ, ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷಗಳು ಪ್ರಬಲವಾಗಿವೆ. ಕರ್ನಾಟಕವನ್ನು ಸಮಗ್ರವಾಗಿ ಬಿಂಬಿಸುವ ಕೆಲಸವನ್ನು  ಮಾಡುತ್ತಾ ಬಂದಿರುವುದರಿಂದ ಜೆಡಿಎಸ್ ಕನ್ನಡಿಗರ ಅಸ್ಮಿತಿಯಾಗಿದೆ. ಪಕ್ಷಕ್ಕೆ ಹೆಚ್ಚಿನ ಬಲ ಸಿಕ್ಕರೆ ಅದು ಕರ್ನಾಟಕದ ರಕ್ಷಣೆಗೆ ನೆರವಾಗಲಿದೆ. ಭಾರತೀಯತೆಯನ್ನು ಆಚರಿಸುತ್ತದೆ ಕನ್ನಡತನವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಿದೆ ಎಂದರು.

ಕನ್ನಡ ಶಾಲೆಗಳ  ಹಾಗೂ ಗಡಿನಾಡು ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರಕಾರ ವಿಶೇಷ ಯೋಜನೆ ಅನುಷ್ಠಾನಗೊಳಿಸಬೇಕು. ವೃತ್ತಿಪರ ಕೋರ್ಸ್ ಗಳನ್ನು ಕನ್ನಡದಲ್ಲಿ ಕಲಿಸಲು ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಕನ್ನಡ ಅಂಕಿಗಳನ್ನು ವ್ಯಾಪಕವಾಗಿ ಬಳಸಲು ಉತ್ತೇಜಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಶಾಲೆ ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಕನ್ನಡ ಶಿಕ್ಷಕರ ಹುದ್ದೆಯನ್ನು ಈ ಕೂಡಲೇ ಭರ್ತಿ ಮಾಡಬೇಕು. ಎಲ್ಲಾ ಸಂಘಟನೆಗಳೊಂದಿಗೆ ಜೆಡಿಎಸ್ ಪಕ್ಷ ಜೊತೆಗೂಡಿ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ಸಿಗುವಂತೆ ನೋಡಿಕೊಳ್ಳುವ ಕೆಲಸ ಮಾಡಲಿದೆ. ಬೇರೆ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಪೀಠಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುರೇಶ್ ಭೂಮರಡ್ಡಿ ಹೇಳಿದರು.

The 70th Kannada Rajyotsava was celebrated at the JDS party district office in Koppal on Saturday.

ಕನ್ನಡ ಭಾಷೆಗೆ ಶಕ್ತಿ ತುಂಬಲು ಕರ್ನಾಟಕ ಸರಕಾರ ಹೊರಡಿಸಿದ ಅನೇಕ ಆದೇಶಗಳಿಗೆ ಕೊಪ್ಪಳ ಕಾರಣವಾಗಿದೆ ಎಂದು ಒಬಿಸಿ ಜಿಲ್ಲಾಧ್ಯಕ್ಷರಾದ ಕರಿಯಪ್ಪ ಹಾಲವರ್ತಿ ಹೇಳಿದರು.

ಜೆಡಿಎಸ್ ಪಕ್ಷ ಮಾತ್ರ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಪ್ರಾದೇಶಿಕ ಪಕ್ಷ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಕರ್ನಾಟಕಕ್ಕೆ ನ್ಯಾಯ ಸಿಗಲು ಸಾಧ್ಯ ಎಂದು ಜಿಲ್ಲಾ ವಕ್ತಾರರಾದ ಮಲ್ಲನಗೌಡ ಕೋನನಗೌಡ್ರು,  ತಾಲೂಕ ಅಧ್ಯಕ್ಷರಾದ ವೀರೇಶ್ ಗೌಡ್ರು,  ಉಪಾಧ್ಯಕ್ಷರಾದ ಮೂರ್ತ್ಯಪ್ಪ ಗಿಣಿಗೇರಿ, ನೇಕಾರರ ಜಿಲ್ಲಾಧ್ಯಕ್ಷ ಮಾರುತಿ ಪೇರ್ಮಿ, ಸಂಸ್ಕೃತಿ ವಿಭಾಗದ ಜಿಲ್ಲಾಧ್ಯಕ್ಷರಾದ ಮಂಜುನಾಥ್ ಸೊರಟೂರು, ನಗರ ಅಧ್ಯಕ್ಷರಾದ ಸೋಮನಗೌಡ ಹೊಗರನಾಳ,ಎಸ್. ಟಿ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ್ ಡಂಬ್ರಳ್ಳಿ, ಶಿವಕುಮಾರ್ ಏಣಗಿ, ಮಾರುತಿಗೌಡ, ಗಂಗಾಧರ್ ವಸ್ತ್ರದ, ರವಿ ಮೇದರ್, ಆನಂದ ಕರ್ಕಿಹಳ್ಳಿ, ಸುರೇಶ ದದೆಗಲ್, ಮಲ್ಲೇಶ್ ಬೇಳೂರು, ಮಹೇಶ್ ಅಗಳಕೇರಿ, ಮಹೇಶ್ ಕಂದಾರಿ, ರಾಮು ರಾಠೋಡ, ಸಿದ್ದು ಡಂಬ್ರಳ್ಳಿ, ಪ್ರಜ್ವಲ್ ರೆಡ್ಡಿ ಇತರರು ಉಪಸ್ಥಿತರಿದ್ದರು.

 

ಕೊಪ್ಪಳದ ಜೆಡಿಎಸ್ ಪಕ್ಷದ ಜಿಲ್ಲಾ ಕಛೇರಿಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಶನಿವಾರ ಆಚರಿಸಲಾಯಿತು.

Get real time updates directly on you device, subscribe now.

Leave A Reply

Your email address will not be published.

error: Content is protected !!