ಮಕ್ಕಳಿಗೆ ಕೇವಲ ಪಾಠದಿಂದ ಬದುಕು ರೂಪಗೊಳ್ಳದು : ಗೊಂಡಬಾಳ

0

Get real time updates directly on you device, subscribe now.

 

ಕೊಪ್ಪಳ: ಮಕ್ಕಳು ತಮ್ಮ ಶಾಲಾ ಕಾಲೇಜು ಶಿಕ್ಷಣದೊಂದಿಗೆ ಇತರೆ ಪಠ್ಯೇತರ ಚಟುವಟಿಕೆಗಳು ಮತ್ತು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಮತ್ರ ಚೈತನ್ಯಯುತ ಬದುಕು ರೂಪಗೊಳ್ಳುತ್ತದೆ ಎಂದು ಬಾಲಕರ ಸರಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅನಿಸಿಕೆ ವ್ಯಕ್ತಪಡಿಸಿದರು.

ಅವರು ನಗರದ ಬಾಲಕರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ಈಚೆಗೆ ಸ್ವಲ್ಪಮಟ್ಟಿನ ಕ್ರೀಡಾ ಉತ್ಸಾಹ ಬರುತ್ತಿದೆ, ಮಕ್ಕಳು ಕಾಲೇಜು ಹಂತದಲ್ಲಿ ಕ್ರೀಡೆಗೆ ಆದ್ಯತೆ ನೀಡಲು ಸಾಧ್ಯವಾಗುತ್ತಿಲ್ಲ, ಇಲಾಖೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಬೇಕು, ಅದಕ್ಕೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ಒತ್ತಾಯಿಸಿದರು.Children’s lives are not shaped by lessons alone: ​​Gondabala

ಮಕ್ಕಳು ಇಂದು ಮೊಬೈಲ್ ಗೀಳಿಗೆ ಬಿದ್ದಿದ್ದು, ಮೋಬೈಲ್‌ನಲ್ಲಿಯೇ ಕ್ರೀಡೆಯಲ್ಲಿ ತೊಡಗಿ ಲಕ್ಷಾಂತರ ರುಪಾಯಿ ಹಾನಿ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ದೈಹಿಕವಾಗಿ ದುರ್ಬಲಗೊಳ್ಳುತ್ತಿದ್ದಾರೆ. ಕೇವಲ ಶಿಷ್ಟಾಚಾರಕ್ಕೆ ಕ್ರೀಡಾಕೂಟ, ಪಠ್ಯೇತರ ಚಟುವಟಿಕೆ ಎನ್ನುವಂತಾಗಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಹೆಚ್. ಎಸ್. ದೇವರಮನಿ ಅಧ್ಯಕ್ಷತೆವಹಿಸಿದ್ದರು, ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ವೀರಶೇಖರ ಪತ್ತಾರ, ಗವಿಸಿದ್ಧಪ್ಪ ದೊಡ್ಡಮನಿ, ಪತ್ರೆಪ್ಪ ಛತ್ತರಕಿ, ವೆಳ್ಳಿಮಾ, ಸುದಿಂದ್ರರಾವ್ ಕುಲಕರ್ಣಿ, ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್, ಎಸ್. ಎ. ರಜಪೂತ, ಕೃಷ್ಣರಾವ್ ದೇಸಾಯಿ, ಬಸವನಗೌಡ ಗೌಡ್ರ, ಜ್ಯೋತಿ ಹಿರೇಮಠ, ಸೈಯದ್ ಸಾದತ್ ಅಲಿ ಇದ್ದರು. ತಾಲೂಕಿನ ೩೦ ಕಾಲೇಜುಗಳ ವಿದ್ಯಾರ್ಥಿಗಳು ೧೧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

The Government Children’s Welfare Department believes that children can lead a vibrant life if they engage in extracurricular activities and sports along with their school and college education.

Get real time updates directly on you device, subscribe now.

Leave A Reply

Your email address will not be published.

error: Content is protected !!