ಕವಿ ಮಕಾನದಾರರಿಗೆ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ
ಗದಗ. 31-ನಿರಂತರ ಪ್ರಕಾಶನದ ಮೂಲಕ ಮೌಲ್ಯಯುತ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ಯಾಗಿ ನೀಡುವ ಜೊತೆಗೆ ಸಾಹಿತ್ಯ ಸಂಘಟನೆ, ಯುವ ಬರಹಗಾರರಿಗೆ ಉತ್ತೇಜನ ನೀಡುತ್ತಿರುವ ಕರ್ನಾಟಕ ರಾಜ್ಯ ಸರ್ವೋತ್ತಮ ಸೇವಾ ಪುರಸ್ಕೃತ ಹಿರಿಯ ಸಾಹಿತಿ ಎ.ಎಸ್. ಮಕಾನದಾರ ಜಿಲ್ಲಾ ರಾಜ್ಯೋತ್ಸವಪುರಸ್ಕಾರಕ್ಕೆ ಭಾಜನ ರಾಗಿದ್ದಾರೆ. ಕವಿ ಮಕಾನದಾರ ಅವರ ಮೂರುವರೆ ದಶಕದ ಸಾಹಿತ್ಯ ಸೇವೆ ಪರಿಗಣಿಸಿ ಗದಗ ಜಿಲ್ಲಾಡಳಿತದ ವತಿಯಿಂದ 70ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಸುಸಂದರ್ಭದಲ್ಲಿ ಕಾನೂನು ಮತ್ತು ಸಂಸದೀಯ ಖಾತೆಗಳಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್ ಕೆ ಪಾಟೀಲ್ ಮತ್ತು ಜಿಲ್ಲೆಯ ಜನಪ್ರತಿನಿದಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಸಮ್ಮುಖದಲ್ಲಿ ಗೌರವ ಸಮ್ಮಾನ ಜರುಗಲಿದೆ

District Rajyotsava Award for poet Makanadara