ಭ್ರಷ್ಟಾಚಾರ ದೇಶದ ದೊಡ್ಡ ಪಿಡುಗಾಗಿದೆ- ಉಪಲೋಕಾಯುಕ್ತ ಬಿ. ವೀರಪ್ಪ
ಕೊಪ್ಪಳ. ಅಕ್ಟೋಬರ್.:- ಭ್ರಷ್ಟಾಚಾರ ನಮ್ಮ ದೇಶದಲ್ಲಿ ದೊಡ್ಡ ಪಿಡುಗಾಗಿದ್ದು ಇದರ ನಿರ್ಮೂಲನೆಗೆ ಪ್ರತಿ ಮನೆಯಲ್ಲೊಬ್ಬರು ರಡಿಯಾಗಬೇಕಿದೆ ಎಂದು ಕರ್ನಾಟಕ ಲೋಕಾಯುಕ್ತದ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಹೇಳಿದರು.
ಅವರು ಗುರುವಾರ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಅಹವಾಲು. ಕುಂದುಕೊರತೆ. ದೂರು ವಿಚಾರಣೆ ಹಾಗೂ ಬಾಕಿ ಇರುವ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಭ್ರಷ್ಟಾಚಾರದ ಅರಿವು ಎಲ್ಲರಿಗೂ ಇರುವುದರ ಜೊತೆಗೆ ಅದರ ನಿರ್ಮೂಲನೆಗೆ ಈ ದೇಶದ ನಾಗರಿಕರು. ನೌಕರರು ಹಾಗೂ ಪ್ರಜೆಗಳು ಕೈಜೋಡಿಸಬೇಕಿದೆ. ಭ್ರಷ್ಟಾಚಾರ ನಿರ್ಮೂಲನೆ ಕುರಿತು ಹಲವಾರು ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದೆವೆ. ಅದು ಮಾಡುವುದು ಬೇಕಾ. ಅದು ನಮ್ಮ ರಕ್ತಗತವಾಗಿ ಬರಬೇಕು. ನಮ್ಮ ಸಂವಿಧಾನ ಎಲ್ಲರಿಗಿಂತಲ್ಲೂ ಶ್ರೇಷ್ಠವಾಗಿದ್ದು ಅದರ ಅಡಿಯಲ್ಲಿ ಸುಪ್ರೀಂ ಕೋರ್ಟ್. ಸರಕಾರಗಳು ಕೆಲಸ ಮಾಡುತ್ತಿವೆ. ಸಂವಿಧಾನ ಎಲ್ಲರಿಗೂ ತಾಯಿಯಾಗಿದೆ ಎಂದರು.
ಅನುಚ್ಛೇದ 21 ರ ಪ್ರಕಾರ ಎಲ್ಲರೂ ಗೌರವದಿಂದ ಬದುಕುವದಾಗಿದೆ ಮನುಷ್ಯ. ಪ್ರಾಣಿ. ನಿಸರ್ಗ ಹಾಗೂ ಎಲ್ಲಾ ಜೀವರಾಶಿಗಳು. ಪ್ರತಿಯೊಬ್ಬರು ಹೇಗೆ ಬದುಕಬೇಕು ಎಂಬುದನ್ನು ನಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಲೋಕಾಯುಕ್ತ ಸಂಸ್ಥೆ ಎಷ್ಟು ಬಲಿಷ್ಠವಾಗಿದೆ ಎಂದರೆ ಅದು ಯಾರನ್ನು ಬಿಟ್ಟಿಲ್ಲ. ಸಿಟ್ಟಿಂಗ್ ಸಿ.ಎಂ. ಸಚಿವರು ಮತ್ತು ಲೋಕಾಯುಕ್ತರನ್ನೆ ಮನೆಗೆ ಹೋಗುವ ಹಾಗೆ ಮಾಡಿದೆ. ನಾಗರಿಕರು ಸುಳ್ಳು ಕೇಸುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಡುತ್ತಿದ್ದಾರೆ ಇದಕ್ಕೆ ಅವಕಾಶ ಕೊಡಬಾರದು.ಸುಳ್ಳು ಕೇಸಿಗೆ 6 ತಿಂಗಳಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆಯಾಗುತ್ತದೆ. ನಿಜವಾದ ಸಮಸ್ಯೆಗಳ ದೂರುಗಳನ್ನು ಸಾರ್ವಜನಿಕರು ನೀಡಿ ಎಂದು ಹೇಳಿದರು.
ನಮಗೆ ಸ್ವಾತಂತ್ರ್ಯ ಬಂದು 79 ವರ್ಷಗಳಾಗಿದೆ ಇದಕ್ಕಾಗಿ ನಮ್ಮ ಪೂರ್ವಜರು ತಮ್ಮ ರಕ್ತವನ್ನೆ ಅರ್ಪಣೆ ಮಾಡಿದ್ದಾರೆ. ಕೋಟ್ಯಾಂತರ ಭಾರತೀಯರು ತಮ್ಮ ಪ್ರಾಣವನ್ನು ತ್ಯೆಜಿಸಿದ್ದಾರೆ. ಇಷ್ಟೆ ಅಲ್ಲ ನಾವು ಖುಷಿಯಾಗಿರಲು ನಮ್ಮ ಸೈನಿಕರು ನಮಗಾಗಿ ಗಡಿಯಲ್ಲಿ ಕಾಯುತ್ತ ತಮ್ಮ ಪ್ರಾಣವನ್ನೆ ಕಳೆದುಕೊಳ್ಳುತ್ತಿದ್ದಾರೆ. ಈ ದೇಶದ 80 ಪ್ರತಿಶತ ವಿದ್ಯಾವಂತರಲ್ಲಿ 90 ಪ್ರತಿಶತ ಭ್ರಷ್ಟರಾಗಿದ್ದಾರೆ. ನಮ್ಮ ದೇಶದಲ್ಲಿ ಭ್ರಷ್ಟಾಚಾರ ಕ್ಯಾನ್ಸರಗಿಂತ ಘೋರವಾಗಿದೆ. ಈ ಕ್ಷಣ ಮನುಷ್ಯ ಸತ್ತ ನಂತರ ಹೆಣ ಸಮಾಜ ಬದಲಾಗಬೇಕಿದೆ. ಚುನಾವಣೆ ಬಂದಾಗ ದುಡ್ಡು ತಗೊಂಡು ಮತ ಹಾಕುತ್ತೆವೆ. ನಮ್ಮ ಹಕ್ಕು ನಾವು ಮಾರಿಕೊಂಡಂತೆ ಅಲ್ಲವೆ. ಸ್ವಾತಂತ್ರ್ಯ ಬಂದರು ನಾವು ಗುಲಾಮರಾಗಿ ಬದುಕಬೇಕಾಗುತ್ತದೆ. ನಿಮ್ಮ ಹಕ್ಕನ್ನು ಮಾರಾಟ ಮಾರಬೇಡಿ ಎಂದರು.
ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯರು ಕೇಂದ್ರ ಸ್ಥಾನದಲ್ಲಿ ಇರುವಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಸರ್ಕೂಲರ್ ಇಶ್ಯೂ ಮಾಡಬೇಕು. ಆಸ್ಪತ್ರೆಗಲ್ಲಿ ಮಾತ್ರೆಗಳನ್ನು ಹೊರಡಯಿಂದ ತರಲು ರೋಗಿಗಳಿಗೆ ಬರೆದುಕೊಡಭಾರದು. ಪ್ರತಿದಿನ ಜಿಲ್ಲಾ ಆಸ್ಪತ್ರೆಗೆ 25 ಸಾವಿರ ರೂ. ಹಾಗೂ ತಾಲ್ಲೂಕು ಆಸ್ಪತ್ರೆಗೆ 10 ಸಾವಿರ ರೂ. ಮಾತ್ರೆಗಳಿಗಾಗಿಯೇ ನೀಡಲಾಗುತ್ತದೆ. ಅವುಗಳು ಆಸ್ಪತ್ರೆಯಲ್ಲಿ ಇರದಿದ್ದರೆ ಹೊರಗಡೆಯಿಂ ದ ತರಸಿ ರೋಗಿಗಳಿಗೆ ಕೊಡಬೇಕು. ಎ.ಪಿ.ಎಂ.ಸಿ ಹಾಗೂ ಕಟ್ಟಡ ಕಾರ್ಮಿಕರು ಮತ್ತು ನರೇಗಾ ಲೇಬರ್ ಹಾಗೂ ಡೆಲಿವರಿ ಬಾಯಗಳಿಗೆ ಇನ್ಸ್ಯೂರೆನ್ಸ ಮಾಡಿಸಬೇಕು. ಸಾರ್ವಜನಿಕರು ಕ್ಯೂನಲ್ಲಿ ಬಂದು ತಮ್ಮ ದೂರುಗಳನ್ನು ಸಲ್ಲಿಸಬೇಕೆಂದು ಹೇಳಿದರು.
ಸಾರ್ವಜನಿಕ ಅಹವಾಲು. ದೂರು ಹಾಗೂ ಬಾಕಿ ಇರುವ ಪ್ರಕರಣಗಳ ವಿಚಾರಣೆ ಕಾರ್ಯಕ್ರಮ. ಇದರಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳದ ಚಂದ್ರಶೇಖರ ಸಿ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ. ಕರ್ನಾಟಕ ಲೋಕಾಯುಕ್ತದ ವಿಚಾರಣೆ ಅಪರ ನಿಬಂಧಕರಾದ ಡಾ. ಕಸನಪ್ಪ ನಾಯ್ಕ, ರಮಾಕಾಂತ್ ಚವ್ಹಾಣ ಹಾಗೂ ಅರವಿಂದ ಎನ್.ವಿ. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮಹಾಂತೇಶ್ ಎಸ್. ದರಗದ, ರಾಯಚೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸತೀಶ್ ಎಸ್. ಚಿಟಾಗುಬ್ಬಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಹೇಮಂತಕುಮಾರ್, ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಅಹವಾಲು ಹಾಗೂ ದೂರುಗಳನ್ನು ಸಲ್ಲಿಸಲು ಬಂದ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗಿಯಾದರೂ.

