ಅಸೀಫ್‌ಅಲಿಯವರನ್ನು ರಾಜ್ಯ ವಕ್ಪ್ ಮಂಡಳಿಗೆ ಅಧ್ಯಕ್ಷರಾಗಿ ನೇಮಕಗೊಳಿಸಿ : ಮಹ್ಮದ್ ಜಿಲಾನ್ ಕಿಲ್ಲೇದಾರ ಒತ್ತಾಯ
ಕೊಪ್ಪಳ : ರಾಜ್ಯ ವಕ್ಫ್ ಮಂಡಳಿಗೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದವರಾದ ಹಿರಿಯ ನ್ಯಾಯವಾದಿ ಅಸೀಫ್‌ಅಲಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಅಲ್ಪಸಂಖ್ಯಾತ, ಹಜ್ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್‌ಖಾನ್ ಅವರನ್ನು ಕೊಪ್ಪಳ ಮುಸ್ಲಿಂ ಯೂನಿಟಿ ಅಧ್ಯಕ್ಷ ಮಹ್ಮದ್ ಜಿಲಾನ್ ಕಿಲ್ಲೇದಾರ ಒತ್ತಾಯಿಸಿದ್ದಾರೆ.
ಅವರು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿದಿದೆ. ಈ ಪಕ್ಷಕ್ಕೆ ಮುಸ್ಲಿಂ ಸಮುದಾಯವು ಅತಿಹೆಚ್ಚು ಮತಗಳನ್ನು ನೀಡಿದ್ದರಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದದ್ದು ಸಂತೋಷದ ವಿಷಯ. ಅದೇ ರೀತಿಯಾಗಿ ಮುಸ್ಲಿಂ ಸಮುದಾಯವು ತಮ್ಮ ಸರ್ಕಾರದ ಮೇಲೆ ಬಹಳಷ್ಟು ಭರವಸೆಗಳನ್ನು ಇಟ್ಟಿದೆ.ಆದರೆ, ರಾಜ್ಯದ ಮುಸ್ಲಿಮರಿಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಸಮಪಾಲು ನೀಡುವಲ್ಲಿ ತಮ್ಮ ನೇತೃತ್ವದ ಸರ್ಕಾರವು ಮೀನ ಮೇಷ ಎಣಿಸುತ್ತಿದೆ, ಕಳೆದ ಎಮ್.ಎಲ್.ಸಿ. ಚುನಾವಣೆಯಲ್ಲಿ ಆರು ಸದಸ್ಯರ ಆಯ್ಕೆಯಲ್ಲಿ ಒಬ್ಬ ಮುಸ್ಲಿಮರಿಗೂ ಅವಕಾಶ ನೀಡದೇ ಇರುವುದು ಬೇಸರದ ಸಂಗತಿ. ಅದೇ ರೀತಿಯಾಗಿ ಕೆ.ಪಿ.ಎಸ್.ಸಿ. ಸದಸ್ಯರ ನೇಮಕಾತಿಯಲ್ಲಿಯೂ ಮುಸ್ಲಿಂ ಪ್ರತಿನಿಧಿಗಳನ್ನು ಕಡೆಗಣಿಸಲಾಗಿದೆ. ಮುಸ್ಲಿಮ್ ಸಮುದಾಯವನ್ನು ಕೇವಲ ಓಟ್‌ಬ್ಯಾಂಕ್ ಆಗಿ ಮಾತ್ರ ಉಪಯೋಗಿಸಿಕೊಳ್ಳುವ ಮತ ರಾಜಕಾರಣದ ನಿರ್ಧಾರವೇ ಎಂಬುದು ಗೊತ್ತಾಗುತ್ತಿಲ್ಲ. ಆದರೆ ಈಗ ಸದ್ಯ ಸೆಪ್ಟೆಂಬರ್ ೪ ರಂದು ರಾಜ್ಯ ವಕ್ಫ್ ಮಂಡಳಿಗೆ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಚುನಾವಣೆ ರಾಜ್ಯ ವಕ್ಷ ಮಂಡಳಿ ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಉತ್ತರ ಕರ್ನಾಟಕ ಭಾಗದ ಯಾರೊಬ್ಬರಿಗೂ ಅಧ್ಯಕ್ಷರಾಗುವ ಅವಕಾಶ ಸಿಗದೆ ವಂಚಿತರಾಗಿದ್ದಾರೆ. ಆದರೆ ಈ ಬಾರಿ ಉತ್ತರ ಕರ್ನಾಟಕ ಭಾಗದಿಂದ ಕೊಪ್ಪಳ ಜಿಲ್ಲೆಯ ಹಿರಿಯ ವಕೀಲರು, ಹಾಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರೂ ಆಗಿರುವ ಆಸಿಫ್‌ಅಲಿ ವಕೀಲರು ಇವರನ್ನು ಅಧ್ಯಕ್ಷರನ್ನಾಗಿಸಿ ನೇಮಕಗೊಳಿಸಬೇಕು ಉತ್ತರ ಕರ್ನಾಟಕ ಭಾಗದ ಜನರಿಗೆ ಆಗುತ್ತಿರುವ ಅನ್ಯಾಯ ಮತ್ತು ಶೋಷಣೆಯನ್ನು ತಪ್ಪಿಸಬೇಕು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಅವಧಿಯಲ್ಲಿ ಒಬ್ಬ ಮುಸ್ಲಿಮನೂ ಸಹ ಎಮ್.ಎಲ್.ಸಿ. ಮತ್ತು ಕೆ.ಪಿ.ಎಸ್.ಸಿ.ಗೆ ಸದಸ್ಯರನ್ನು ನೇಮಿಸದೆ ಅನ್ಯಾಯವೆಸಗಲಾಗಿದೆ. ಇದೆ ದಾರಿಯನ್ನು ಈಗ ತಾವು ಅನುಸರಿಸಬಾರದು. ಸಿಕ್ಕಿರುವ ಕರ್ನಾಟಕ ವಕ್ಪ ಮಂಡಳಿ ಅಧ್ಯಕ್ಷ ಸ್ಥಾನದ ಅವಕಾಶವನ್ನು ಉತ್ತರ ಕರ್ನಾಟಕದ ಪಾಲಿಗೆ ಬಿಟ್ಟುಕೊಟ್ಟು ಮುನಿದಿರುವ ಮುಸ್ಲಿಂ ಸಮುದಾಯದ ಮನಸ್ಸುಗಳಿಗೆ ಮುಲಾಮು ಹಚ್ಚುವ ಕೆಲಸ ಮಾಡಬೇಕೆಂದು ಮತ್ತು ಸಾಮಾಜಿಕ ನ್ಯಾಯದ ದ್ಯೇಯಕ್ಕೆ ಬದ್ಧರಾಗಬೇಕಾಗಿ ರಾಜ್ಯದ ಮುಸ್ಲಿಮರ ಪರವಾಗಿ ಕರ್ನಾಟಕ ಮುಸ್ಲಿಮ್ ಯೂನಿಟಿ ರಾಜ್ಯ ಸಮಿತಿಯು ಒತ್ತಾಯಿಸುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೊಪ್ಪಳ ತಾಲೂಕಾ ಮುಸ್ಲಿಂ ಯೂನಿಟಿ ಅಧ್ಯಕ್ಷ ಫಕ್ರುಸಾಬ ನಧಾಫ್, ಮುಖಂಡರಾದ ಅಜರತ್‌ಅಲಿ, ಅಜೀಜ್ ಮಾನ್ವಿಕರ್, ನಜೀರ್ ಅಹಮ್ಮದ್ ಉಪಸ್ಥಿತರಿದ್ದರು
Comments are closed.