ನೆಮ್ಮದಿ ಜೀವನಕ್ಕೆ ಶರಣರ ಚಿಂತನೆ ಅಗತ್ಯ : ಜೀರು ಬಸವರಾಜ ಹೇಳಿಕೆ

0

Get real time updates directly on you device, subscribe now.

ಬಳ್ಳಾರಿ / ಕಂಪ್ಲಿ : ನೆಮ್ಮದಿ ಜೀವನಕ್ಕೆ ಶರಣರ ಚಿಂತನೆ ಅಗತ್ಯ. ಈ ಬಗ್ಗೆ ಪ್ರತಿಯೊಬ್ಬರಲ್ಲಿ ಅರಿವು ಬೇಕು. ಒಳ್ಳೆಯ ವಿಚಾರ ಹಾಗೂ ಮೌಲ್ಯವನ್ನುತಿಳಿದುಕೊಳ್ಳಬೇಕು ಎಂದು ಓರುವಾಯಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಜೀರು ಬಸವರಾಜ ಹೇಳಿದರು.

ಗುರುವಾರ ಪಟ್ಟಣದ ಅಕ್ಕಮಹಾದೇವಿ ಮಹಿಳಾ ಮಂಡಳಿ ಅನುಭವ ಮಂಟಪದಲ್ಲಿ 183ನೇ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಹಮ್ಮಿಕೊಂಡಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿನ ಅಂಧಾನುಕರಣೆ ಹಾಗೂ ಮೌಢ್ಯಗಳ ವಿರುದ್ಧ ಜ್ಞಾನದ ಅರಿವನ್ನು ಮಾನವರಿಗೆ ಮೂಡಿಸುವಲ್ಲಿ ಶರಣರ ಆಧ್ಯಾತ್ಮಿಕ ಅನುಭಾವಿಕ ಚಿಂತನೆಗಳು ಅತ್ಯಗತ್ಯ. ಅಜ್ಞಾನದ ಅಂಧಕಾರ ದೂರ ಮಾಡಿ ಸುಜ್ಞಾನದ ಚಿಂತನೆಯನ್ನು ಮಾನವರಲ್ಲಿ ಮೂಡಿಸುವ ಕಾಯಕಕ್ಕೆ ಶರಣರ ಚಿಂತನೆಗಳು ದಾರಿದೀಪ. ಅನುಭಾವಿಕ ಆಧ್ಯಾತ್ಮಿಕ ಮೌಲ್ಯಗಳಿಗೆ ಅಪಾರವಾದ ಪ್ರಾಶಸ್ತ್ಯ ನೀಡುವುದು ಮತ್ತು ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಪವಿತ್ರವಾದ ಸಂಸ್ಕಾರಕ್ಕೆ ಕಾರಣೀಭೂತರಾಗಬೇಕು. ಏಕ ದೇವೋಪಾಸನೆಯಿಂದ ಧರ್ಮದ ಜ್ಞಾನದ ಗುರಿಯನ್ನು ತಲುಪಲು ಸಾಧ್ಯ ಎಂದು ತಿಳಿಸಿದರು.

ನಿವೃತ್ತ ಶಿಕ್ಷಕ ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಗೌಳೇರು ಶೇಖರಪ್ಪ, ಅರವಿ ಅನುಪಮ ವೇದಿಕೆ ಮೇಲಿದ್ದು ಮಾತನಾಡಿದರು.

ಪ್ರಮುಖರಾದ ಎಲಿಗಾರ್ ವೆಂಕಟರೆಡ್ಡಿ, ಎಸ್. ಡಿ. ಬಸವರಾಜ, ಎಸ್. ರಾಮು, ಮಲ್ಲೇಶ, ಬಿ.ಎಂ. ರುದ್ರಯ್ಯ, ಅಶೋಕ್ ಕುಕನೂರು, ಚಂದ್ರಯ್ಯ ಸೊಪ್ಪಿಮಠ, ಮುದುಕಪ್ಪ, ಎಚ್. ನಾಗರಾಜ, ಸಜ್ಜೇದ್ ವೀರಭದ್ರಪ್ಪ, ಅಂಬಿಗರ ಮಂಜುನಾಥ, ಎಸ್. ಶ್ಯಾಮ್ ಸುಂದರ, ಎ. ಹುಲುಗಪ್ಪ, ಬಿ. ಜಿಲಾನಸಾಬ್, ಅಕ್ಕಮಹಾದೇವಿ ಮಹಿಳಾ ಮಂಡಲದ ಪದಾಧಿಕಾರಿಗಳು ಸೇರಿದಂತೆ ಇತರರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!