ಕೊಪ್ಪಳ ನಗರದ ಗೇಟ್ ಸಂ.66ರ ಮೇಲ್ಸೇತುವೆಗೆ ಹೆಚ್ಚುವರಿ 13.78 ಕೋಟಿ ಮಂಜೂರು: ಸಂಸದ ಕರಡಿ ಸಂಗಣ್ಣ ಹರ್ಷ
ಕೊಪ್ಪಳ : ಕೊಪ್ಪಳ ನಗರದ ಕುಷ್ಟಗಿ ರಸ್ತೆಯ ರೈಲ್ವೆ ಗೇಟ್ ಸಂಖ್ಯೆ 66ರ ಮೇಲ್ವೇತುವೆಗೆ ಕೇಂದ್ರ ಸರ್ಕಾರದ ಹೆಚ್ಚುವರಿ 13.78 ಕೋಟೆ ರೂ.ಗಳು ಮಂಜೂರಾಗಿರುವುದಕ್ಕೆ ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ ನಗರದ ರೈಲ್ವೆ ಗೇಟ್ ಸಂ.66ರ ಮೇಲ್ವೇತುವೆ ಕಾಮಗಾರಿಗೆ ಈ ಹಿಂದೆ 30.50 ರೂ. ಮಂಜೂರಾಗಿ ಕಾಮಗಾರಿ ಪ್ರಾರಂಭವಾಗಿರುತ್ತದೆ. ಆದರೆ ಸಾರ್ವಜನಿಕರ ಬೇಡಿಕೆಯಂತೆ ಈ ನಕ್ಷೆ ಬದಲಾವಣೆ ಮಾಡಿದ ಹಿನ್ನೆಲೆಯಲ್ಲಿ ಅಂದಾಜು ಮೊತ್ತ ಪರಿಷ್ಕೃತಗೊಂಡ ಕಾರಣ ಹೆಚ್ಚುವರಿ ಅನುದಾನ ಬಿಡುಗಡೆಗಾಗಿ ಕಳೆದ ತಿಂಗಳು ಜುಲೈ 23ರಂದು ಕೇಂದ್ರ ರೈಲ್ವೆ ಸಚಿವರಿಗೆ ಮನವಿಯನ್ನು ಸಲ್ಲಿಸಿ, ಅನುದಾನ ಬಿಡುಗಡೆ ಮಾಡಿ ಮೇಲ್ವೇತುವೆ ಕಾಮಗಾರಿ ಪೂರ್ಣಗೊಳ್ಳಲು ಸಹಕರಿಸಬೇಕೆಂದು ವಿನಂತಿಸಿಕೊಳ್ಳಲಾಗಿತ್ತು.
ಇದಕ್ಕೆ ಸಚಿವರು, ಬೋರ್ಡ ಅಧ್ಯಕ್ಷರು ಸ್ಪಂದಿಸಿ 13.78 ಕೋಟಿ ರೂ.ಗಳ ಅನುದಾನವನ್ನು ಆಗಸ್ಟ್ 30ರಂದು ಬಿಡುಗಡೆ ಮಾಡಿರುತ್ತಾರೆ. ಇದರಿಂದಾಗಿ ಕಾಮಗಾರಿ ವೇಗ ಪಡೆದುಕೊಂಡು ಡಿಸೆಂಬರ-2023ರ ಒಳಗಾಗಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕಾಗಿ ನೀಡಲಾಗುವುದು.
ಈ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿರುವ ಪ್ರಧಾನ ಮಂತ್ರಿಗಳಿಗೂ, ಕೇಂದ್ರ ರೈಲ್ವೆ ಮಂತ್ರಿಗಳು ಹಾಗೂ ರೈಲ್ವೆ ಮಂಡಳಿ ಮತ್ತು ಹಿರಿಯ ಅಧಿಕಾರಿಗಳಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಂಸದರಾದ ಕರಡಿ ಸಂಗಣ್ಣ ಅವರು ತಿಳಿಸಿದ್ದಾರೆ.
Comments are closed.