ಕಾಂಗ್ರೆಸ್ ಕಛೇರಿಯಲ್ಲಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ

Get real time updates directly on you device, subscribe now.

 

ಕೊಪ್ಪಳ: ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ೪೧ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಜರುಗಿತು.


ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಜ್ಯೋತಿ ಎಂ. ಗೊಂಡಬಾಳ ಅವರು, ಇಂದಿರಾ ಗಾಂಧಿ ರೀತಿ ಮತ್ತೋರ್ವ ಪ್ರಧಾನಿ ಪಡೆಯುವದು ಕಷ್ಟಸಾಧ್ಯ, ಅವರಂತೆ ಅವರ ಮೊಮ್ಮಗ ಇಂದು ದೇಶದ ಸರ್ವ ಜನರ ಹಿತಕಾಯುವ ಕೆಲಸ ಮಾಡುತ್ತಿದ್ದಾರೆ, ಅವರ ಮೂಲಕ ಮತ್ತೊಮ್ಮೆ ಇಂದಿರಾ ಗಾಂಧಿ ಅವರ ಆಡಳಿತ ನೋಡಬಹುದು. ದೇಶದ ಪ್ರಗತಿಯನ್ನು ಉನ್ನತಮಟ್ಟಕ್ಕೆ ಕರೆದೊಯ್ದ ಅವರ ಆಡಳಿತ ಸಾರ್ವಕಾಲಿಕ ಮಾದರಿ ಎಂದರು.
ಮಹಿಳಾ ಮುಖಂಡರಾದ ಕಿಶೋರಿ ಬೂದನೂರ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಾ ಇಟ್ಟಂಗಿ ಮತ್ತು ಅಕ್ಬರ್ ಪಾಶಾ ಪಲ್ಟನ್, ನಗರಸಭೆ ಸದಸ್ಯರಾದ ಬಸಯ್ಯ ಹಿರೇಮಠ, ಚನ್ನಪ್ಪ ಹಂಚಿನಾಳ, ಸರಸ್ವತಿ, ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸೆಲ್ ಸಂಯೋಜಕ ಸುರೇಶ ದಾಸರಡ್ಡಿ, ಮುಖಂಡರಾದ ಮಾನವಿ ಪಾಶಾ, ಅಜ್ಜಪ್ಪಸ್ವಾಮಿ, ನಾಸೀರ ಹುಸೇನ್, ರೇಖಾ, ಅಂಜಲಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!